ಮನೆಯಲ್ಲಿ ಪತಿಯಿಲ್ಲದ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾದ್ರೆ ಬದಲಾಯಿಸಲು ಇನ್ನು ಮುಂದೆ ಗೃಹಿಣಿಯರು ಕಷ್ಟಪಡಬೇಕಾಗಿಲ್ಲ.ಶೀಘ್ರವೇ LPG ಗ್ಯಾಸ್ ಸಿಲಿಂಡರ್ ತೂಕ ತಗ್ಗಿಸಲು ಸರ್ಕಾರ ನಿರ್ಧರಿಸಿದೆ. 

ನವದೆಹಲಿ (ಡಿ.7): ಗ್ಯಾಸ್ ಸಿಲಿಂಡರ್ (Gas cylinder) ಬದಲಾಯಿಸೋದು ಗೃಹಿಣಿಯರಿಗೆ (Home makers) ದೊಡ್ಡ ತಲೆನೋವಿನ ಕೆಲಸ. ಮನೆಯಲ್ಲಿ ಗಂಡಸರಿರೋ ಸಮಯದಲ್ಲಿ ಗ್ಯಾಸ್ ಖಾಲಿಯಾದ್ರೆ ಟೆನ್ಷನ್ ಇಲ್ಲ. ಆದ್ರೆ ಮನೆಯಲ್ಲಿ ಗೃಹಿಣಿ ಒಬ್ಬಳೇ ಇದ್ದಾಗ ಹೀಗೇನಾದ್ರೂ ಆದ್ರೆ ಗಜಭಾರದ ಸಿಲಿಂಡರ್ ಅನ್ನು ಎಳೆದು ತಂದು ಸ್ಟೌಗೆ(Stove) ಜೋಡಿಸೋದು ಸಾಮಾನ್ಯದ ಕೆಲಸವೇನಲ್ಲ. ಎಲ್ ಪಿಜಿ (LPG) ಸಿಲಿಂಡರ್ ತುಂಬಾ ಭಾರವಿರೋ ಕಾರಣ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸೋದು ಕಷ್ಟ ಎಂಬುದು ಎಲ್ಲರ ದೂರು. ಇದೀಗ ಈ ತೊಂದರೆಗೆ ಪರಿಹಾರ ಕಂಡುಹಿಡಿಯಲು ಸರ್ಕಾರ ಮುಂದಾಗಿದೆ. ಎಲ್ ಪಿಜಿ (LPG) ಸಿಲಿಂಡರ್ ತೂಕ (Weight) ತಗ್ಗಿಸಲು ನಿರ್ಧರಿಸಿದೆ. 

ಎಲ್ ಪಿಜಿ (LPG) ಸಿಲಿಂಡರ್ ತೂಕ ಗೃಹಿಣಿಯರಿಂದ ಹಿಡಿದು ಸಾಗಾಟದಾರರ(Transporter) ತನಕ ಎಲ್ಲರಿಗೂ ತೊಂದರೆಯೇ ಆಗಿದೆ. ಹೆಚ್ಚಿನ ಭಾರದ ಕಾರಣ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸೋದು ಕಷ್ಟಕರ. ಅದೇ ಎಲ್ಪಿಜಿ ಸಿಲಿಂಡರ್ ಲೈಟ್ ವೇಟ್ (Light-weight) ಆಗಿದ್ರೆ ಅದನ್ನು ಸುಲಭವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದು. ಇದನ್ನು ಮನಗಂಡಿರೋ ಸರ್ಕಾರ ಗೃಹಿಣಿಯರ ಅನುಕೂಲಕ್ಕಾಗಿ ಶೀಘ್ರದಲ್ಲೇ ಎಲ್ ಪಿಜಿ ಸಿಲಿಂಡರ್ ತೂಕ ತಗ್ಗಿಸಲಿದೆ.

ಕ್ರಿಪ್ಟೋಕರೆನ್ಸಿ ಉತ್ತೇಜಿಸೋ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ: ವಿತ್ತ ಸಚಿವಾಲಯ ಸ್ಪಷ್ಟನೆ

ಈಗ ಎಲ್ ಪಿಜಿ ಗೃಹ ಬಳಕೆ ಸಿಲಿಂಡರ್ (Domestic cooking gas) ತೂಕ14.2ಕೆ.ಜಿ. ಇದೆ. ಇದ್ರಿಂದ ಸಿಲಿಂಡರ್ ಸಾಗಣೆಗೆ ಹಾಗೂ ಗೃಹಿಣಿಯರಿಗೆ ಉಂಟಾಗುತ್ತಿರೋ ಸಮಸ್ಯೆಯನ್ನು ಪರಿಗಣಿಸಿ ಸಿಲಿಂಡರ್ ತೂಕ ಇಳಿಕೆಗೆ ಸರ್ಕಾರ ಅನೇಕ ಆಯ್ಕೆಗಳನ್ನು ಪರಿಶೀಲಿಸುತ್ತಿದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ (Petroleum and Natural Gas) ಸಚಿವ ಹರ್ದೀಪ ಸಿಂಗ್ ಪುರಿ ರಾಜ್ಯಸಭೆಗೆ (Rajya Sabha) ಮಾಹಿತಿ ನೀಡಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸೋ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಇದಕ್ಕೂ ಮುನ್ನ ಭಾರವಾದ ಸಿಲಿಂಡರ್ ನಿಂದ ಗೃಹಿಣಿಯರು ಎದುರಿಸುತ್ತಿರೋ ಸಂಕಷ್ಟದ ಬಗ್ಗೆ ರಾಜ್ಯಸಭೆಯಲ್ಲಿ ಸದಸ್ಯರೊಬ್ಬರು ಪ್ರಸ್ತಾಪಿಸಿದ್ದರು. ಈ ಕುರಿತು ಮಾತನಾಡಿದ ಹರ್ದೀಪ ಸಿಂಗ್ ಪುರಿ 'ನಾವು ಮಹಿಳೆಯರು ಭಾರವಾದ ಸಿಲಿಂಡರ್ ನಿಂದ ತೊಂದರೆ ಅನುಭವಿಸೋದನ್ನು ಇಷ್ಟಪಡೋದಿಲ್ಲ. ಹೀಗಾಗಿ ಸಿಲಿಂಡರ್ ತೂಕ ಇಳಿಕೆಗೆ ನಿರ್ಧರಿಸಿದ್ದೇವೆ' ಎಂದರು. ಸಿಲಿಂಡರ್ ತೂಕವನ್ನು 14.2 ಕೆಜಿಯಿಂದ 5ಕೆ.ಜಿ.ಗೆ ಇಳಿಸಲು ಸಾಧ್ಯವೇ ಅಥವಾ ಬೇರೆ ಯಾವುದಾದ್ರೂ ಮಾರ್ಗವಿದೆಯೇ ಎಂಬ ಬಗ್ಗೆ ಪರಿಶೀಲಿಸುತ್ತೇವೆ ಎಂಬ ಭರವಸೆಯನ್ನು ಸಚಿವರು ನೀಡಿದ್ದಾರೆ. 

LPG ಬೆಲೆಯನ್ನು ಈ ರೀತಿ ಪರಿಶೀಲಿಸಿ
ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪರಿಶೀಲಿಸಲು, ನೀವು ಸರ್ಕಾರಿ ತೈಲ ಕಂಪನಿಯ ವೆಬ್‌ಸೈಟ್‌ಗೆ ಹೋಗಬೇಕು. ಇಲ್ಲಿ ಕಂಪನಿಗಳು ಪ್ರತಿ ತಿಂಗಳು ಹೊಸ ದರಗಳನ್ನು ನೀಡುತ್ತವೆ. https://iocl.com/Products/IndaneGas.aspx ಲಿಂಕ್‌ನಲ್ಲಿ ನಿಮ್ಮ ನಗರದ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ನೀವು ಪರಿಶೀಲಿಸಬಹುದು.

ಜಿಯೋ, ಏರ್ಟೆಲ್ , ವೋಡಾಫೋನ್ ಕಂಪನಿಗಳಿಗೆ BSNL ಟಕ್ಕರ್

ಸಬ್ಸಿಡಿ (Subsidy) ಹೆಚ್ಚಿಸಿದ ಸರ್ಕಾರ
ಇತ್ತೀಚಿನ ದಿನಗಳಲ್ಲಿ LPG ಸಿಲಿಂಡರ್ ಬೆಲೆ (LPG Price) ಗಗನಕ್ಕೇರಿತ್ತು. ಸದ್ಯ ಗೃಹ ಬಳಕೆ ಸಿಲಿಂಡರ್ ಬೆಲೆ 834 ರೂ. ಇದೆ. ಇದ್ರಿಂದ ಜನಸಾಮಾನ್ಯರಿಗಾಗುತ್ತಿರೋ ತೊಂದರೆಯನ್ನು ಮನಗಂಡ ಸರ್ಕಾರ, ಸಬ್ಸಿಡಿ ರೂಪದಲ್ಲಿ ನೀಡಲಾದ ವಿನಾಯಿತಿಯನ್ನು ಹೆಚ್ಚಿಸಲು ನಿರ್ಧರಿಸಿದೆ. ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಈಗ ಪ್ರತಿ ಸಿಲಿಂಡರ್‌ಗೆ ಹೆಚ್ಚಿನ ರಿಯಾಯಿತಿ ಲಾಭವನ್ನು ಪಡೆಯುತ್ತಾರೆ. ಈ ಹಿಂದೆ ಸಿಲಿಂಡರ್ ಖರೀದಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು ಕೇವಲ 20 ರಿಂದ 30 ರೂ.ಗೆ ಇಳಿಸಲಾಗಿದ್ದು, ನವೆಂಬರ್ ನಲ್ಲಿ ಮತ್ತೆ ಸುಮಾರು 300 ರೂ.ಗೆ ಏರಿಕೆ ಮಾಡಲಾಗಿದೆ. ಉಜ್ವಲ(Ujwala) ಯೋಜನೆಯಡಿ ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳುವವರಿಗೆ ಈ ಸಬ್ಸಿಡಿ ಯೋಜನೆಯಿಂದ ಗರಿಷ್ಠ ಲಾಭ ಸಿಗಲಿದೆ. ಈ ಹಿಂದೆ 174.86 ರೂ.ಗಳ ಸಹಾಯಧನವನ್ನು, ಈಗ 312.48 ರೂ.ಗೆ ಹೆಚ್ಚಿಸಲಾಗಿದೆ. ಇದು ದೇಶಾದ್ಯಂತ ಅನೇಕ ಕುಟುಂಬಗಳಿಗೆ ಸಮಾಧಾನ ಕೊಟ್ಟಿದೆ. ಕೆಲ ಸಮಯದ ಹಿಂದೆ, ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್‌ಗೆ 594ರೂ ಕ್ಕೆ ಲಭ್ಯವಿತ್ತು, ಆದರೀಗ ಇದು 834 ರೂ ನಿಂದ ಸುಮಾರು 1,000 ರೂಪಾಯಿ ಗಡಿ ತಲುಪಿದೆ.