Asianet Suvarna News Asianet Suvarna News

Viewpoint: ಮಧ್ಯಂತರ ಬಜೆಟ್‌ 2024-25

2024-25ರ ಮಧ್ಯಂತರ ಬಜೆಟ್ ಬಿಜೆಪಿಗೆ ತನ್ನ 10 ವರ್ಷಗಳ ಸಾಧನೆಗಳನ್ನು ಜನರಿಗೆ ತೋರಿಸಲು ಸಿಕ್ಕ ಅಪರೂಪದ ಅವಕಾಶವಾಗಿತ್ತು. ಬಿಜೆಪಿ ಕೂಡ ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದು, ತನ್ನ ಸರ್ಕಾರದ ಸಾಧನೆ ಎಷ್ಟು ದೊಡ್ಡದಾಗಿದೆ ಎಂಬುದನ್ನು ತೋರಿಸಲು ಬಳಸಿಕೊಂಡಿತು ಎಂದು ಎಸ್ ಗುರುಮೂರ್ತಿ ಬರೆದಿದ್ದಾರೆ.
 

S Gurumurthy column Viewpoint Interim Budget 2024-2025 san
Author
First Published Feb 8, 2024, 4:20 PM IST

ಕಳೆದ ವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಮಧ್ಯಂತರ ಬಜೆಟ್‌ 2024-25ರ ಪೂರ್ಣ ಬಜೆಟ್‌ ಆಗಿರಲಿಲ್ಲ.  ರಾಜಕೀಯ ಸಂಪ್ರದಾಯದ ಪ್ರಕಾರ, ಯಾವುದೇ ಹೊಸ ತೆರಿಗೆ ಅಥವಾ ಹೊಸ ರಿಯಾಯಿತಿಗಳನ್ನು ಇದರಲ್ಲಿ ಘೋಷಿಸಬಾರದು.ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಸರ್ಕಾರವು ವರ್ಷದ ಸಂಪೂರ್ಣ ಬಜೆಟ್ ಅನ್ನು ಮಂಡನ ಮಾಡುತ್ತದೆ. ಆದ್ದರಿಂದ ಮಧ್ಯಂತರ ಬಜೆಟ್‌ ಎನ್ನುವುದು ಹಿಂದಿನ ಖಾತೆ ಎನ್ನುವುದು ಸೂಕ್ತ. ಮಧ್ಯಂತರ ಬಜೆಟ್ 2014 ರವರೆಗೂ ಹೆಚ್ಚು ಸುದ್ದಿಯಾಗಿರಲಿಲ್ಲ, ಏಕೆಂದರೆ ಅದು ಯಾವುದೇ ಹೊಸ ವೆಚ್ಚವನ್ನು ಹೊಂದಿರುತ್ತಿರಲಿಲ್ಲ. ಏಕೆ? 2014-15ರ ಮಧ್ಯಂತರ ಬಜೆಟ್‌ಅನ್ನು ಪಿ ಚಿದಂಬರಂ ಮಂಡಿಸಿದ್ದರು. ಈ ವೇಳೆ ಅವರು ಮಧ್ಯಂತರ ಬಜೆಟ್‌ ಸಂಪ್ರದಾಯವನ್ನು ಮುರಿದು ರಿಯಾಯಿತಿ ಮತ್ತು ವೆಚ್ಚಗಳನ್ನು ಘೋಷಿಸಿ ಸುದ್ದಿಯಾಗಿದ್ದಲ್ಲದೆ ಬಹಳ ಚರ್ಚೆಗೂ ಗ್ರಾಸವಾಗಿತ್ತು. ಅದೇ ರೀತಿ 2019-20ರ ಬಜೆಟ್‌ನಲ್ಲಿ ಮೋದಿ ಸರ್ಕಾರ ಕೂಡ ಹೊಸ ವೆಚ್ಚವನ್ನು ಘೋಷಣೆ ಮಾಡಿತ್ತು. ಅದರ ಬಗ್ಗೆಯೂ ಚರ್ಚೆ ನಡೆದಿತ್ತು. ಹೀಗಾಗಿ ಮಧ್ಯಂತರ ಬಜೆಟ್‌ನ ಕುರಿತು ಚರ್ಚೆಯನ್ನು ನೋಡೋಣ.

ಸಂಪ್ರದಾಯಗಳ ಮರುಸ್ಥಾಪನೆ
ಮಧ್ಯಂತರ ಬಜೆಟ್‌ನಲ್ಲಿ ಹೊಸ ತೆರಿಗೆ, ರಿಯಾಯಿತಿ ವೆಚ್ಚ ಇತ್ಯಾದಿಗಳನ್ನು ಘೋಷಿಸದ ಸಂಪ್ರದಾಯದ ಹಿಂದಿನ ತಾರ್ಕಿಕ ಅಂಶವೆಂದರೆ ಚುನಾವಣೆಗೆ ಮುನ್ನ ಆಡಳಿತ ನಡೆಸುವ ಸರ್ಕಾರ, ಚುನಾವಣೆಯ ನಂತರ ಜನರಿಂದ ಆಯ್ಕೆಯಾದ ಸರ್ಕಾರದ ಮೇಲೆ ಯಾವುದೇ ಹೊರೆ ಹೇರಬಾರದು ಎನ್ನುವುದಷ್ಟೇ. 2014ರಲ್ಲಿ ಪಿ.ಚಿದಂಬರಂ ಅವರು ಮಂಡಿಸಿದ ಮಧ್ಯಂತರ ಬಜೆಟ್ ಕಾಂಗ್ರೆಸ್ ಆಡಳಿತದ ಅಂತ್ಯದಲ್ಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ರಿಯಾಯಿತಿಗಳನ್ನು ಘೋಷಿಸುವ ಮೂಲಕ ಉತ್ತಮ ಸಂಪ್ರದಾಯವನ್ನು ಮುರಿದಿತ್ತು. ಇದು ಈಗಾಗಲೇ ಇರುವ ಸಂಪ್ರದಾಯವನ್ನು ಮುರಿದ ಕೃತ್ಯ ಎಂದು ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತಾ ಬಜೆಟ್‌ಅನ್ನು ಖಂಡಿಸಿದ್ದರು.

2019ರಲ್ಲಿ ಮಧ್ಯಂತರ ಬಜೆಟ್‌ ಮಂಡನೆ ಮಾಡಿದ್ದ ಮೋದಿ ಸರ್ಕಾರ ಕೂಡ ಈ ಸಂಪ್ರದಾಯವನ್ನು ಮುರಿದು ರೈತರಿಗೆ ಸಬ್ಸಿಡಿ ಘೋಷಣೆ ಮಾಡಿತ್ತು. ಇವೆರಡನ್ನೂ ಆಡಳಿತಾರೂಢ ಸರ್ಕಾರ ಚುನಾವಣೋತ್ತರ ಸರ್ಕಾರದ ಮೇಲೆ ಹೇರಿರುವ ಹೊರೆ ಎಂದೇ ಹೇಳಬೇಕು. 2014ರಲ್ಲಿ ಈ ಸಂಪ್ರದಾಯವನ್ನಯ ಮುರಿದಿದ್ದ ಕಾಂಗ್ರೆಸ್‌, 2019ರಲ್ಲಿ ಮೋದಿ ಸರ್ಕಾರ ಕೂಡ ಇದನ್ನೇ ಮಾಡಿದಾಗ ಅದನ್ನು ವಿರೋಧಿಸಲು ಸಾಧ್ಯವಾಗಲಿಲ್ಲ. ಇನ್ನೂ ಮಾಧ್ಯಮಗಳು ಕೂಡ ಇದನ್ನು ಟೀಕೆ ಮಾಡಿರಲಿಲ್ಲ. ಆದರೆ, 2024-25ರ ಮಧ್ಯಂತರ ಬಜೆಟ್‌ ಸಫ್ರದಾಯಗಳ ಪ್ರಕಾರ ತೆರಿಗೆ ರಿಯಾಯಿತಿಗಳು ಮತ್ತು ಖರ್ಚುಗಳನ್ನು ತಪ್ಪಿಸಿದೆ. ಆದರೆ ಈ ಮಧ್ಯಂತರ ಬಜೆಟ್ ಟೀಕೆಗಳಲ್ಲಿಯೂ ಸರ್ಕಾರವು ಖರ್ಚು-ವೆಚ್ಚಗಳನ್ನು ಹೊರಗಿಟ್ಟು ಕೊರತೆಯನ್ನು ತಗ್ಗಿಸಿ ಜವಾಬ್ದಾರಿಯುತವಾಗಿ ಬಜೆಟ್ ಮಂಡಿಸಿದೆ ಎಂಬ ಸಾಮಾನ್ಯ ಕಾಮೆಂಟ್ ಬಿಟ್ಟರೆ, ಈ ಮಧ್ಯಂತರ ಬಜೆಟ್ ಸಾಂಪ್ರದಾಯಿಕವಾಗಿದೆ ಎಂದು ಯಾರೂ ಎತ್ತಿ ತೋರಿಸಲಿಲ್ಲ. ಈ ಮಧ್ಯಂತರ ಬಜೆಟ್ ಸಂಪ್ರದಾಯಗಳಿಗೆ ಬದ್ಧವಾಗಿದೆ ಎಂದು ಹೇಳುವ ಮೂಲಕ ನಾವು ಆ ಉತ್ತಮ ಸಂಪ್ರದಾಯವನ್ನು ನೆನಪಿಸಿಕೊಳ್ಳುತ್ತೇವೆ.

2024-25ರ ಬಜೆಟ್‌
2024-25 ರ ಮಧ್ಯಂತರ ಬಜೆಟ್ ಯಾವುದೇ ಹೊಸ ತೆರಿಗೆಗಳನ್ನು ಹೊಂದಿಲ್ಲ, ಯಾವುದೇ ಹೊಸ ಯೋಜನೆಗಳಿಲ್ಲ, ಯಾವುದೇ ರಿಯಾಯಿತಿಗಳಿಲ್ಲ ಮತ್ತು ಯಾವುದೇ ವೆಚ್ಚವಿಲ್ಲ. ಪ್ರಸ್ತುತ ನಡೆಯುತ್ತಿರುವ ಪ್ರಧಾನ ಮಂತ್ರಿಗಳ ವಸತಿ ಯೋಜನೆಯಡಿ 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಇನ್ನೂ 2 ಕೋಟಿ ಮನೆಗಳನ್ನು ನಿರ್ಮಾಣ ಮಾಡುವ ಘೋಷಣೆ ಮಾಡಿ ಅದಕ್ಕೆ 80,600 ಕೋಟಿ ಮೀಸಲಿಡಲಾಗಿದೆ.  ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ ಇದು ರೂ.1000 ಕೋಟಿ ಹೆಚ್ಚು. ಇನ್ನು ಹೂಡಿಕೆಗೆ 2.3 ಲಕ್ಷ ಕೋಟಿ ಹೆಚ್ಚಳದೊಂದಿಗೆ 15 ಲಕ್ಷ ಕೋಟಿಗೆ ಏರಿಸಲಾಗಿದೆ. 2019 ರ ಬಜೆಟ್‌ನಂತೆ ಮೋದಿ ಸರ್ಕಾರ ರೈತರಿಗೆ ಯಾವುದೇ ರಿಯಾಯಿತಿಗಳನ್ನು ನೀಡದಿರುವುದು ಮುಂದಿನ ಚುನಾವಣೆಯಲ್ಲಿ ಮೋದಿ ಗೆಲ್ಲುತ್ತಾರೆ ಎಂಬ ಬಿಜೆಪಿಯ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

10 ವರ್ಷದ ಸಾಧನೆ
2024-25ರ ಮಧ್ಯಂತರ ಬಜೆಟ್ ಬಿಜೆಪಿಗೆ ತನ್ನ 10 ವರ್ಷಗಳ ಸಾಧನೆಗಳನ್ನು ಜನರಿಗೆ ತಿಳಿಸಿಲು ಇದ್ದ ಅಪರೂಪದ ಅವಕಾಶವಾಗಿತ್ತು. 10 ವರ್ಷಗಳ (2004-14) ಕಾಂಗ್ರೆಸ್‌ನ ಆಡಳಿತಕ್ಕೆ ಹೋಲಿಸಿದರೆ, ಈ ಸರ್ಕಾರದ ಸಾಧನೆಗಳು ಎಷ್ಟು ಬೃಹತ್‌ ಆಗಿದೆ ಎನ್ನುವುದನ್ನು ತಿಳಿಸಿಸಲು ಬಿಜೆಪಿ ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿತು. ಕೇವಲ ಕಾಂಗ್ರೆಸ್‌ನ 10 ವರ್ಷದ ಆಡಳಿತ (2004 ರಿಂದ 2014) ಮಾತ್ರವಲ್ಲ 1950ರಿಂದ 64 ವರ್ಷಗಳ ಅಧಿಕಾರ ಮಾಡಿದ ಪಕ್ಷಗಳಿಗಿಂತ ತಮ್ಮ ಸರ್ಕಾರದ ಸಾಧನೆ ಎಷ್ಟು ಬೃಹತ್‌ ಆಗಿದೆ ಎನ್ನುವುದನ್ನು ತೋರಿಸಿತು.
ಉದಾಹರಣೆಗೆ, 1950 ರಿಂದ 2014 ರವರೆಗಿನ 64 ವರ್ಷಗಳಲ್ಲಿ 16 ಐಐಟಿಗಳು ಸ್ಥಾಪನೆಯಾಗಿದ್ದರೆ, ಮೋದಿ ಆಡಳಿತದಲ್ಲಿ 7 ಐಐಟಿ ಸ್ಥಾಪನೆಯಾಗುದೆ, 1950 ರಿಂದ 64 ವರ್ಷದ ಅವಧಿಯಲ್ಲಿ 7 ಏಮ್ಸ್‌ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದ್ದರೆ, 15 ಏಮ್ಸ್‌ಗಳು ಮೋದಿ ಅವಧಿಯಲ್ಲಿ ಸ್ಥಾಪನೆಯಾಗಿದೆ. 2014ರವರೆಗೆ ದೇಶದಲ್ಲಿ ಒಟ್ಟು 773 ವಿಶ್ವವಿದ್ಯಾಲಯಗಳಿದ್ದವು. ಆದರೆ, ಮೋದಿ ಸರ್ಕಾರದಲ್ಲಿಯೇ 390 ವಿವಿಗಳನ್ನು ಸ್ಥಾಪನೆ ಮಾಡಲಾಗಿದೆ. 1950 ರಿಂದ 2014ರವರೆಗೆ ದೇಶದಲ್ಲಿ 74 ವಿಮಾನ ನಿಲ್ದಾಣಗಳಿದ್ದವು. ಆದರೆ, ಮೋದಿ ಅವಧಿಯಲ್ಲಿ ಹೊಸ 74 ವಿಮಾನ ನಿಲ್ದಾಣಗಳನ್ನು ಸ್ಥಾಪನೆ ಮಾಡಲಾಗಿದೆ.

ಅಂದರೆ 64 ವರ್ಷಗಳಲ್ಲಿ ಎಲ್ಲ ಸರ್ಕಾರಗಳು ಸಾಧಿಸಿದ್ದಕ್ಕಿಂತ ಹೆಚ್ಚಿನ ಸಾಧನೆಯನ್ನು ಮೋದಿ 10 ವರ್ಷಗಳಲ್ಲಿ ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ. ಅಲ್ಲದೆ, 10 ವರ್ಷಗಳ ಕಾಂಗ್ರೆಸ್ ಆಡಳಿತಕ್ಕೆ ಹೋಲಿಸಿದರೆ, ಮೋದಿ ಆಡಳಿತದಲ್ಲಿ ಸರ್ಕಾರದ ಆದಾಯವು ಹೆಚ್ಚು ಕಡಿಮೆ 3 ಪಟ್ಟು ಹೆಚ್ಚಾಗಿದೆ, ವಿವಿಧ ಬಡ ವರ್ಗಗಳ ಸಂಖ್ಯೆ 2014 ರಲ್ಲಿ 29% ರಿಂದ 11.3% ಕ್ಕೆ ಇಳಿದಿದೆ ಮತ್ತು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಹಣಕಾಸು ಸಚಿವರೇ ಹೇಳಿದ್ದಾರೆ.

ಒಟ್ಟು ದೇಶೀಯ ಉತ್ಪನ್ನದ (GDP) ಪಾಲು ಸರ್ಕಾರಿ ಹೂಡಿಕೆಯನ್ನು ಏರಿಕೆಯಾಗಿದೆ. 2014ರಲ್ಲಿ ಶೇ. 4ರಷ್ಟಿದ್ದ ಈ ಪ್ರಮಾಣ 2022-23ರಲ್ಲಿ ಶೇ. 18ಕ್ಕೆ ಏರಿಕೆಯಾಗಿದೆ. ಉನ್ನತ ಶಿಕ್ಷಣವನ್ನು ಅಧ್ಯಯನ ಮಾಡುವ ಮಹಿಳೆಯರ ಸಂಖ್ಯೆ 28% ರಷ್ಟು ಹೆಚ್ಚಾಗಿದೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣವನ್ನು ಅಧ್ಯಯನ ಮಾಡುವ ಮಹಿಳೆಯರ ಸಂಖ್ಯೆ 43% ರಷ್ಟು ಹೆಚ್ಚಾಗಿದೆ. ಕೆಲಸ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಸಂಖ್ಯೆಯು 50% ರಷ್ಟು ಹೆಚ್ಚಾಗಿದೆ. 43 ಕೋಟಿ ಜನರಿಗೆ 22.5 ಲಕ್ಷ ಕೋಟಿ ಮುದ್ರಾ ಸಾಲಗಳನ್ನು ನೀಡಲಾಗಿದೆ. ಇದರಲ್ಲಿ 30 ಕೋಟಿ ಮಹಿಳೆಯರೇ ಆಗಿದ್ದಾರೆ. 3 ಕೋಟಿ ನಿರಾಶ್ರಿತರಿಗೆ ವಸತಿ ನೀಡಲಾಗಿದ್ದು ಅದರಲ್ಲಿ ಶೇ. 70ರಷ್ಟು ಮಹಿಳೆಯರಾಗಿದ್ದಾರೆ. 10 ಕೋಟಿ ಮನೆಗಳಿಗೆ ಉಚಿತ ಅಡುಗೆ ಅನಿಲ; 11 ಕೋಟಿ ಮನೆಗಳಿಗೆ ಶೌಚಾಲಯ; ಉಜ್ವಲಾ ಯೋಜನೆಯಡಿ, ಮನೆಗಳಿಗೆ 38 ಕೋಟಿ ಎಲ್ಇಡಿ ಬಲ್ಬ್‌ಗಳು, ಈ ಎಲ್ಇಡಿ ಬಲ್ಬ್‌ಗಳು ಕಡಿಮೆ ವಿದ್ಯುತ್ ಬಳಸುತ್ತವೆ. ರಸ್ತೆಗಳಿಗೆ 1.3 ಕೋಟಿ ಎಲ್‌ಇಡಿ ಟ್ಯೂಬ್‌ಗಳು. 1.4 ಕೋಟಿ ಯುವಕ-ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ; ಸ್ವಸಹಾಯ ಸಂಘಗಳ ಮೂಲಕ ಒಂದು ಕೋಟಿ ಮಹಿಳೆಯರಿಗೆ 83 ಲಕ್ಷ ಸಾಲ; 78 ಲಕ್ಷ ಬೀದಿ ವ್ಯಾಪಾರಿಗಳಿಗೆ ಸಾಲ;  50 ಕೋಟಿ ಬ್ಯಾಂಕ್‌ ಖಾತೆಗಳನ್ನು ತೆರೆಯುವ ಮೂಲಕ 11.8 ಕೋಟಿ ರೈತರಿಗೆ 2.81 ಲಕ್ಷ ಕೋಟಿ ನೇರ ನಗದು ವರ್ಗಾವಣೆ. ಇತರ ಫಲಾನುಭವಿಗಳಿಗೆ 2.7 ಲಕ್ಷ ಕೋಟಿ ವಿತರಣೆ. ಕರೋನಾ ನಂತರ ನಿರುದ್ಯೋಗ 6.1% ರಿಂದ 3.2% ಕ್ಕೆ ಇಳಿದಿದೆ. ಹೀಗೆ ನಿರ್ಮಲಾ ಅವರು ಮೋದಿ ಸರ್ಕಾರದ ಸ್ಮಾರಕ ಸಾಧನೆಗಳನ್ನು ಪಟ್ಟಿ ಮಾಡಿ ನೀಡಿದರು. ಬಜೆಟ್ ಮೇಲಿನ ಮಾಧ್ಯಮ ಚರ್ಚೆ ಬಿಜೆಪಿಯ ಸಾಧನೆಯ ಪ್ರಚಾರದ ರೀತಿ ಎನಿಸಿತು. 2014 ರಲ್ಲಿ ವಿಶ್ವ ಆರ್ಥಿಕತೆಯಲ್ಲಿ 10 ನೇ ಸ್ಥಾನದಲ್ಲಿದ್ದ ಭಾರತವು 10 ವರ್ಷಗಳಲ್ಲಿ ಬ್ರೆಜಿಲ್, ಬ್ರಿಟನ್, ಫ್ರಾನ್ಸ್, ಕೆನಡಾ ಮತ್ತು ಇಟಲಿಯನ್ನು ಹಿಂದಿಕ್ಕಿದೆ ಮತ್ತು ಮೋದಿ ಆಡಳಿತದಲ್ಲಿ ದೇಶದ ಅಗಾಧ ಬೆಳವಣಿಗೆಯಿಂದಾಗಿ ಈಗ 5 ನೇ ಸ್ಥಾನವನ್ನು ತಲುಪಿದೆ. 20 ವರ್ಷಗಳ ವಾರ್ಷಿಕ ಬೆಳವಣಿಗೆಯ ಸಂಖ್ಯೆಯಲ್ಲಿ, ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಒಂದು ಕಾಲದಲ್ಲಿ ನಮ್ಮನ್ನು ಕೀಳಾಗಿ ಕಾಣುತ್ತಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನಂತಹ ಸಂಸ್ಥೆಗಳಿಂದ ಜಾಗತಿಕ ಅಭಿವೃದ್ಧಿಯ ಎಂಜಿನ್ ಎಂದು ಕರೆಸಿಕೊಂಡಿರುವುದು ಮಾತ್ರವಲ್ಲ, ಭಾರತವೂ ವಿಶ್ವದ ಎಲ್ಲರೂ ಗೌರವಿಸುವ ದೇಶವಾಗಿ ಬೆಳೆದಿದೆ.

ರಾಮ ಮಂದಿರ ಉದ್ಘಾಟನೆ ಮತ್ತು ಇಂಡಿಯಾ ಮೈತ್ರಿಯ ಮಹಾ ಮುಜುಗರ!

ಪ್ರಸಿದ್ಧ ಅಮೇರಿಕನ್ ಮಾರ್ನಿಂಗ್ ಕನ್ಸಲ್ಟ್ ಸಂಶೋಧನಾ ಸಂಸ್ಥೆಯು ಕಳೆದ ಐದು ವರ್ಷಗಳಿಂದ ಹೇಳುತ್ತಿದ್ದು ಮತ್ತು ಈಗಲೂ ಕೂಡ 22 ಪ್ರಮುಖ ವಿಶ್ವ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಜನಪ್ರಿಯರಾಗಿದ್ದಾರೆ. ವಿರೋಧ ಪಕ್ಷಗಳು ಅವರನ್ನು ನಿಂದಿಸಿದಷ್ಟೂ ಅವರು ಜನಪ್ರಿಯರಾಗುತ್ತಾರೆ. ಇದಕ್ಕೆ ಅವರ ಅವಿಶ್ರಾಂತ ಕೆಲಸ ಮತ್ತು ಅವರ ಸರ್ಕಾರದ ಪ್ರಮುಖ ಸಾಧನೆಗಳೇ ಕಾರಣ ಎಂಬುದನ್ನು ಅರಿತುಕೊಳ್ಳಬೇಕು. ಹೀಗಾದಾಗ ಮಾತ್ರ ಅವರಿಗೂ ಒಳ್ಳೆಯದಾಗುತ್ತದೆ ಮತ್ತು ದೇಶಕ್ಕೂ ಒಳ್ಳೆಯದಾಗುತ್ತದೆ.

ಓದುಗರ ಗಮನಕ್ಕೆ: ಈ ಲೇಖನ ಮೂಲತಃ ತುಘಲಕ್‌ ತಮಿಳು ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದನ್ನು ತುಗ್ಲಕ್ ಡಿಜಿಟಲ್ www.gurumurthy.net ಗಾಗಿ ಇಂಗ್ಲಿಷ್‌ನಲ್ಲಿ ಅನುವಾದ ಮಾಡಲಾಗಿದ್ದು, ಇದನ್ನು ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನಲ್ಲಿ ಮರಳಿ ಪೋಸ್ಟ್‌ ಮಾಡಲಾಗಿದೆ.

Follow Us:
Download App:
  • android
  • ios