ಕಾರವಾರ ಉದ್ಯಮಿ ವಿನಾಯಕರನ್ನು ಕೊಂದು ಪೊಲೀಸರಿಗೆ ಹೆದರಿ ನದಿಗೆ ಹಾರಿದ ಆರೋಪಿ ಗುರುಪ್ರಸಾದ್
ಕಾರವಾರದ ಹಣಕೋಣದಲ್ಲಿ ನಡೆದ ಉದ್ಯಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗೋವಾದಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗೋವಾದ ಮಾಂಡವಿ ನದಿಯ ತೀರದಲ್ಲಿ ಉದ್ಯಮಿಯ ಶವ ಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಉತ್ತರ ಕನ್ನಡ (ಸೆ.25): ಕಾರವಾರದ ಹಣಕೋಣದ ಉದ್ಯಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗೋವಾದ ಉದ್ಯಮಿಯೂ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಗೋವಾದ ಮಾಂಡವಿ ನದಿಯ ತೀರದಲ್ಲಿ ಉದ್ಯಮಿಯ ಶವ ಪತ್ತೆಯಾಗಿದೆ.
ಕಾರವಾರದಲ್ಲಿ ಸೆ.22ರಂದು ನಡೆದ ಉದ್ಯಮಿ ವಿನಾಯಕ ನಾಯ್ಕ ಅವರನ್ನು ಮನೆಯ ಬಳಿಯೇ ಮೂವರು ಹಂತಕರು ಕೊಲೆಗೈದು ಪರಾರಿ ಆಗಿದ್ದರು. ಇದಾದ ಬೆನ್ನಲ್ಲಿಯೇ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಮುಖ್ಯ ಆರೋಪಿ ಗುರುಪ್ರಸಾದ್ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ, ಪೊಲೀಸರು ಹುಡುಕಾಟ ಮಾಡುತ್ತಿದ್ದ ಬೆನ್ನಲ್ಲಿಯೇ ಗೋವಾ ಉದ್ಯಮಿ ಗುರುಪ್ರಸಾದ್ ಶವ ಮಾಂಡವಿ ನದಿಯ ತೀರದಲ್ಲಿ ಪತ್ತೆಯಾಗಿದೆ. ಮೃತ ಉದ್ಯಮಿ ಗುರುಪ್ರಸಾದ್ ರಾಣೆ ಗೋವಾದಲ್ಲಿ ಉದ್ಯಮಿಯಾಗಿದ್ದನು. ಗುರುಪ್ರಸಾದ್ ರಾಣೆ ವೈಯಕ್ತಿಕ ಕಾರಣದಿಂದ ಕಾರವಾರದ ಉದ್ಯಮಿ ವಿನಾಯಕ ನಾಯ್ಕನನ್ನು ಹತ್ಯೆ ಮಾಡಿಸಿದ್ದನು ಎಂದು ತಿಳಿದುಬಂದಿದೆ.
ಕಾರವಾರದಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು: ಉದ್ಯಮಿಯ ಬರ್ಬರ ಹತ್ಯೆಗೈದ ದುಷ್ಕರ್ಮಿಗಳು..!
ಕಾರವಾರದ ಹಣಕೋಣದಲ್ಲಿ ಸೆ.22ರಂದು ಮನೆಗೆ ನುಗ್ಗಿ ಉದ್ಯಮಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಕಿಂಗ್ ಪಿನ್ ಹಳಗಾ ಬೋಳಶಿಟ್ಟಾದ ಗುರುಪ್ರಸಾದ್‌ಗಾಗಿ ಪೊಲೀಸರ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರೆಸಿದ್ದರು. ಇನ್ನು ಈತ ಗೋವಾದ ಉದ್ಯಮಿ ಆಗಿದ್ದು, ಬಿಹಾರ ಮೂಲದ ಕಾರ್ಮಿಕರಿಗೆ ಸುಪಾರಿ ಕೊಟ್ಟು ಕಾರವಾರದ ಉದ್ಯಮಿ ವಿನಾಯಕ ನಾಯ್ಕನನ್ನು ಕೊಲೆ ಮಾಡಿಸಿದ್ದನು. ಕೊಲೆ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಇಬ್ಬರು ಬಿಹಾರಿಗಳು ಹಾಗೂ ಪ್ರಮುಖ ಆರೋಪಿ ಗುರುಪ್ರಸಾದ್ ಗೆಳೆಯನ ಬಂಧನವಾಗಿದೆ.
ಇನ್ನು ಆರೋಪಿಗಳನ್ನು ಪೊಲೀಸರು ಚಿತ್ತಾಕುಲ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಮತ್ತೊಂದೆಡೆ ಉದ್ಯಮಿ ವಿನಾಯಕ್ ಕೊಲೆಯ ಕಿಂಗ್‌ಪಿನ್ ಗುರುಪ್ರಸಾದ್‌ಗೆ ಪೊಲೀಸರು ಬಲೆ ಬೀಸಿದ್ದರು. ಇದೀಗ ಈತನ ಶವ ನದಿ ತೀರದಲ್ಲಿ ಪತ್ತೆಯಾಗಿದೆ.
ಶಿರೂರು ಗುಡ್ಡ ಕುಸಿತ: 71 ದಿನಗಳ ಬಳಿಕ ನಾಪತ್ತೆಯಾಗಿದ್ದ ಲಾರಿ ಮತ್ತು ಕೇರಳದ ಚಾಲಕ ಅರ್ಜುನ್ ಶವ ಪತ್ತೆ
ಘಟನೆಯ ಹಿನ್ನೆಲೆಯೇನು?
ಉತ್ತರಕನ್ನಡದ ಕಾರವಾರ ತಾಲೂಕಿನ ಹಣಕೊಣ ಗ್ರಾಮದಲ್ಲಿ ಬೆಳಂಬೆಳಿಗ್ಗೆ 5.30ರ ವೇಳೆಗೆ ಉದ್ಯಮಿಯನ್ನು ಹೊಡೆದು ಭೀಕರವಾಗಿ ಕೊಲೆಗೈದ ಘಟನೆ ನಡೆದಿತ್ತು. ಮಹಾರಾಷ್ಟ್ರದ ಪುಣೆಯ ಉದ್ಯಮಿ ವಿನಾಯಕ ನಾಯ್ಕ ಯಾನೆ ರಾಜು (58) ಕೊಲೆಯಾದ ದುರ್ದೈವಿ ಆಗಿದ್ದರು. ಬೆಳ್ಳಂಬೆಳಗ್ಗೆ ಕಾರಿನಲ್ಲಿ ನಾಲ್ಕು ಮಂದಿ ದುಷ್ಕರ್ಮಿಗಳು ಮನೆಯೊಳಗೆ ಹೊಕ್ಕಿ ಏಕಾಏಕಿ ಹಲ್ಲೆ ಮಾಡಿ, ದಂಪತಿಗಳ ಮೇಲೆ ಹರಿತವಾದ ವಸ್ತು ಹೊಂದಿರುವ ರಾಡ್‌ನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಹರಿತವಾದ ವಸ್ತುವಿದ್ದ ರಾಡಿನ ಏಟಿಗೆ ವಿನಾಯಕ್ ಸ್ಥಳದಲ್ಲೇ ಸಾವು, ಪತ್ನಿ ವೃಶಾಲಿ (52) ಗಂಭೀರವಾಗಿ ಗಾಯಗೊಂಡಿದ್ದರು.