ನವದೆಹಲಿ(ಸೆ.02) ಹೆಂಡತಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದ ಎಂದು ಪಕ್ಕದ ಮನೆಯವನ ಪ್ರಶ್ನೆ ಮಾಡಲು ಹೋದ ಗಂಡ ದಾರುಣ ಹತ್ಯೆಯಾಗಿದ್ದಾನೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಕರಣ ನಡೆದಿದೆ. ಚತರ್ ಪುರ್ ಮೆಟ್ರೋ ನಿಲ್ದಾಣದ ಸಮೀಪ ಘಟನೆ ನಡೆದಿದೆ.  ಆರೋಪಿಯನ್ನು ಸುರೇಂದರ್ ಎಂದು ಗುರುತಿಸಲಾಗಿದೆ.

ಸಾಗರ್ ಎಂಬುವರ ಪತ್ನಿ ಜತೆ ಸುರೇಂದರ್ ಅಸಭ್ಯವಾಗಿ ನಡೆದುಕೊಂಡಿದ್ದ ಎನ್ನಲಾಗಿದೆ. ಪದೇ ಪದೇ ಹೀಗೆ ಆಗುತ್ತಿದ್ದುದರಿಂದ ಹೆಂಡತಿ ಗಂಡನಿಗೆ ವಿಚಾರ ಹೇಳಿದ್ದಾಳೆ.  ಒಂದು ದಿನ ಸಾಗರ್ ಸುರೇಂದರ್ ಮೇಲೆ ಹಲ್ಲೆ ಮಾಡಿದ್ದಾನೆ.

ಜಪಾನ್ ಕಾದಂಬರಿ ಓದಿ ಸಹೋದರ ಮತ್ತು ತಾಯಿಗೆ ಗುಂಡಿಟ್ಟಳು

ಇದಾಗಿ ಮೂರು ದಿನಗಳ ನಂತರ ಸಾಗರ್ ಮೇಲೆ ಸುರೇಂದರ್ ದಾಳಿ ಮಾಡಿದ್ದಾನೆ.  ಸಾಗರ್ ಕುತ್ತಿಗೆಯನ್ನು ಇರಿದಿದ್ದು ಹೆಂಡತಿ ಮುಂದೆಯೇ ಗಂಡ ಕೊನೆ ಉಸಿರು ಎಳೆದಿದ್ದಾನೆ. ಕೃತ್ಯ ನಡೆಸುವಾಗ ಸುರೇಂದರ್ ಸ್ಥಿಮಿತದಲ್ಲಿ ಇರಲಿಲ್ಲ. ಒಟ್ಟಿನಲ್ಲಿ ಹೆಂಡತಿಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದನ್ನು ಪ್ರಶ್ನಿಸಿದ ಗಂಡ ಕೊಲೆಯಾಗಿ ಹೋಗಿದ್ದಾನೆ.