ಹುಬ್ಬಳ್ಳಿಯ ಜೂನಿಯರ್ ‘ ಶ್ರೇಯಾ ಘೋಷಾಲ್ ‘ ಹಾಡಿರುವ ಹಾಡುಗಳ ಒಂದು ಝಲಕ್

ಪ್ರಾರಂಭದಿಂದಲೂ ಅವಳಿಗೆ ಹಾಡು ಸಂಗೀತ ಎಂದರೆ ತುಂಬಾ ಪ್ರೀತಿ. ಮನೆಯಲ್ಲಿ ಎಲ್ಲರೂ ಅವಳಿಗೆ ತುಂಬಾ ಪ್ರೋತ್ಸಾಹ ಮಾಡುತ್ತಾರೆ. ವಿಶೇಷವೆಂದರೆ ಅವಳು ಹುಟ್ಟಿದ್ದು ಖ್ಯಾತ ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ಹುಟ್ಟಿದ ದಿನ. ಎಸ್. ಜಾನಕಿ ಅಮ್ಮ ಹಾಗೂ ಶ್ರೇಯಾ ಘೋಷಾಲ್ ಅವಳ ಮೆಚ್ಚಿನ  ಗಾಯಕಿಯರು. ಡಾ.ರಾಜ್‌ಕುಮಾರ ಹಾಗೂ ಹಂಸಲೇಖ ಎಂದರೆ ಅವಳಿಗೆ ತುಂಬಾ ಇಷ್ಟ. ಈಗಾಗಲೇ ಹಲವಾರು ಸ್ಟೇಜ್ ಶೋಗಳನ್ನು ನೀಡಿ ಜನರಿಂದ ಆಶಿರ್ವಾದ ಪಡೆದಿದ್ದಾಳೆ. ವಚನ, ಲಾಲಿಹಾಡು, ಜನಪದ ಗೀತೆ, ಚಿತ್ರಗೇತೆಗಳು, ಹಿಂದಿ ಹಾಡುಗಳು ಹೀಗೆ ಎಲ್ಲ ರೀತಿಯ ಹಾಡುಗಳನ್ನು ಹಾಡುತ್ತಾಳೆ. ಗದುಗಿನ ಸಂಗೀತ ಪುಣ್ಯಾಶ್ರಮದ ಪೂಜ್ಯ ಕಲ್ಲಯ್ಯಜ್ಜನವರಿಂದ, ಮೂರು ಸಾವಿರ ಮಠದ ಅಜ್ಜನವರು ಹಾಗೂ ಜ್ಞಾನಯೋಗ ಪುಣ್ಯಾಶ್ರಮದ ಬಸವಾನಂದ ಮಹಾಸ್ವಾಮಿುಗಳು ಇವಳ ಗಾಯನ ಮೆಚ್ಚಿ ಆಶಿರ್ವದಿಸಿದ್ದಾರೆ. ಗಾನ ದೇವರು ಡಾ.ಎಸ್.ಪಿ.ಬಾಲಸುಬ್ರಮಣ್ಯಂ, ಸ್ವರ ಋ ಹಂಸಲೇಖ ಮಹಾಗುರುಗಳು ಹಾಗೂ ಖ್ಯಾತ ಚಿತ್ರತಾರೆ ಶ್ರೀಮತಿ ಶೃತಿ, ಗಾಯಕಿ ಸಮಾ ಶಾಸ್ತ್ರಿಯವರಿಂದ ಆಶಿರ್ವಾದ ಪಡೆದಿದ್ದಾಳೆ.

Comments 0
Add Comment