ಬಾಲಿವುಡ್ ಚಿತ್ರವಾಗುತ್ತಿದೆ ಎಸ್ ಎಲ್ ಭೈರಪ್ಪರ ಪರ್ವ, ಪೋಸ್ಟರ್ ಬಿಡುಗಡೆಗೊಳಿಸಿದ ವಿವೇಕ್ ಅಗ್ನಿಹೋತ್ರಿ !
ಎಸ್ ಎಲ್ ಭೈರಪ್ಪ ಅವರ ಪರ್ವ ಕಾದಂಬರಿ ಇದೀಗ ಬಾಲಿವುಡ್ ಚಿತ್ರವಾಗುತ್ತಿದೆ. ದಿ ಕಾಶ್ಮೀರ ಫೈಲ್ಸ್, ವ್ಯಾಕ್ಸಿನ್ ವಾರ್ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಪರ್ವ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ. ಮೂರು ಪಾರ್ಟ್‌ಗಳಲ್ಲಿ ಮಹಾರಭಾರತದ ಕಥಾನಕ ತೆರೆಮೇಲೆ ಬರಲಿದೆ.
ಬೆಂಗಳೂರು(ಅ.21) ಕನ್ನಡದ ಶ್ರೇಷ್ಠ ಕಾದಂಬರಿಗಳ ಪೈಕಿ ಪರ್ವಗೆ ಅಗ್ರಸ್ಥಾನ. ಪದ್ಮಭೂಷಣ ಪ್ರಶಸ್ತಿ ವಿಜೇತ ಎಸ್ ಎಸ್ ಭೈರಪ್ಪ ಅವರ ಪರ್ವ ಕಾದಂಬರಿ ಇದೀಗ ಬಾಲಿವುಡ್ ಚಿತ್ರವಾಗಿ ತೆರೆಮೇಲೆ ಅಪ್ಪಳಿಸುತ್ತಿದೆ. ಕಾಶ್ಮೀರ್ ಫೈಲ್ಸ್, ವ್ಯಾಕ್ಸಿನ್ ವಾರ್ ಚಿತ್ರದ ಮೂಲಕ ದೇಶದ ವಿದೇಶದಲ್ಲಿ ಸಂಚಲನ ಸೃಷ್ಟಿಸಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪರ್ವ ಚಿತ್ರದ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾದಂಬರಿಕಾರ, ಎಸ್‌ಎಲ್ ಭೈರಪ್ಪ, ಪ್ರಕಾಶ್ ಬೆಳವಾಡಿ, ನಿರ್ಮಾಪಕಿ ಪಲ್ಲವಿ ಜೋಶಿ ಸೇರಿದಂತೆ ಪ್ರಮುಖರ ಸಮ್ಮುಖದಲ್ಲೇ ಪರ್ವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಮಹಾಭಾರತ ದೃಶ್ಯಕಾವ್ಯವನ್ನೊಳಗ ಪರ್ವ ಮೇರುಕೃತಿಗಳಲ್ಲಿ ಮೇರುಕೃತಿ. ಎಸ್‌ಎಲ್ ಭೈರಪ್ಪ ಅವರು ಕನ್ನಡದಲ್ಲಿ ಬರೆದಿರುವ ಈ ಕೃತಿಯನ್ನೇ ಇದೀಗ ಬಾಲಿವುಡ್ ಚಿತ್ರ ಮಾಡಲಾಗುತ್ತಿದೆ. ವಿಶೇಷ ಅಂದರೆ ಮೂರು ಪಾರ್ಟ್‌ಗಳಲ್ಲಿ ಪರ್ವ ತೆರೆಗೆ ಬರಲಿದೆ. ಈ ಕುರಿತು ವಿವೇಕ್ ಅಗ್ನಿಹೋತ್ರಿ ಸಂತಸ ವ್ಯಕ್ತಪಡಿಸಿದ್ದು, ಮಹಾಭಾರತದ ದೃಶ್ಯಕಾವ್ಯವನ್ನು ಪ್ರಮುಖ ಪಾತ್ರಗಳ ವೈಯುಕ್ತಿಕ ಪ್ರತಿಬಿಂಬಗಳ ಮೂಲಕ ನಿರೂಪಿಸಲಾಗಿದೆ. ಮಾಡರ್ನ್ ಕ್ಲಾಸಿಕ್ ಕೃತಿ ಪ್ರಶಂಸೆ ಪಡೆದಿರುವ ಪರ್ವವನ್ನು ತೆರೆ ಮೇಲೆ ತರುವ ಮಹತ್ತರ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
ಸಾಹಿತ್ಯದ ಮೂಲಕ ಜೀವಂತ ಇರುತ್ತೇನೆ: ಎಸ್‌ಎಲ್ ಭೈರಪ್ಪ
ವಿವೇಕ್ ಅಗ್ನಿಹೋತ್ರಿ ನಿರ್ದೇಶಕನ ದಿ ಕಾಶ್ಮೀರ ಫೈಲ್ಸ್ ಚಿತ್ರ ನೋಡಿ ಮೆಚ್ಚಿಕೊಂಡಿದ್ದ ಎಸ್ ಎರ್ ಬೈರಪ್ಪ, ಆಪ್ತರಾಗಿರುವ ಪ್ರಕಾಶ್ ಬೆಳವಾಡಿ ಜೊತೆ ಚಿತ್ರದ ಕುರಿತು ಮಾತನಾಡಿದ್ದರು. ಇದೇ ವೇಳೆ ಪ್ರಕಾಶ್ ಬೆಳವಾಡಿ ದೂರವಾಣಿ ಕರೆ ಮೂಲಕ ವಿವೇಕ್ ಅಗ್ನಿಹೋತ್ರಿ ಜೊತೆ ಮಾತನಾಡಿದ್ದರು. ಎಸ್‌ಎಲ್ ಭೈರಪ್ಪ ಜೊತೆ ಮಾತನಾಡುವಂತೆ ಅಗ್ನಿಹೋತ್ರಿಗೆ ಸೂಚಿಸಿದ್ದರು. ಒಂದು ವರ್ಷ ಹಿಂದೆ ನಡೆದಿರುವ ಈ ಘಟನೆಯನ್ನು ವೇದಿಕೆಯಲ್ಲಿ ಹಂಚಿಕೊಂಡ ವಿವೇಕ್ ಅಗ್ನಿಹೋತ್ರಿ, ಭೈರಪ್ಪ ಜೊತೆ ಚರ್ಚಿಸಿ ಪರ್ವ ಕೃತಿಯನ್ನು ತೆರೆ ಮೇಲೆ ತರುವ ಧೈರ್ಯ ಮಾಡಿದೆ ಎಂದಿದ್ದಾರೆ.
BIG ANNOUNCEMENT:
— Vivek Ranjan Agnihotri (@vivekagnihotri) October 21, 2023
Is Mahabharat HISTORY or MYTHOLOGY?
We, at @i_ambuddha are grateful to the almighty to be presenting Padma Bhushan Dr. SL Bhyrappa’s ‘modern classic’:
PARVA - AN EPIC TALE OF DHARMA.
There is a reason why PARVA is called ‘Masterpiece of masterpieces’.
1/2 pic.twitter.com/BiRyClhT5c
ಪರ್ವ ಕಾದಂಬರಿಯನ್ನು ಚಿತ್ರ ಮಾಡಲು ನನ್ನ ಒಪ್ಪಿಗೆ ಮಾತ್ರವಲ್ಲ ಹಾರೈಕೆಯೂ ಇದೆ ಎಂದು ಎಸ್ಎಲ್ ಭೈರಪ್ಪ ಹೇಳಿದ್ದಾರೆ. ವಿವೇಕ್ ಅಗ್ನಿಹೋತ್ರಿ ಸಿನಿಮಾ ಜಗತ್ತಿನಲ್ಲಿ ಸಾಕಷ್ಟು ಅನುಭ ಹೊಂದಿದ್ದಾರೆ. ವಿಷಯ ಸೂಕ್ಷ್ಮತೆಯನ್ನು ಅರಿತು ತೆರೆಮೇಲೆ ತರುವ ಪ್ರಯತ್ನ ಮಾಡಿ ಯಶಸ್ಸು ಗಳಿಸಿದ್ದಾರೆ. ಇದೀಗ ಪರ್ವ ಚಿತ್ರವನ್ನು ಕನ್ನಡ ಹಾಗೂ ಹಿಂದಿಯಲ್ಲಿ ಮಾಡುತ್ತಿದ್ದಾರೆ. ಪರ್ವ ಕಾದಂಬರಿಯನ್ನು ಇಂಗ್ಲೀಷನಲ್ಲೂ ಮಾಡಿ, ನೈಜ ಮಹಾಭಾರತವನ್ನು ಜಗತ್ತಿಗೆ ತೋರಿಸುವ ಪ್ರಯತ್ನ ಆಗಬೇಕು ಎಂದಿದ್ದಾರೆ.
ವಿವೇಕ್ ಅಗ್ನಿಹೋತ್ರಿಯ ‘ದಿ ವ್ಯಾಕ್ಸಿನ್ ವಾರ್’ಗೆ ಆಸ್ಕರ್ನಿಂದ ವಿಶೇಷ ಮನ್ನಣೆ