ತನ್ನನ್ನು ತಾನೇ ಮದುವೆಯಾಗುವ ಮೂಲಕ ಇಡೀ ದೇಶದ ಮಾಧ್ಯಮಗಳನ್ನು ತನ್ನತ್ತ ತಿರುಗುವಂತೆ ಮಾಡಿದ್ದ ಗುಜರಾತ್‌ನ ಯುವತಿ ಕ್ಷಮಾ ಬಿಂದು ಮೊದಲ ಮದ್ವೆ ವಾರ್ಷಿಕೋತ್ಸವದ ಖುಷಿಯಲ್ಲಿದ್ದಾಳೆ. ಇನ್‌ಸ್ಟಾಗ್ರಾಂನಲ್ಲಿ ಈ ಕುರಿತಾದ ವೀಡಿಯೋವನ್ನು ಹಂಚಿಕೊಂಡಿದ್ದಾಳೆ.
ಗುಜರಾತ್‌ನ ಯುವತಿ ಕ್ಷಮಾ ಬಿಂದು ಮೊದಲ ಮದ್ವೆ ವಾರ್ಷಿಕೋತ್ಸವದ ಖುಷಿಯಲ್ಲಿದ್ದಾಳೆ. ಗುಜರಾತ್‌ನ ಕ್ಷಮಾ ಬಿಂದು 2022ರಲ್ಲಿ ಸ್ವಯಂ ವಿವಾಹ ಪದ್ಧತಿಯಂತೆ ಮದುವೆಯಾಗಿದ್ದಳು. ಕ್ಷಮಾ ಬಿಂದು ವಿವಾಹ ಜೂನ್ 11ರಂದು ದೇವಾಲಯದಲ್ಲಿ ನಿಗದಿಯಾಗಿತ್ತು. ಆದರೆ ಈಕೆಯ ವಿವಾಹಕ್ಕೆ ಸ್ಥಳೀಯ ರಾಜಕಾರಣಿಗಳು, ಮುಖಂಡರು, ಪುರೋಹಿತರು ವಿರೋಧ ವ್ಯಕ್ತಪಡಿಸಿದ ಕಾರಣ ಎರಡು ದಿನದ ಮೊದಲೇ ಕ್ಷಮಾ ಬಿಂದು ವಿವಾಹವಾಗಿದ್ದಳು. ಭಾರತದಲ್ಲಿ ಏಕಪತ್ನಿತ್ವ ಅಥವಾ ಸ್ವಯಂ-ವಿವಾಹವನ್ನು ಮಾಡಿಕೊಂಡ ಮೊದಲ ವ್ಯಕ್ತಿಯಾಗಿ ಕ್ಷಮಾ ಬಿಂದು ಗುರುತಿಸಿಕೊಂಡಿದ್ದಾಳೆ. ಸದ್ಯ ಮೊದಲ ಮದ್ವೆ ವಾರ್ಷಿಕೋತ್ಸವದ ಖುಷಿಯಲ್ಲಿರುವ ಕ್ಷಮಾ ಬಿಂದು ಇನ್‌ಸ್ಟಾಗ್ರಾಂನಲ್ಲಿ ಈ ಕುರಿತಾದ ವೀಡಿಯೋವನ್ನು ಹಂಚಿಕೊಂಡಿದ್ದಾಳೆ.
ಇನ್‌ಸ್ಟಾಗ್ರಾಂನಲ್ಲಿ ಈ ಕುರಿತಾಗಿ ವಿಡಿಯೋ ಶೇರ್ ಮಾಡಿರುವ ಕ್ಷಮಾ ಬಿಂದು '1ನೇ ವಾರ್ಷಿಕೋತ್ಸವದ ಶುಭಾಶಯಗಳು' (Wedding Anniversary) ಎಂದು ಬರೆದುಕೊಂಡಿದ್ದಾರೆ. ಆಕೆಯ ಮದುವೆಯ ಪೋಟೋಗಳನ್ನು ಬಳಸಿ ವೀಡಿಯೊವನ್ನು ಮಾಡಲಾಗಿದೆ. ವಿಡಿಯೋದಲ್ಲಿ ಆಕೆ 'ಏಕ್ಲಾ ಚಲೋ ರೇ' ಎಂಬ ಹಚ್ಚೆ ಹಾಕಿಕೊಂಡಿರುವುನ್ನು ನೋಡಬಹುದು. ಈ ಪದಗಳು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಪ್ರಸಿದ್ಧ ಬಂಗಾಳಿ ಕವಿತೆಯಿಂದ ಆಯ್ದುಕೊಳ್ಳಲಾಗಿದೆ. ಒಂಟಿಯಾಗಿ ನಡೆಯಿರಿ ಎಂಬುದು ಇದರ ಅರ್ಥವಾಗಿದೆ.
undefined
ಇವಳಿಗೇನಾಗಿದೆ... ತನ್ನನ್ನೇ ಮದ್ವೆಯಾಗಿ ಡಿವೋರ್ಸ್ ಕೊಟ್ಕೊಂಡ ಲೇಡಿ
ವಿಡಿಯೊವನ್ನು ಒಂದು ದಿನದ ಹಿಂದೆ ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡಾಗಿನಿಂದ, ಇದು ಸುಮಾರು 6,500 ವೀವ್ಸ್ ಸಂಗ್ರಹಿಸಿದೆ. ಸುಮಾರು 1,000 ಲೈಕ್‌ಗಳನ್ನು ಸಂಗ್ರಹಿಸಿದೆ. ಪೋಸ್ಟ್‌ಗೆ ಹಲವಾರು ಕಾಮೆಂಟ್‌ಗಳು ಸಹ ಬಂದಿವೆ. ಅನೇಕರು ಸರಳವಾಗಿ ಆಕೆಯನ್ನು ಹಾರೈಸಿದರು. 'ವಾರ್ಷಿಕೋತ್ಸವದ ಶುಭಾಶಯಗಳು' ಎಂದು ಶುಭ ಕೋರಿದರು. ಇನ್ನು ಕೆಲವರು 'ಅದ್ಭುತ' ಎಂದಿದ್ದಾರೆ. 'ಗ್ರೇಟ್' ಎಂದು ಇನ್ನೊಬ್ಬರು ಹರಸಿದ್ದಾರೆ.
2022ರಲ್ಲಿ ಹುಡುಗನನ್ನು (Boy) ವರಿಸಲು ಇಷ್ಟವಿಲ್ಲದ ಕಾರಣ, ಏಕಾಂಗಿಯಾಗಿ ಜೀವಿಸಲು ನಿರ್ಧರಿಸಿರುವ ಕಾರಣ ಕ್ಷಮಾ ಬಿಂದು ಸ್ವಯಂ ವಿವಾಹದ ನಿರ್ಧಾರ ತೆಗೆದುಕೊಂಡಿದ್ದಳು. ಆಕೆಯ ಈ ನಿರ್ಧಾರವು (Decision) ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ತೀವ್ರ ವಿರೋಧ ವ್ಯಕ್ತವಾಗಿತ್ತು. ಸ್ವ-ವಿವಾಹವು ಸ್ವಯಂ ಬದ್ಧತೆ ಮತ್ತು ಪ್ರೀತಿಯಾಗಿದೆ. ಇದು ಸ್ವಯಂ ಸ್ವೀಕಾರ ಕ್ರಿಯೆಯೂ ಹೌದು. ಜನರು ಪ್ರೀತಿಸುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ. ಆದ್ದರಿಂದ ಈ ಮದುವೆ ಎಂದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಕ್ಷಮಾ ವಿವರಿಸಿದ್ದಳು.
ಕಡಿಮೆ ಅತಿಥಿಗಳು, ರಾಜವೈಭೋಗ, ಇದು ಈಗಿನ ವೆಡ್ಡಿಂಗ್ ಟ್ರೆಂಡ್
ಸೋಲೋಗಮಿ ಎಂದರೇನು?
ಸರಳ ಭಾಷೆಯಲ್ಲಿ ಹೇಳ್ಬೇಕೆಂದ್ರೆ ನಿಮ್ಮನ್ನು ನೀವು ಮದುವೆಯಾಗುವುದಕ್ಕೆ ಸೋಲೋಗಮಿ ಎಂದು ಕರೆಯುತ್ತಾರೆ. ಅಂದ್ರೆ ಇಲ್ಲಿ ವರ ಇರೋದಿಲ್ಲ. ಎರಡು ದಶಕಗಳ ಹಿಂದೆ 2000 ರಲ್ಲಿ ಪಶ್ಚಿಮದಿಂದ ಸ್ವಯಂ ವಿವಾಹ ಅಥವಾ ಏಕಾಂಗಿತ್ವ ಪ್ರಾರಂಭವಾಯಿತು. ಸಾಮಾನ್ಯವಾಗಿ, ಏಕವ್ಯಕ್ತಿತ್ವವು ತನ್ನನ್ನು ತಾನು ಪ್ರೀತಿಸುವ ಅಭಿವ್ಯಕ್ತಿಯಾಗಿ ಕಂಡುಬರುತ್ತದೆ. ತಮ್ಮನ್ನು ತಾವು ಹೆಚ್ಚು ಪ್ರೀತಿಸುವ ವ್ಯಕ್ತಿಗಳಿಗೆ ಪ್ರೀತಿಗಾಗಿ ಇನ್ನೊಬ್ಬರ ಅಗತ್ಯತೆ ಇರುವುದಿಲ್ಲ. ಸೊಲೊಗಮಿ ನಿಮ್ಮನ್ನು ಪ್ರೀತಿಸುವ ವಿಭಿನ್ನ ಪರಿಕಲ್ಪನೆಯಾಗಿದೆ. ಕೆಲವರು ತಮ್ಮನ್ನು ತಾವು ತುಂಬಾ ಇಷ್ಟಪಡುತ್ತಾರೆ, ಅವರು ತಮ್ಮನ್ನು ಮದುವೆಯಾಗುತ್ತಾರೆ.
ಸೋಲೋಗಮಿ ಬಗ್ಗೆ ಕಾನೂನು ಏನು ಹೇಳುತ್ತೆ?
ಭಾರತದಲ್ಲಿ ಹುಡುಗ ಮತ್ತು ಹುಡುಗಿ ಮದುವೆಯಾದ್ರೆ ಅವರ ಮದುವೆಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈಗ ಅನೇಕ ದೇಶಗಳಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೂಡ ಸಿಕ್ಕಿದೆ. ಆದರೆ ಭಾರತದಲ್ಲಿ ಇದುವರೆಗೆ ಪ್ರಮಾಣ ಪತ್ರ ನೀಡಲಾಗಿಲ್ಲ. ಇನ್ನು ಸೋಲೋಗಮಿ ಬಗ್ಗೆ ಹೇಳೋದಾದ್ರೆ ಭಾರತದಲ್ಲಿ ಇಂತಹ ಮದುವೆಗಳನ್ನು ಕಾನೂನು ಗುರುತಿಸುವುದಿಲ್ಲ. ಭಾರತದಲ್ಲಿ ಇದೇ ಮೊದಲ ಮದುವೆ ಇದು. ಸೊಲೊಗಮಿ 90 ರ ದಶಕದಲ್ಲಿ ಪ್ರಾರಂಭವಾಯಿತು. 1993 ರಲ್ಲಿ ಲಿಂಡಾ ಬೇಕರ್ ಎಂಬ ಮಹಿಳೆ ತನ್ನನ್ನು ತಾನೇ ವಿವಾಹವಾದರು. ಲಿಂಡಾ ಬೇಕರ್ ವಿವಾಹವು ಮೊದಲು ಸ್ವಯಂ ವಿವಾಹದ ಸ್ಥಾನಮಾನವನ್ನು ಪಡೆದುಕೊಂಡಿದೆ. ಲಿಂಡಾ ಬೇಕರ್ ಮದುವೆಯಾದಾಗ ಸುಮಾರು 75 ಜನರು ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.