Asianet Suvarna News Asianet Suvarna News

ಶೀಘ್ರ ಎಲ್ಲಾ ಎಟಿಎಂ ಬಂದ್: ಮತ್ತೆ ನಿಮ್ಮ ದುಡ್ಡು?

ಎಟಿಎಂ ಯಂತ್ರಗಳಲ್ಲಿ ಸರ್ಕಾರ ಸೂಚಿಸಿರುವ ನಿಯಂತ್ರಿತ ಬದಲಾವಣಾ ನಿಯಮಗಳನ್ನು ಪಾಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 2019ರ ಮಾರ್ಚ್ ವೇಳೆಗೆ ದೇಶದ 2.38 ಲಕ್ಷ ಎಟಿಎಂಗಳ ಪೈಕಿ ಅರ್ಧದಷ್ಟುಎಟಿಎಂ ಯಂತ್ರಗಳನ್ನು ಸ್ಥಗಿತಗೊಳ್ಳಬಹುದು ಎಂದು ಎಟಿಎಂ ಕೈಗಾರಿಕೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

First Published Nov 23, 2018, 9:21 PM IST | Last Updated Nov 23, 2018, 9:20 PM IST

ಬೆಂಗಳೂರು(ನ.23): ಎಟಿಎಂ ಯಂತ್ರಗಳಲ್ಲಿ ಸರ್ಕಾರ ಸೂಚಿಸಿರುವ ನಿಯಂತ್ರಿತ ಬದಲಾವಣಾ ನಿಯಮಗಳನ್ನು ಪಾಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 2019ರ ಮಾರ್ಚ್ ವೇಳೆಗೆ ದೇಶದ 2.38 ಲಕ್ಷ ಎಟಿಎಂಗಳ ಪೈಕಿ ಅರ್ಧದಷ್ಟುಎಟಿಎಂ ಯಂತ್ರಗಳನ್ನು ಸ್ಥಗಿತಗೊಳ್ಳಬಹುದು ಎಂದು ಎಟಿಎಂ ಕೈಗಾರಿಕೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ. 2019ರ ಮಾಚ್‌ರ್‍ ವೇಳೆಗೆ ಗ್ರಾಮೀಣ ಭಾಗಗಳ 1.13 ಲಕ್ಷ ಎಟಿಎಂಗಳನ್ನು ಸೇವಾ ಪೂರೈಕೆದಾರರು ಮುಚ್ಚಬೇಕಾಗಿ ಬರಬಹುದು. ಇವುಗಳಲ್ಲಿ ಹೆಚ್ಚಿನವು ಗ್ರಾಮೀಣ ಭಾಗದ ಎಟಿಎಂಗಳಾಗಿರಲಿವೆ. ಇದರಿಂದಾಗಿ ಸಾವಿರಾರು ಉದ್ಯೋಗ ನಷ್ಟಹಾಗೂ ಸರ್ಕಾರದ ಸಬ್ಸಿಡಿಗಳನ್ನು ಪಡೆಯುತ್ತಿರುವ ಫಲಾನುಭವಿಗಳು ಗ್ರಾಮೀಣ ಭಾಗದವರಾಗಿರುವುದರಿಂದ ಹಣಕಾಸು ಒಳಗೊಳ್ಳುವಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಘಿ ಈ ವಿಡಿಯೋ ನೋಡಿ..

Video Top Stories