Asianet Suvarna News Asianet Suvarna News

ಕಾಲೇಜು ಕ್ಯಾಂಪಸ್ಸಲ್ಲೇ ಗೆಳತಿಗೆ ಗುಂಡಿಕ್ಕಿ, ಸಾವಿಗೆ ಶರಣಾದ ವಿದ್ಯಾರ್ಥಿ

ಗೆಳತಿಯೊಂದಿಗೆ ಜಗಳವಾಡಿದ ಬಳಿಕ ವಿದ್ಯಾರ್ಥಿಯೊಬ್ಬ ಆಕೆಯನ್ನು ಗುಂಡಿಕ್ಕಿ ಕೊಂದು ಬಳಿಕ ತಾನೂ ಶೂಟ್‌ ಮಾಡಿಕೊಂಡು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ನೊಯ್ಡಾದ ಶಿವ ನಾಡಾರ್‌ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ.

Uttar Pradesh A student shot his girlfriend and killed himself at Shiva nadar VV campus noida akb
Author
First Published May 20, 2023, 8:45 AM IST | Last Updated May 20, 2023, 8:45 AM IST

ನವದೆಹಲಿ: ಗೆಳತಿಯೊಂದಿಗೆ ಜಗಳವಾಡಿದ ಬಳಿಕ ವಿದ್ಯಾರ್ಥಿಯೊಬ್ಬ ಆಕೆಯನ್ನು ಗುಂಡಿಕ್ಕಿ ಕೊಂದು ಬಳಿಕ ತಾನೂ ಶೂಟ್‌ ಮಾಡಿಕೊಂಡು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ನೊಯ್ಡಾದ ಶಿವ ನಾಡಾರ್‌ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ. ಕೊಲೆ ಘಟನೆ ವಿವಿಯ ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿದೆ. ಇಬ್ಬರೂ 3ನೇ ವರ್ಷದ ಬಿಎ ಸಮಾಜಶಾಸ್ತ್ರ ವಿದ್ಯಾರ್ಥಿಗಳಾಗಿದ್ದು ಆರೋಪಿ ಅನುಜ್‌ (21) ಹಾಗೂ ಆತನ ಕ್ಲಾಸ್‌ಮೇಟ್‌ ಸ್ನೇಹಾ ಚೌರಾಸಿಯಾ ಉತ್ತಮ ಸ್ನೇಹಿತರಾಗಿದ್ದರು. 

ಇವರು ಆಗಾಗ ಜಗಳವಾಡುತ್ತಿದ್ದರು ಎನ್ನಲಾಗಿದೆ. ಸದ್ಯ ವಿವಿಯಲ್ಲಿ ಬೇಸಿಗೆ ರಜೆ ಇದ್ದು ವಸತಿ ನಿಲಯಗಳಲ್ಲಿರುವ ಇಬ್ಬರು ಗುರುವಾರ ಮಧ್ಯಾಹ್ನ 1 ಗಂಟೆಗೆ ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರು ತಬ್ಬಿಕೊಂಡು ಮಾತನಾಡುತ್ತಿದ್ದಾಗ ಅನುಜ್‌ ನೀಡಿದ ಯಾವುದೋ ಉಡುಗೊರೆಯುನ್ನು ಸ್ನೇಹಾ ನಿರಾಕರಿಸಿದ್ದಾಳೆ. ಬಳಿಕ ಆಕೆಯ ಹೊಟ್ಟೆಗೆ ಅನುಜ್‌ ಗುಂಡು ಹಾರಿಸಿದ್ದು ಆಕೆ ನೆಲಕ್ಕುರುಳಿದ್ದಾಳೆ. ಬಳಿಕ ಪುರುಷರ ವಸತಿ ನಿಲಯದ ಕೋಣೆಗೆ ಹೋಗಿ ಅನುಜ್‌ ತಾನೂ ಶೂಟ್‌ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರ್ತ್‌ಡೇ ದಿನವೇ ಹೆಣವಾದ ಬಾಲೆ: ಕೇಕ್ ಕತ್ತರಿಸಿದ ಚಾಕ್‌ನಿಂದಲೇ ಗರ್ಲ್‌ಫ್ರೆಂಡ್ ಖೇಲ್ ಖತಂ

 Girl friend murder: ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿಯನ್ನೇ ಕೊಂದ ಪಾಪಿ

Latest Videos
Follow Us:
Download App:
  • android
  • ios