Asianet Suvarna News Asianet Suvarna News

ಗ್ಯಾಂಗ್ ರೇಪ್ ಘಟನೆ ಮಾಸುವ ಮುನ್ನವೇ ಮೈಸೂರಿನಲ್ಲಿ ಮತ್ತೊಂದು ಹೀನ ಕೃತ್ಯ

* ಮೈಸೂರಿನಲ್ಲಿ ಮತ್ತೆ ಕಾಮುಕರು ಅಟ್ಟಹಾಸ
* ಗ್ಯಾಂಗ್ ರೇಪ್ ಘಟನೆ ಮಾಸುವ ಮುನ್ನವೇ  ಮೈಸೂರಿನಲ್ಲಿ ಮತ್ತೊಂದು ಹೀನ ಕೃತ್ಯ
* ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಹಲ್ಲೆ ಮಾಡಿ ಪರಾರಿ

One More attempt to rape On young woman at Mysuru On Sept 3rd rbj
Author
Bengaluru, First Published Sep 3, 2021, 7:09 PM IST
  • Facebook
  • Twitter
  • Whatsapp

ಮೈಸೂರು, (ಸೆ.03): ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಘಟನೆ ಮಾಸುವ ಮುನ್ನವೇ  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿದೆ.

ಮೈಸೂರಿನಲ್ಲಿ ಮತ್ತೆ ಕಾಮುಕರು ಅಟ್ಟಹಾಸ ಮೆರೆದಿದ್ದು, ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಹಲ್ಲೆ ಮಾಡಿದ ಘಟನೆ ಸ್ಟಡಿಹೌಸ್ ಬಳಿ ನಡೆದಿದೆ. 

ಮತ್ತಿಬ್ಬರು ರೇಪಿಸ್ಟ್‌ಗಳ ಶೋಧಕ್ಕೆ ತ.ನಾಡಿಗೆ ಪೊಲೀಸರು

ಹಲ್ಲೆಗೊಳಗಾದ ಯುವತಿಯನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಸ್ಟಡಿ ಹೌಸ್ ಒಳಗೆ ಪ್ರವೇಶಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಹಲ್ಲೆಗೈದು ಪರಾರಿಯಾಗಿದ್ದಾರೆ ಎಂದು ಎನ್ನಲಾಗಿದೆ. 

ಸ್ಟಡಿ ಹೌಸ್ ನಲ್ಲಿ ಆಂಧ್ರಪ್ರದೇಶದ 7 ಮಂದಿ ವಿದ್ಯಾರ್ಥಿನಿಯರು ಇದ್ದರು. ಘಟನೆ ನಡೆದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತರಗತಿಗೆ ಹೋಗಿದ್ದರು. ವಿದ್ಯಾರ್ಥಿನಿ ಒಬ್ಬಳೇ ಇರುವುದನ್ನು ಗಮನಿಸಿ ಅತ್ಯಾಚಾರಕ್ಕೆ ಯತ್ನಿಸಿ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ವಿಷಯ ತಿಳಿದು ಸ್ಥಳಕ್ಕೆ ನರಸಿಂಹರಾಜ ಠಾಣೆಯ ಪೊಲೀಸರು ಹಾಗೂ  ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು, ತನಿಖೆ ನಡೆಸಿದ್ದಾರೆ.

Follow Us:
Download App:
  • android
  • ios