ಸ್ವಾಮಿನಾಥನ್ ಗುರುಮೂರ್ತಿ ತುಘಲಕ್ ಸಂಪಾದಕರು. ಇವರ ದೃಷ್ಟಿಕೋನವನ್ನು ನಿಮಯ ರೂಪಿಸುವವರು ಸದಾ ಗಮನಿಸುತ್ತಿರುತ್ತಾರೆ. ರಾಜ್ಯ ರಾಜಕಾರಣದ ಗಮ್ಯ ತಲುಪುವಲ್ಲಿಯೂ ಇವರ ಚಿಂತನೆಗಳು ಮುಖ್ಯ ಪಾತ್ರವಹಿಸುತ್ತವೆ. ದಶಕಗಳ ಇವರ ವಸ್ತು ನಿಷ್ಟ ವರದಿಗಳು ದೇಶಾದ್ಯಾಂತ ಹಲವು ತಿರುವುಗಳಿಗೆ ಕಾರಣವಾಗಿವೆ. ಕಾರ್ಪೋರೇಟ್ ಜಗತ್ತಿನ ದೈತ್ಯ ಕಂಪನಿಗಳಾದ ರಿಲಯನ್ಸ್‌ನಂತ ಕಂಪನಿಗಳು ಹಾಗೂ ಸರಕಾರದ ನಡುವಿನ ಕಾನೂನುಬಾಹಿರ ವ್ಯವಹಾರ, ಬೋಫೋರ್ಸ್‌ನಂತ ಹಗರಣಗಳ ಬಗ್ಗೆ ಇಡೀ ಜಗತ್ತಿಗೇ ಗೊತ್ತು ಮಾಡಿಸಿದ ಇವರು ಭ್ರಷ್ಟಚಾರದ ವಿರುದ್ಧ ಸಮರ ಸಾರಿದವರು. ಗುಣಮಟ್ಟದ ಸಂಶೋಧನೆ, ಆಳ ಅಧ್ಯಯನ ಹಾಗೂ ಸಂಘರ್ಷಕ್ಕೆ ಪರಿಹಾರ ಕಂಡು ಕೊಳ್ಳುವ ವಿವೇಕಾನಂದ ಅಂತಾರಾಷ್ಟ್ರೀಯ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರು. ಐಐಟಿ ಮುಂಬೈ ಅತಿಥಿ ಉಪನ್ಯಾಸಕರು. ಅರ್ಥಶಾಸ್ತ್ರ, ವಿತ್ತೀಯ ನಿರ್ವಹಣೆ ಪರಿಣತರು. ಸಸ್ತ್ರ ವಿಶ್ವವಿದ್ಯಾಲಯದ ಕಾನೂನು ಮಾನವಶಾಸ್ತ್ರದ ಪ್ರಸಿದ್ಧ ಪ್ರಾಧ್ಯಾಪಕರೂ ಹೌದು.
2024-04-05T16:00:10+05:30
2024-03-08T15:07:10+05:30
2024-02-22T11:23:26+05:30
2024-02-20T12:57:14+05:30
2024-02-08T16:20:26+05:30
2024-01-31T13:12:29+05:30