Asianet Suvarna News Asianet Suvarna News

Ind vs SA ಫೈನಲ್ ಒನ್‌ಡೇ: ಭಾರತ ಎದುರು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ

ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದ್ದು, ಆರ್‌ಸಿಬಿ ಕ್ರಿಕೆಟಿಗ ರಜತ್ ಪಾಟೀದರ್ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಋತುರಾಜ್ ಗಾಯಕ್ವಾಡ್‌ ಕೈಬೆರಳಿನ ಗಾಯಕ್ಕೆ ಒಳಗಾಗಿದ್ದು, ಅವರ ಬದಲಿಗೆ ರಜತ್ ಪಾಟೀದರ್‌ಗೆ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿದೆ.

Ind vs SA 3rd ODI South Africa win the toss and elect to Bat first against India kvn
Author
First Published Dec 21, 2023, 4:13 PM IST

ಪಾರ್ಲ್(ಡಿ.12): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತ ಎದುರು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಈಗಾಗಲೇ ಉಭಯ ತಂಡಗಳು  ತಲಾ ಒಂದು ಪಂದ್ಯ ಜಯಿಸಿದ್ದು, ಈ ಪಂದ್ಯ ಗೆದ್ದ ತಂಡವು ಸರಣಿ ಜಯಿಸಲಿದೆ. ಹೀಗಾಗಿ ಈ ಪಂದ್ಯವು ಸಾಕಷ್ಟು ಪೈಪೋಟಿಯಿಂದ ಕೂಡಿರುವ ಸಾಧ್ಯತೆಯಿದೆ. 

ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದ್ದು, ಆರ್‌ಸಿಬಿ ಕ್ರಿಕೆಟಿಗ ರಜತ್ ಪಾಟೀದರ್ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಋತುರಾಜ್ ಗಾಯಕ್ವಾಡ್‌ ಕೈಬೆರಳಿನ ಗಾಯಕ್ಕೆ ಒಳಗಾಗಿದ್ದು, ಅವರ ಬದಲಿಗೆ ರಜತ್ ಪಾಟೀದರ್‌ಗೆ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿದೆ. ಇನ್ನು ಸತತ ಕ್ರಿಕೆಟ್ ಆಡುತ್ತಾ ಬಂದಿರುವ ಕುಲ್ದೀಪ್ ಯಾದವ್‌ಗೆ ಮೂರನೇ ಪಂದ್ಯದಿಂದ ರೆಸ್ಟ್ ನೀಡಲಾಗಿದ್ದು, ಕುಲ್ದೀಪ್ ಬದಲಿಗೆ ಯುಜುವೇಂದ್ರ ಚಹಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿದೆ. ಇನ್ನು ದಕ್ಷಿಣ ಆಫ್ರಿಕಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ರೋಹಿತ್ ಶರ್ಮಾ ಕೈಬಿಟ್ಟು ಹಾರ್ದಿಕ್‌ಗೆ ಮುಂಬೈ ನಾಯಕತ್ವ ಪಟ್ಟ ಕಟ್ಟಿದ್ದೇಕೆ? ಗುಟ್ಟು ಬಿಚ್ಚಿಟ್ಟ ಜಯವರ್ಧನೆ

ಕೊಹ್ಲಿ ದಾಖಲೆ ಸರಿಗಟ್ಟುತ್ತಾರಾ ಕನ್ನಡಿಗ ಕೆ ಎಲ್ ರಾಹುಲ್?: ಭಾರತ ತಂಡವು ಇದುವರೆಗೂ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಒಮ್ಮೆ ಮಾತ್ರ ಏಕದಿನ ಸರಣಿಯನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 2018ರಲ್ಲಿ ಹರಿಣಗಳ ನಾಡಿನಲ್ಲಿ 6 ಪಂದ್ಯಗಳ ಏಕದಿನ ಸರಣಿಯನ್ನು 5-1 ಅಂತರದಲ್ಲಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದು, ಇಂದು ಪಂದ್ಯ ಗೆದ್ದರೇ, ಹರಿಣಗಳ ನಾಡಿನಲ್ಲಿ ಏಕದಿನ ಸರಣಿ ಗೆದ್ದ ಭಾರತ ಎರಡನೇ ನಾಯಕ ಎನ್ನುವುದರ ಜತೆಗೆ ವಿರಾಟ್ ಕೊಹ್ಲಿ ಸಾಲಿಗೆ ಸೇರಲಿದ್ದಾರೆ.

ಉಭಯ ತಂಡಗಳ ಆಟಗಾರರ ಪಟ್ಟಿ ಹೀಗಿದೆ

ಭಾರತ: ರಜತ್ ಪಾಟೀದರ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಿಂಕು ಸಿಂಗ್, ಕೆ ಎಲ್ ರಾಹುಲ್(ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್, ಯುಜುವೇಂದ್ರ ಚಹಲ್, ಮುಕೇಶ್ ಕುಮಾರ್.

ದಕ್ಷಿಣ ಆಫ್ರಿಕಾ: ರೀಜಾ ಹೆಂಡ್ರಿಕ್ಸ್, ಡೆ ಜೊರ್ಜಿ, ವಾನ್ ಡರ್ ಡುಸ್ಸೆನ್, ಏಯ್ಡನ್ ಮಾರ್ಕ್‌ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮುಲ್ಡರ್, ಬರ್ಗರ್, ವಿಲಿಯಮ್ಸ್, ಕೇಶವ್ ಮಹರಾಜ್, ಬ್ಯೂರನ್ ಹೆಂಡ್ರಿಕ್ಸ್.

ಪಿಚ್ ರಿಪೋರ್ಟ್: ಬೊಲಾಂಡ್ ಪಾರ್ಕ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ನಿರೀಕ್ಷಿಸಲಾಗಿದೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ಹೆಚ್ಚಿನ ಲಾಭವಾದ ಉದಾಹರಣೆಯಿದೆ. ಪಂದ್ಯಕ್ಕೆ ಮಳೆ ಭೀತಿ ಇಲ್ಲ.

ಪಂದ್ಯ ಆರಂಭ: ಮಧ್ಯಾಹ್ನ 4.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್
 

Follow Us:
Download App:
  • android
  • ios