S Gurumurthy Take: ಇದೊಂದು ದೋಷಪೂರಿತ ತೀರ್ಪು
ಸಮರ್ಥವಾಗಿ ಸರಿಪಡಿಸಬಹುದಾಗಿದ್ದ ಯೋಜನೆಯನ್ನು ತಿರಸ್ಕರಿಸುವ ಮೂಲಕ, ಚುನಾವಣೆಗಳಲ್ಲಿ ಕಪ್ಪುಹಣಗಳ ವ್ಯಾಪಕ ಬಳಕೆಯೆ ಫ್ಲಡ್‌ಗೇಟ್‌ಅನ್ನು ಸುಪ್ರೀಂ ಕೋರ್ಟ್ ತನ್ನ ಅರಿವಿಲ್ಲದಂತೆಯೇ ತೆಗೆದಿದೆ ಎಂದು ಎಸ್ ಗುರುಮೂರ್ತಿ ಬರೆದಿದ್ದಾರೆ.
ಕಪ್ಪುಹಣದ ಮೇಲೆ ರಾಜಕೀಯ ಪಕ್ಷಗಳ ಅವಲಂಬನೆಯನ್ನು ನಿರ್ಬಂಧಿಸಲು ವಿನ್ಯಾಸ ಮಾಡಲಾಗಿದ್ದ, ಬ್ಯಾಂಕ್‌ಗಳ ಮೂಲಕವೇ ಪ್ರಮುಖವಾಗಿ ಚಾನೆಲ್ ಮಾಡಲಾಗುತ್ತಿದ್ದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದು ಮಾಡುವ ಮೂಲಕ ಭಾರತದ ಸುಪ್ರೀಂ ಕೋರ್ಟ್‌ನ ಇತ್ತೀಚಿನ ನಿರ್ಧಾರವು ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಮಾಧ್ಯಮಗಳು, ಬುದ್ಧಿಜೀವಿಗಳು ಮತ್ತು ವಿರೋಧ ಪಕ್ಷಗಳು-ವಿಪರ್ಯಾಸವೆಂದರೆ ಯೋಜನೆಯ ಪ್ರಮುಖ ಫಲಾನುಭವಿಗಳು ಈ ತೀರ್ಪನ್ನು ಶ್ಲಾಘಿಸಿದರೂ, ತೀರ್ಪಿನ ಮೂಲ ಉದ್ದೇಶವನ್ನು ನೋಡಿದಾಗ ದೋಷಪೂರಿತವಾಗಿದೆ ಎಂದು ನಾವು ವಾದ ಮಾಡಬಹುದು, ಕಾನೂನು ಭಾಷೆಯಲ್ಲಿ ಹೇಳುವುದಾದರೆ ಅದು 'ಸ್ಪಷ್ಟವಾಗಿ ತಪ್ಪಾಗಿದೆ'. ಈ ಸಮರ್ಥನೆಯ ಹಿಂದಿನ ಕಾರಣಗಳನ್ನು ಇಲ್ಲಿ ನೋಡೋಣ
ಕಪ್ಪುಹಣಕ್ಕೆ ಪರ್ಯಾಯ
ಚುನಾವಣಾ ಬಾಂಡ್ ಯೋಜನೆಯನ್ನು ನ್ನು ಜಾರಿಗೆ ತರುವ ಮೊದಲು, ರಾಜಕೀಯ ಪಕ್ಷಗಳು, ಆಡಳಿತ ಮತ್ತು ವಿರೋಧ ಪಕ್ಷಗಳು ಪ್ರಾಥಮಿಕವಾಗಿ ಕಪ್ಪು ಹಣಕ್ಕೆ ಸಮಾನಾರ್ಥಕವಾಗಿ ನಗದು ರೂಪದಲ್ಲಿ ದೇಣಿಗೆಗಳನ್ನು ಸ್ವೀಕಾರ ಮಾಡುತ್ತಿದ್ದವು. ಆದರೆ ಚುನಾವಣಾ ಬಾಂಡ್ ಯೋಜನೆಯು ಈ ಪದ್ಧತಿಗೆ ಪರ್ಯಾಯವಾಗಬಲ್ಲ ಬಂದು ವಿಧಾನವನ್ನು ಪ್ರಸ್ತುತಪಡಿಸಿತ್ತು. ಕೇಂದ್ರ ಚುನಾವಣಾ ಆಯೋಗ ಬಹಿರಂಗ ಮಾಡಿರುವ ಮಾಹಿತಿಯ ಅನುಸಾರ ನೋಡುವುದಾದರೆ, 2018ರಲ್ಲಿ ಚುನಾವಣಾ ಬಾಂಡ್ ಜಾರಿಯಾದ ಬಳಿಕ, ದೇಶದ ರಾಜಕೀಯ ಪಕ್ಷಗಳು 16 ಸಾವಿರ ಕೋಟಿಯಷ್ಟು ಹಣವನ್ನು ದೇಣಿಗೆಗಳ ಮೂಲಕ ಸಂಗ್ರಹಿಸಿದೆ. ಬ್ಯಾಂಕ್‌ಗಳ ಮೂಲಕ ಸುಗಮಗೊಳಿಸಲಾದ ಪಾರದರ್ಶಕ ಹಣಕಾಸು ವಹಿವಾಟಿನತ್ತ ಮಹತ್ವದ ಬದಲಾವಣೆ ಇದಾಗಿತ್ತು. ಯೋಜನೆಯ ಟೀಕಾಕಾರರು ಬ್ಯಾಂಕ್‌ಗಳ ಮೂಲಕ ಬಂದ ಹಣವನ್ನು ಕಪ್ಪುಹಣವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿರುವ ಅಂಶವನ್ನು ಅಲ್ಲಗಳೆಯುವಂತಿಲ್ಲ.ಹಾಗೇನಾದರೂ ಚುನಾವಣಾ ಬಾಂಡ್ ಇಲ್ಲದೇ ಇದ್ದಲ್ಲಿ ಈ ಪಕ್ಷಗಳು ಅದೇ 16,000 ಕೋಟಿ ರೂಪಾಯಿಗಳನ್ನು ಲೆಕ್ಕಕ್ಕೆ ಬಾರದ ನಗದು ಎನ್ನುವಂತೆ ಸ್ವೀಕರಿಸಿ, ಭ್ರಷ್ಟಾಚಾರದ ಚಕ್ರವನ್ನು ಶಾಶ್ವತಗೊಳಿಸುತ್ತಿದ್ದವು. ಯೋಜನೆಯು ಖಾತರಿಪಡಿಸುವ ಅನಾಮಧೇಯತೆಯು ಕಪ್ಪುಹಣದ ಅಭ್ಯಾಸಗಳನ್ನು ತ್ಯಜಿಸುವ ದಾನಿಗಳನ್ನು ಬಾಂಡ್‌ಗಳ ಮೂಲಕ ಕೊಡುಗೆ ನೀಡಲು ಪ್ರೋತ್ಸಾಹಿಸುತ್ತದೆ. ಆದರೆ, ಸುಪ್ರೀಂ ಕೋರ್ಟ್‌ನ ತೀರ್ಪು ಕೆಲವು ಸಂಭಾವ್ಯ ದಾನಿಗಳನ್ನು ಚೆಕ್‌ಗಳ ಮೂಲಕ ಕೊಡುಗೆ ನೀಡಲು ಉದ್ದೇಶಿಸದೇ, ಹವಾಲಾ ವಿಧಾನದಂತಹ ಕಾನೂನುಬಾಹಿರ ವಿಧಾನಗಳನ್ನು ಆಶ್ರಯಿಸಲು ಒತ್ತಾಯಿಸಿದೆ, ಇದು ರಾಜಕೀಯ ಬೊಕ್ಕಸಕ್ಕೆ ಕಪ್ಪು ಹಣದ ಒಳಹರಿವನ್ನು ಉಲ್ಬಣಗೊಳಿಸುತ್ತದೆ. ನ್ಯಾಯಾಲಯದ ತೀರ್ಪು ರಾಜಕೀಯ ಆರ್ಥಿಕತೆಯಲ್ಲಿ ಕಪ್ಪುಹಣದ ಅಲೆಯನ್ನು ತಡೆಯುವ ಸದುದ್ದೇಶದ ಪ್ರಯತ್ನವನ್ನು ಕೆಡವಿರುವುದು ವಿಷಾದನೀಯ.
ಚುನಾವಣಾ ಬಾಂಡ್ ದೇಣಿಗೆ: ಬಿಜೆಪಿಗೆ ಹೆಚ್ಚು, ಪ್ರತಿಪಕ್ಷಗಳಿಗೆ ಕಡಿಮೆ?
2022-23 ರ ಆರ್ಥಿಕ ವರ್ಷಕ್ಕೆ ಆಡಿಟ್ ಮಾಡಿರುವ ರಾಜಕೀಯ ಪಕ್ಷದ ಖಾತೆಗಳ ವಿಶ್ಲೇಷಣೆಯು ಚುನಾವಣಾ ಬಾಂಡ್‌ಗಳ ಯೋಜನೆಯ ಮೂಲಕ ಪಡೆದ ದೇಣಿಗೆಗಳ ಪ್ರಮಾಣವನ್ನು ಬಹಿರಂಗಪಡಿಸುತ್ತದೆ. ಕೆಳಗಿನ ಚಿತ್ರದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ತೃಣಮೂಲ ಕಾಂಗ್ರೆಸ್ (TMC) ನಂತಹ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ತನ್ನ ಒಟ್ಟು ದೇಣಿಗೆಯ 97.5% ಅನ್ನು ಪಡೆದಿವೆ; ಡಿಎಂಕೆಯಿಂದ 86.31%; ಒಡಿಶಾದ ಬಿಜು ಜನತಾ ದಳ [ಬಿಜೆಡಿ] 84%; ತೆಲಂಗಾಣದ ಭಾರತ್ ರಾಷ್ಟ್ರೀಯ ಪಕ್ಷ [BRS] 72%; ಆಂಧ್ರದಲ್ಲಿ YSR ಕಾಂಗ್ರೆಸ್ ಪಕ್ಷ 69.6%; ಚುನಾವಣಾ ಬಾಂಡ್ ಸ್ಕೀಮ್ ಮೂಲಕ ಬಿಜೆಪಿ 55% ಮತ್ತು ಕಾಂಗ್ರೆಸ್ 38% ಗಳಿಸಿವೆ. ಅಚ್ಚರಿ ಏನೆಂದರೆ, ಚುನಾವಣಾ ಬಾಂಡ್ ಜಾರಿಗೆ ತಂದ ಬಿಜೆಪಿ ಆ ಮೂಲಕ ಕಪ್ಪುಹಣದ ಹರಿವನ್ನು ಕಾನೂನುಬದ್ಧ ಮಾಡುತ್ತಿದೆ ಎಂದು ವಿರೋಧಿಸಿದ್ದ ಪಕ್ಷಗಳೇ ಹೆಚ್ಚಿನ ಮೊತ್ತವನ್ನು ಈ ಬಾಂಡ್‌ಗಳ ಮೂಲಕ ಗಳಿಸಿದೆ. 2021-22 ರಲ್ಲಿ ಟಿಎಂಸಿ ಶೇ. 96.8ರಷ್ಟು ಹಣವನ್ನು ಚುನಾವಣಾ ಬಾಂಡ್ ಮೂಲಕ ಪಡೆದಿದ್ದರೆ, 2022-23ರಲ್ಲಿ ಶೇ. 97.5ರಷ್ಟು ಹಣವನ್ನು ಈ ಮಾರ್ಗದಿಂದ ಪಡೆದಿದೆ. ಟಿಎಂಸಿ ಪಾಲಿಗೆ ಇದು ಕುಸಿತದ ಬದಲು ತುಲನಾತ್ಮಕವಾಗಿ ಏರಿಕೆಯಾಗಿದೆ. 2022-23ರಲ್ಲಿ ಈ ಬಾಂಡ್‌ಗಳ ಮೂಲಕ ಬಿಜೆಪಿ 1,294 ಕೋಟಿ ರೂಪಾಯಿ ಪಡೆದಿದ್ದರೆ. 2ನೇ ಸ್ಥಾನದಲ್ಲಿರುವ BRS ಬಾಂಡ್‌ಗಳ ಮೂಲಕ 529 ಕೋಟಿ ರೂಪಾಯಿ ಸಂಪಾದಿಸಿದೆ. ತೃಣಮೂಲ ಕಾಂಗ್ರೆಸ್ 325 ಕೋಟಿ ರೂ.ಗಳೊಂದಿಗೆ 3ನೇ ಸ್ಥಾನದಲ್ಲಿದೆ, ಡಿಎಂಕೆ 185 ಕೋಟಿ ರೂ.ಗಳೊಂದಿಗೆ 4ನೇ ಸ್ಥಾನದಲ್ಲಿದೆ, ಕಾಂಗ್ರೆಸ್ 171 ಕೋಟಿ ರೂ.ಗಳೊಂದಿಗೆ 5ನೇ ಸ್ಥಾನದಲ್ಲಿದೆ ಮತ್ತು 152 ಕೋಟಿ ರೂ.ಗಳೊಂದಿಗೆ ಬಿಜೆಡಿ 6ನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ.
ನ್ಯಾಯಾಲಯದ ತೀರ್ಪಿನಲ್ಲಿನ ಅಂಕಿಅಂಶಗಳ ಆಧಾರದ ಮೇಲೆ, ಚುನಾವಣಾ ಬಾಂಡ್ ಯೋಜನೆ ಜಾರಿಗೆ ತಂದಾಗಿನಿಂದ ಪಕ್ಷಗಳಿಗೆ 16,518 ಕೋಟಿ ರೂ.ಗಳನ್ನು ಬಾಂಡ್‌ಗಳ ಮೂಲಕ ದೇಣಿಗೆ ನೀಡಲಾಗಿದೆ, ಈ ಪೈಕಿ ಬಿಜೆಪಿಗೆ 6,566 ಕೋಟಿ ರೂ., ಕಾಂಗ್ರೆಸ್‌ಗೆ 1,123 ಕೋಟಿ ರೂ., 1,092 ಕೋಟಿ ರೂ. ಟಿಎಂಸಿಗೆ, ಬಿಜೆಡಿಗೆ 775 ಕೋಟಿ, ಡಿಎಂಕೆಗೆ 617 ಕೋಟಿ ಮತ್ತು ಬಿಆರ್‌ಎಸ್‌ಗೆ 384 ಕೋಟಿ ರೂಪಾಯಿ ಸಿಕ್ಕಿದೆ.
ಹಾಗಿದ್ಮೇದರೂ, ಲಿನ ಅಂಕಿಅಂಶಗಳ ಪ್ರಕಾರ ಬಾಂಡ್ ದೇಣಿಗೆಯಲ್ಲಿ ಬಿಜೆಪಿಯ ಸ್ಪಷ್ಟ ಪ್ರಾಬಲ್ಯವು ಆಳವಾದ ವಾಸ್ತವವನ್ನು ಸುಳ್ಳು ಮಾಡಿದೆ. ಟಿಎಂಸಿ, ಡಿಎಂಕೆ, ಬಿಜೆಡಿ ಮತ್ತು ಬಿಆರ್‌ಎಸ್‌ನಂತಹ ಸಣ್ಣ ಪಕ್ಷಗಳು ತಮ್ಮ ರಾಜಕೀಯ ಅಸ್ತಿತ್ವದ ಲೆಕ್ಕಾಚಾರದಲ್ಲಿ ನೋಡುವುದಾದರೆ, ಗಮನಾರ್ಹ ಮೊತ್ತವನ್ನು ಪಡೆದಿವೆ ಎಂದು ಅನುಪಾತದ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಅದನ್ನು ವಿವರವಾಗಿ ನೋಡೋಣ.
ಎಲೆಕ್ಟೋರಲ್ ಬಾಂಡ್‌ಗಳಿಂದ ಬಿಜೆಪಿ ಒಟ್ಟು ದೇಣಿಗೆಯಲ್ಲಿ 39.75% ಪಡೆದಿದೆ ಎಂಬುದು ಮೇಲ್ನೋಟಕ್ಕೆ ಮಾತ್ರ. ಪಶ್ಚಿಮ ಬಂಗಾಳದಲ್ಲಿ ಮಾತ್ರ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿರುವ ಟಿಎಂಸಿ ಕೇವಲ 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಟಿಎಂಸಿ 1092 ಕೋಟಿ ರೂಪಾಯಿ ಪಡೆದಿದ್ದ, ಪಕ್ಷದ ವಿಸ್ತಾರಕ್ಕಿಂತ 10 ಪಟ್ಟು ಹೆಚ್ಚಾಗಿದೆ/ 2019ರ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 437 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಆ ನಿಟ್ಟಿನಲ್ಲಿ ನೋಡುವುದದಾದರೆ, ಬಿಜೆಪಿ 11362 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದ್ದರೆ, ಮಾತ್ರವೇ ಬಿಜೆಪಿ ಹಾಗೂ ಟಿಎಂಸಿ ಸಮಾನ ಎಂದು ನೋಡಬಹುದು. ಇದೇ ವಿಚಾರವನ್ನೂ ಡಿಎಂಕೆ ಬಗ್ಗೆಯೂ ಹೇಳಬಹುದು. ಕೇವಲ 40 ಲೋಕಸಭಾ ಕ್ಷೇತ್ರಗಳಲ್ಲಿ ಇದು ಸ್ಪರ್ಧಿಸುತ್ತಿದೆ. ಆದರೆ, ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ಸಮಾನವಾದ 617 ಕೋಟಿ ರೂಪಾಯಿಯನ್ನು ಸ್ವೀಕರಿಸಿಸುತ್ತಿದೆ. ಟಿಎಂಸಿಯಂತೆಯೇ ಕೇವಲ 21 ಎಂಪಿ ಕ್ಷೇತ್ರಗಳಿರುವ ಒಡಿಶಾದಲ್ಲಿ ಬಿಜೆಡಿ ಪಡೆದಿರುವ ಮೊತ್ತ 775 ಕೋಟಿ ರೂಪಾಯಿ. ಈ ಲೆಕ್ಕಾಚಾರದಲ್ಲಿ ಬಿಜೆಪಿ 16,000 ಕೋಟಿಗಿಂತ ಹೆಚ್ಚು ಪಡೆದಿದ್ದರೆ 437 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿಗೆ ಸಮ ಎಂದು ಹೇಳಬಹುದು. 14 ಎಂಪಿ ಸ್ಥಾನಗಳೊಂದಿಗೆ ತೆಲಂಗಾಣ ಮೂಲದ ಬಿಆರ್‌ಎಸ್‌ಗೆ 384 ಕೋಟಿ ರೂಪಾಯಿ ಸಿಕ್ಕಿದೆ. 437 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಆ ಲೆಕ್ಕಾಚಾರದಲ್ಲಿ 12,000 ಕೋಟಿ ರೂಪಾಯಿ ಪಡೆದರೆ ಸಮ ಎಂದು ಹೇಳಬಹುದಾಗಿದೆ. ಹಾಗಾಗಿ ಬಿಜೆಪಿಗೆ ಹೆಚ್ಚು ಸಿಕ್ಕಿರುವುದು ಕೇವಲ ತೋರಿಕೆಯೇ ಹೊರತು ವಾಸ್ತವವಲ್ಲ.
2019ರ ಚುನಾವಣೆಯಲ್ಲಿ 428 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಡೆದಿರುವ 1,123 ಕೋಟಿ ರೂ.ಗಳು ಕಡಿಮೆ ಮೊತ್ತ ಎಂದು ಹೇಳಬಹುದು. ಕಾಂಗ್ರೆಸ್‌ಗೆ ಕಡಿಮೆ ಹಣ ಸಿಕ್ಕಿದ್ದೇಕೆ? ಪ್ರಭಾವಿ ಆಗಿರುವ ಟಿಎಂಸಿ, ಬಿಜೆಡಿ ಮತ್ತು ಡಿಎಂಕೆ ಬಾಂಡ್‌ಗಳ ಮೂಲಕ ಗಣನೀಯ ಪ್ರಮಾಣದ ದೇಣಿಗೆಗಳನ್ನು ಪಡೆದಿದ್ದು, ಈ ಪಕ್ಷದ ಪ್ರಭಾವವನ್ನು ತೋರಿಸುತ್ತದೆ. ಕಾಂಗ್ರೆಸ್‌ಗೆ ದೇಣಿಗೆಗಳ ಕುಸಿತವು ಅದರ ಕುಸಿತವನ್ನು ಪ್ರತಿಬಿಂಬಿಸುತ್ತದೆ. ಇತರ ವಿರೋಧ ಪಕ್ಷಗಳು ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದರಿಂದ ಕಾಂಗ್ರೆಸ್‌ಗಿಂತ ಬಾಂಡ್‌ಗಳಿಂದ ಹೆಚ್ಚು ಪಡೆಯುತ್ತಾರೆ ಎಂಬ ವಾದವೂ ತಪ್ಪಾಗಿದೆ.ಏಕೆಂದರೆ ಆ ಪಕ್ಷಗಳು ಆಯಾ ರಾಜ್ಯಗಳಲ್ಲಿ ಅಧಿಕಾರದಲ್ಲಿವೆ. 2018 ರಿಂದ 2023 ರವರೆಗೆ ಪಂಜಾಬ್, ರಾಜಸ್ಥಾನ, ಹಿಮಾಚಲ, ಎಂಪಿ, ಛತ್ತೀಸ್‌ಗಢ, ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು ಮತ್ತು ಇಂದಿಗೂ ಕರ್ನಾಟಕ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಬಾಂಡ್‌ಗಳ ಮೂಲಕ ಹಣ ನೀಡುವ ವಿಷಯದಲ್ಲಿ ಬಿಜೆಪಿ ಮತ್ತು ಇತರ ವಿರೋಧ ಪಕ್ಷಗಳ ನಡುವೆ [ಕಾಂಗ್ರೆಸ್ ಹೊರತುಪಡಿಸಿ] ಯಾವುದೇ ವ್ಯತ್ಯಾಸವಿಲ್ಲ. ಬಾಂಡ್‌ಗಳಿಂದ ಕಾಂಗ್ರೆಸ್ ಮಾತ್ರ ಏಕೆ ಕಡಿಮೆ ಹಣವನ್ನು ಪಡೆಯುತ್ತಿದೆ? ಏಕೆಂದರೆ ಕಾಂಗ್ರೆಸ್‌ನ ರಾಜ್ಯ ಪ್ರಭಾವಿ ನಾಯಕರು ಪಕ್ಷಕ್ಕೆ ಹಣ ಕೊಡುವುದಕ್ಕಿಂತ ತಮ್ಮ ಕೈಯಲ್ಲಿಯೇ ಹಣ ಇಟ್ಟುಕೊಳ್ಳುತ್ತಾರೆ. ಕಾಂಗ್ರೆಸ್ ಮುಖಂಡರಿಂದ ನೂರಾರು ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ. ಬಿಜೆಪಿಗಿಂತ ಕಾಂಗ್ರೆಸ್ ಕಡಿಮೆ ದೇಣಿಗೆಯನ್ನು ಹೊಂದಿದೆ ಎಂಬ ಅಂಶವನ್ನು ಬಾಂಡ್‌ಗಳ ಯೋಜನೆಯ ನ್ಯೂನತೆ ಎಂದು ಹೇಳಲಾಗುವುದಿಲ್ಲ.
ತಪ್ಪು ನಿರ್ಧಾರ
ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸುವ ಸುಪ್ರೀಂ ಕೋರ್ಟ್‌ನ ನಿರ್ಧಾರವು ಮೂರು ಪ್ರಮುಖ ವಿವಾದಗಳ ಮೇಲೆ ನಿಂತಿದೆ: ಪಾರದರ್ಶಕತೆಯ ಕೊರತೆ, ಮತದಾರರ ಮಾಹಿತಿ ಹಕ್ಕು ಉಲ್ಲಂಘನೆ ಮತ್ತು ದಾನಿಗಳಿಗೆ ಸಂಭಾವ್ಯ ಬಹಿರಂಗಪಡಿಸದ ಪ್ರೋತ್ಸಾಹ. ಹಾಗಿದ್ದರೂ, ಈ ಆಕ್ಷೇಪಣೆಗಳು ಕಪ್ಪುಹಣದ ಒಳಹರಿವು ತಗ್ಗಿಸುವಲ್ಲಿ ಮತ್ತು ಹಣಕಾಸಿನ ಹೊಣೆಗಾರಿಕೆಯನ್ನು ಉತ್ತೇಜಿಸುವಲ್ಲಿ ಯೋಜನೆಯ ಅರ್ಹತೆಯನ್ನು ಗುರುತಿಸಲು ವಿಫಲವಾಗಿವೆ. ನಗದು ವಹಿವಾಟುಗಳಿಗಿಂತ ಭಿನ್ನವಾಗಿ, ಚುನಾವಣಾ ಬಾಂಡ್‌ಗಳು ಪತ್ತೆಹಚ್ಚುವಿಕೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ, ಪಕ್ಷದ ಹಣಕಾಸಿನ ಒಳನೋಟಗಳನ್ನು ನೀಡುತ್ತದೆ.ನ್ಯಾಯಾಲಯದ ತೀರ್ಪಿನ ಪ್ರಮೇಯವು ಚುನಾವಣಾ ಬಾಂಡ್‌ಗಳ ಯೋಜನೆಯೊಳಗೆ ಪಾರದರ್ಶಕತೆಯ ಕೊರತೆಯ ಮೇಲೆ ನಿಂತಿದೆ, ಇದು ಅದರ ವಿರುದ್ಧ ಎತ್ತಲಾದ ಇತರ ಆಕ್ಷೇಪಣೆಗಳಿಗೆ ಮೂಲಾಧಾರವಾಗಿದೆ. ಹಾಗಿದ್ದರೂ ರಾಜಕೀಯದ ಸಂಕೀರ್ಣ ಡೈನಾಮಿಕ್ಸ್‌ನಲ್ಲಿ ಸಂಕುಚಿತ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದು ಅದರ ಒಳಗಿರುವ ಸಮಸ್ಯೆಗಳನ್ನು ಗ್ರಹಿಸಲು ವಿಫಲವಾಗಿದೆ. ಉದಾಹರಣೆಗೆ, ಎಲ್ಲಾ ಡೊಮೇನ್‌ಗಳಲ್ಲಿ ಪಾರದರ್ಶಕತೆಗಾಗಿ ಸುಪ್ರೀಂ ಕೋರ್ಟ್‌ನ ಒತ್ತಾಯವನ್ನು ಪರಿಗಣಿಸಿ. ಆದರೂ, ಚುನಾಯಿತ ನ್ಯಾಯಾಧೀಶರು ತಮ್ಮ ಆಸ್ತಿಯ ವಿವರಗಳನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಮಾತ್ರ ಬಹಿರಂಗಪಡಿಸಲು ಕಡ್ಡಾಯಗೊಳಿಸಲಾಗಿದೆ, ಸಾರ್ವಜನಿಕ ಬಹಿರಂಗಪಡಿಸುವ ಯಾವುದೇ ಬಾಧ್ಯತೆ ಅವರಿಗಿಲ್ಲ. ಈ ವಿಧಾನವು ಅದರ ನ್ಯೂನತೆಗಳನ್ನು ಹೊಂದಿದ್ದರೂ, ಇದು ಆಧಾರವಾಗಿರುವ ಸತ್ಯಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತದೆ. ಅದೇ ರೀತಿ, ಚುನಾವಣಾ ಬಾಂಡ್‌ಗಳ ಯೋಜನೆಯ ಪ್ರಕರಣದಲ್ಲಿ, ಪರಿಷ್ಕರಣೆಗಳನ್ನು ಕಡ್ಡಾಯಗೊಳಿಸಲು ನ್ಯಾಯಾಲಯಕ್ಕೆ ಒಂದು ಸುವರ್ಣ ಅವಕಾಶವಿತ್ತು. ಚುನಾವಣಾ ಆಯೋಗಕ್ಕೆ ದಾನಿಗಳ ವಿವರಗಳನ್ನು ನೀಡಲು, ಬಾಂಡ್‌ಗಳನ್ನು ನೀಡುವ ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ನಿರ್ದೇಶನಗಳನ್ನು ನೀಡಿರಬಹುದು, ಇದರಿಂದಾಗಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಮಾಡಿಕೊಳ್ಳಬಹುದಾಗಿತ್ತು.
ಎಸ್ ಗುರುಮೂರ್ತಿ ಅಂಕಣ: 'ಶ್ವೇತಪತ್ರ Vs ಕಪ್ಪು ತಿಲಕ'
ನಗದು-ಆಧಾರಿತ ವಹಿವಾಟುಗಳನ್ನು ತಡೆಯುವಲ್ಲಿ ಯೋಜನೆಯ ಪಾತ್ರವನ್ನು ಅಂಗೀಕರಿಸಲು ನ್ಯಾಯಾಲಯದ ವಿಫಲತೆಯು ಅಜಾಗರೂಕತೆಯಿಂದ ರಾಜಕೀಯಕ್ಕೆ ಕಪ್ಪು ಹಣದ ಹರಿವನ್ನು ಉಲ್ಭಣಗೊಳಸುವ ಸಾಧ್ಯತೆ ಇದೆ. ಸಮರ್ಥವಾಗಿ ಸರಿಪಡಿಸಬಹುದಾದ ಯೋಜನೆಯನ್ನು ತಿರಸ್ಕರಿಸುವ ಮೂಲಕ, ಚುನಾವಣೆಗಳಲ್ಲಿ ಕಪ್ಪು ಹಣದ ಪುನರುತ್ಥಾನಕ್ಕೆ ನ್ಯಾಯಾಲಯವು ಅರಿವಿಲ್ಲದೆಯೇ ಫ್ಲಡ್‌ಗೇಟ್ ಓಪನ್ ಮಾಡಿದೆ ಎನ್ನಬಹುದು. ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸುವ ನ್ಯಾಯಾಲಯದ ನಿರ್ಧಾರವು ಚುನಾವಣಾ ಹಣಕಾಸಿನ ಸಮಗ್ರತೆಯನ್ನು ಅಪಾಯಕ್ಕೆ ತಳ್ಳುವ ಒಂದು ಹಿನ್ನಡೆ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಮಧ್ಯಸ್ಥಗಾರರು ಯೋಜನೆಯ ಅಂತರ್ಗತ ಪ್ರಯೋಜನಗಳನ್ನು ಗುರುತಿಸುವುದು ಮತ್ತು ರಾಜಕೀಯ ವಾಸ್ತವಗಳ ಸಮೀಪದೃಷ್ಟಿಯ ದೃಷ್ಟಿಕೋನಕ್ಕೆ ಬಲಿಯಾಗುವ ಬದಲು ಸುಧಾರಣೆಯ ಮಾರ್ಗಗಳನ್ನು ಅನ್ವೇಷಿಸುವುದು ಕಡ್ಡಾಯವಾಗಿದೆ. ಈ ತೀರ್ಪು ಅಜಾಗರೂಕತೆಯಿಂದ ಕಪ್ಪು ಹಣದ ಪುನರುತ್ಥಾನಕ್ಕೆ ಸುನಾಮಿ-ಗೇಟ್‌ಗಳನ್ನು ತೆರೆದಿದೆ ಎಂದು ನಾವು ದೃಢವಾಗಿ ನಂಬುತ್ತೇವೆ, ಚುನಾವಣಾ ಬಾಂಡ್‌ಗಳ ಯೋಜನೆಯ ಮೂಲಕ ಅದರ ಪ್ರಭಾವವನ್ನು ತಡೆಯುವಲ್ಲಿ ಮಾಡಿದ ಪ್ರಗತಿಯನ್ನು ಹಿಮ್ಮೆಟ್ಟಿಸಿದೆ.
Viewpoint: ಮಧ್ಯಂತರ ಬಜೆಟ್ 2024-25
ಓದುಗರ ಗಮನಕ್ಕೆ: ಈ ಲೇಖನ ಮೂಲತಃ ತುಘಲಕ್ ತಮಿಳು ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದನ್ನು ತುಗ್ಲಕ್ ಡಿಜಿಟಲ್ www.gurumurthy.net ಗಾಗಿ ಇಂಗ್ಲಿಷ್‌ನಲ್ಲಿ ಅನುವಾದ ಮಾಡಲಾಗಿದ್ದು, ಇದನ್ನು ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನಲ್ಲಿ ಮರಳಿ ಪೋಸ್ಟ್ ಮಾಡಲಾಗಿದೆ.