Asianet Suvarna News Asianet Suvarna News

ಟೆನಿಸ್ ಆಟಗಾರ್ತಿಯಿಂದಲೇ ತಾಯಿಯ ಹ*ತ್ಯೆ: ಕುಟ್ಟಾಣಿಯಿಂದ ಹೊಡೆದು ಕೊಂ*ದ ಅಪ್ರಾಪ್ತೆ

ಗುವಾಹಟಿಯಲ್ಲಿ ಒಬ್ಬ ಉದಯೋನ್ಮುಖ ಟೆನ್ನಿಸ್ ಆಟಗಾರ್ತಿ ತನ್ನ ತಾಯಿಯನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಯುವತಿ ತನ್ನ 40 ವರ್ಷದ ತಾಯಿಯನ್ನು ಕುಟ್ಟಾಣಿಯಿಂದ ಹೊಡೆದು ಸಾಯಿಸಿದ್ದಾಳೆ. ತಂದೆ ಟೆನ್ನಿಸ್ ಕೋಚ್ ಆಗಿದ್ದು, ಈ ಘಟನೆ ನಡೆದ ಸಮಯದಲ್ಲಿ ಅವರು ಕೆಲಸದಲ್ಲಿದ್ದರು.

emerging Tennis player turned m*urderer Guwahati Police Arrest minor daughter for Mother's M*urder in Chachal
Author
First Published Sep 28, 2024, 11:30 AM IST | Last Updated Sep 28, 2024, 11:30 AM IST

ಅಪ್ರಾಪ್ತ ಮಗಳೊಬ್ಬಳು ಹೆತ್ತಮ್ಮನನ್ನೇ  ಎಲೆಅಡಿಕೆ ಕುಟ್ಟುವ ಕಲ್ಲಿನಿಂದ (ಕುಟ್ಟಾಣಿ) ಹೊಡೆದು ಕೊಂದ ಆಘಾತಕಾರಿ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಹೀಗೆ ತಾಯಿಯನ್ನು ಕೊಲೆ ಮಾಡಿದ ಅಪ್ರಾಪ್ತ ಬಾಲಕಿ ಉದಯೋನ್ಮುಖ ಟೆನ್ನಿಸ್ ಪ್ಲೇಯರ್ ಆಗಿದ್ದಳು ಎಂದು ತಿಳಿದು ಬಂದಿದೆ. ಯುವತಿಯ ತಂದೆ ಟೆನ್ನಿಸ್ ಕೋಚರ್‌ ಆಗಿದ್ದು, ಸಂಜೆ ಅವರು ಕೋಚಿಂಗ್‌ ನೀಡುವುದಕ್ಕಾಗಿ ಡ್ಯೂಟಿಗೆ ತೆರಳಿದ ನಂತರ ಈ ದುರ್ಘಟನೆ ಸಂಭವಿಸಿದೆ. ತಾಯಿ ಮಗಳಿಗೆ ಮಾತಿಗೆ ಮಾತು ಬೆಳೆದು ಅದು ಕೊಲೆಯಲ್ಲಿ ಅಂತ್ಯವಾಗಿದೆ. ಅಪ್ರಾಪ್ತ ಮಗಳು ತನ್ನ 40 ವರ್ಷ ಪ್ರಾಯದ ಹೆತ್ತಬ್ಬೆಯನ್ನು ಕುಟ್ಟಾಣಿಯಿಂದ ಹೊಡೆದು ಸಾಯಿಸಿದ್ದಾಳೆ.  

ಗುವಾಹಟಿಯ ಚಚಲ್‌ ಪ್ರದೇಶದ ಪೂರ್ಣಿಮಾ ಮೆನ್ಸನ್‌ನಲ್ಲಿ ಬ್ಲಾಕ್‌ ಎನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ. ಟೆನ್ನಿಸ್‌ ಕೋಚರ್‌ ಆಗಿದ್ದ ಅಪ್ಪ ಡ್ಯೂಟಿಗೆ ಹೋದ ನಂತರ ಶುಕ್ರವಾರ ಸಂಜೆ 7.30ರ ಸಮಯಕ್ಕೆ ಅಮ್ಮ ಮಗಳ ಮಧ್ಯೆ ವಾಗ್ವಾದ ಶುರುವಾಗಿದೆ. ಈ ವೇಳೆ ತೀವ್ರವಾಗಿ ಕುಪಿತಗೊಂಡಿದ್ದ ಬಾಲಕಿ ತನ್ನ ಹೆತ್ತಮ್ಮ ಎಂಬುದನ್ನು ಕೂಡ ಯೋಚಿಸದೇ ಕುಟ್ಟಾಣಿಯಿಂದ ಅಮ್ಮ ಮಂಜುದೇವಿ ಸಾಯುವವರೆಗೂ ಹೊಡೆದು ಕೊಂದೇ ಬಿಟ್ಟಿದ್ದಾಳೆ. 

ಗುವಾಹಟಿಯಲ್ಲಿ ಬಾಂಬ್ ಇಟ್ಟು ಬಂದಿದ್ದ ಶಂಕಿತ ಉಗ್ರ ಬೆಂಗಳೂರಿನಲ್ಲಿ ಬಂಧನ!

ಅಪ್ಪ ಅಮ್ಮ, ಮಗಳು ಇದ್ದ ಪುಟ್ಟ ಕುಟುಂಬ ಇವರದಾಗಿತ್ತು. ತಂದೇ ದೀಪ್ ಚಂದ್‌ ಪ್ರಸಾದ್ ಟೆನ್ನಿಸ್ ಕೋಚರ್ ಆಗಿದ್ದು, ಇಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಜೊತೆಯಾಗಿ ಬದುಕುತ್ತಿದ್ದರು. ಘಟನೆಯ ಬಳಿಕ ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಅಪ್ರಾಪ್ತ ಮಗಳನ್ನು ಬಂಧಿಸಿದ್ದಾರೆ. ಈಗ ಪೊಲೀಸ್ ಕಸ್ಟಡಿಯಲ್ಲಿರುವ ಆಕೆಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಕೊಲೆಗೆ  ಮೊದಲು ಏನು ನಡೆಯಿತು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲಿ ಒಬ್ಬರೋ ಇಬ್ಬರೋ ಮಕ್ಕಳಿರುತ್ತಾರೆ. ಇರುವ ಒಂದು ಎರಡೋ ಮಕ್ಕಳನ್ನು ಪೋಷಕರು ಸ್ವಲ್ಪವೂ ಕಷ್ಟ ತೋರದಂತೆ ಸಾಕಿರುತ್ತಾರೆ. ಪರಿಣಾಮ ತಾಳ್ಮೆ, ಸಹನೆ, ಹೊಂದಾಣಿಕೆ ಎಂಬುದೇ ಮಕ್ಕಳಿಗಿರುವುದಿಲ್ಲ, ಪರಿಣಾಮ ಹೆತ್ತ ಪೋಷಕರನ್ನೇ ಮಕ್ಕಳು ಬಲಿ ಹಾಕುತ್ತಿದ್ದಾರೆ. ಮುದ್ದು ಮಾಡಿ ಸಾಕಿದ ಮಗಳ ಕೈಯಲ್ಲೇ ತಾಯಿ ಸಾವಿಗೀಡಾಗಿರುವುದು ನಿಜಕ್ಕೂ ವಿಧಿ ವಿಪರ್ಯಾಸವೇ ಸರಿ.

ಐಸಿಸ್‌ ಸೇರಲಿದ್ದ ಐಐಟಿ ವಿದ್ಯಾರ್ಥಿ ತೌಸೀಫ್‌ ಅಲಿ ಬಂಧನ

Latest Videos
Follow Us:
Download App:
  • android
  • ios