50 ವರ್ಷಗಳಿಂದ ಜಾರಿಯಲ್ಲಿದ್ದ ಗರ್ಭಪಾತದ ಹಕ್ಕು ರದ್ದುಗೊಳಿಸಿದ ಅಮೆರಿಕಾ ಸುಪ್ರೀಂಕೋರ್ಟ್

By Suvarna NewsFirst Published Jun 25, 2022, 3:28 PM IST
Highlights

ಅಮೆರಿಕಾ (America)ದಲ್ಲಿ 50 ವರ್ಷಗಳಿಂದ ಜಾರಿಯಲ್ಲಿದ್ದ ಕಾನೂನುಬದ್ಧ ಗರ್ಭಪಾತದ (Abortion) ಹಕ್ಕನ್ನು ರದ್ದುಕೊಳಿಸಲಾಗಿದೆ ಎಂದು ಅಮೆರಿಕಾದ ಸುಪ್ರೀಂ ಕೋರ್ಟ್ (Supreme Court0 ಐತಿಹಾಸಿಕ ತೀರ್ಪು ನೀಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವಾಷಿಂಗ್ಟನ್: ಮಹಿಳೆಯರ ಗರ್ಭಪಾತದ (Abortion) ಸಾಂವಿಧಾನಿಕ ಹಕ್ಕನ್ನು ಕೊನೆಗೊಳಿಸಿ ಅಮೆರಿಕದ (America) ಸುಪ್ರೀಂಕೋರ್ಟ್ (Supreme court) ತೀರ್ಪು ನೀಡಿದೆ. ಅಮೆರಿಕಾ ಸುಪ್ರೀಂಕೋರ್ಟ್​ ನೀಡಿದ ಈ ತೀರ್ಪಿನ ಪರಿಣಾಮವಾಗಿ ರಿಪಬ್ಲಿಕನ್ ಪಕ್ಷದ ಆಡಳಿತದಲ್ಲಿರುವ ಅಮೆರಿಕದ ಅರ್ಧದಷ್ಟು ರಾಜ್ಯಗಳಲ್ಲಿ ಗರ್ಭಪಾತದ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ಹೀಗಿದ್ದೂ, ಗರ್ಭಪಾತದ ಕುರಿತು ರಾಜ್ಯಗಳು ಪ್ರತ್ಯೇಕ ಕಾರ್ಯವಿಧಾನಕ್ಕೆ ಅನುಮತಿ ನೀಡಬಹುದು ಅಥವಾ ನಿರ್ಬಂಧಿಸಲೂಬಹುದು ಎಂದು ಅಮೆರಿಕಾ ಸುಪ್ರೀಂಕೋರ್ಟ್​ ಆದೇಶದಲ್ಲಿ ಉಲ್ಲೇಖಿಸಿದೆ.

ಅಮೆರಿಕಾದಲ್ಲಿ 50 ವರ್ಷಗಳಿಂದ ಜಾರಿಯಲ್ಲಿದ್ದ ಕಾನೂನುಬದ್ಧ ಗರ್ಭಪಾತದ (Abortion) ಹಕ್ಕನ್ನು ರದ್ದುಕೊಳಿಸಲಾಗಿದೆ. ರೋ ಕೇಸಿ ಪ್ರಕರಣದ ತೀರ್ಪನ್ನು ನಾವು ರದ್ದುಗೊಳಿಸುತ್ತೇವೆ. ಗರ್ಭಪಾತಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವು ಚುನಾಯಿತ ಪ್ರತಿನಿಧಿಗಳು, ಜನರಿಗೆ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಮೆರಿಕದಲ್ಲಿ 1973ರಲ್ಲಿ ರೋಯ್ ವಿ ವೇಡ್ ಪ್ರಕರಣದಲ್ಲಿ ಮಹಿಳೆಯರಿಗೆ ಗರ್ಭಪಾತ ಮಾಡುವ ಸಾಂವಿಧಾನಿಕ ಹಕ್ಕನ್ನು ನೀಡುವ ಮಹತ್ವದ ತೀರ್ಪು ನೀಡಲಾಗಿತ್ತು. ಅಂದಿನಿಂದ ಅಲ್ಲಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಲಾಗಿತ್ತು.

ಯೂಟ್ಯೂಬ್ ನೋಡ್ಕೊಂಡು ಅಬಾರ್ಷನ್ ಮಾಡ್ಕೊಳ್ಳೋಕೆ ಹೊರಟ ಹುಡುಗಿ..ಮುಂದೆ ಆಗಿದ್ದೇನು?

ಆದರೆ, ಅನಿಯಂತ್ರಿತ ಗರ್ಭಪಾತಗಳು ಮತ್ತು ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡಿತ್ತು. ಕಳೆದ ಕೆಲವು ವರ್ಷಗಳಿಂದ ಅಮೆರಿಕದ ಕೆಲವು ಭಾಗಗಳಲ್ಲಿ ಹೋರಾಡುತ್ತಿದ್ದು, ಗರ್ಭಪಾತದ ಹಕ್ಕನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದವು.

ಇದೀಗ ಗರ್ಭಪಾತದ ಕುರಿತು ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನಿಂದ ಕೆಲವರು ಸಂತೋಷಪಟ್ಟರೆ, ಕೆಲವರು ಅದನ್ನು ವಿರೋಧಿಸುತ್ತಿದ್ದಾರೆ. ಈ ಆದೇಶದಲ್ಲಿ ನೂರಾರು ಅಮೆರಿಕನ್ನರು ಸುಪ್ರೀಂಕೋರ್ಟ್ ಮುಂದೆ ಜಮಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆಂದು ತಿಳಿದುಬಂದಿದೆ. ಈ ವೇಳೆ, ಪೊಲೀಸರು ಬಿಗಿ ಭದ್ರತೆ ಕೈಗೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ಮಾಡಿದರು. ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಸ್ವಲ್ಪ ಸಮಯದ ನಂತರ ಸುಮಾರು 25 ರಿಂದ 50 ರಾಜ್ಯಗಳು ಗರ್ಭಪಾತದ ಮೇಲೆ ನಿಷೇಧವನ್ನು ಘೋಷಿಸಿದವು. ಯುನೈಟೆಡ್ ಸ್ಟೇಟ್ಸ್​ನ ಮಿಸೌರಿ ರಾಜ್ಯವು ಗರ್ಭಪಾತವನ್ನು ನಿಷೇಧಿಸಿದ ಮೊದಲ ರಾಜ್ಯವಾಯಿತು.

ಋತುಬಂಧ ರೋಗವಲ್ಲ, ಮಹಿಳೆಯ ಜೀವನದ ನೈಸರ್ಗಿಕ ಹಂತ; ತಜ್ಞರ ತಂಡ

1931ರ ಕಾನೂನಿನಿಂದ ವಿನಾಯಿತಿ
ಮಿಚಿಗನ್ ಗವರ್ನರ್ ಗ್ರೆಚೆನ್ ವಿಟ್ಮರ್, ಡೆಮೋಕ್ರಾಟ್, ಮಿಚಿಗನ್‌ನ ಕ್ರಿಮಿನಲ್ ಗರ್ಭಪಾತ ನಿಷೇಧ ಕಾಯ್ದೆಯು ಸಂವಿಧಾನವನ್ನು ಉಲ್ಲಂಘಿಸುತ್ತದೆಯೇ ಎಂಬುದರ ಕುರಿತು ತನ್ನ ಮೊಕದ್ದಮೆಯನ್ನು ತಕ್ಷಣವೇ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದರು. 1931 ರ ಕಾನೂನು ಗರ್ಭಪಾತವನ್ನು ಅತ್ಯಾಚಾರ ಅಥವಾ ಸಂಭೋಗದ ಪ್ರಕರಣಗಳಲ್ಲಿ ವಿನಾಯಿತಿ ನೀಡುತ್ತದೆ. ಇದು ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧವಾಗಿದೆ ಎಂದು ಹೇಳಿದೆ.

ಗರ್ಭಪಾತ ಕಾನೂನಿನ ವಿರುದ್ಧ ಮೊಕದ್ದಮೆ
ಗರ್ಭಪಾತ ಸಂಬಂಧದ ವಿಟ್ಮರ್‌ನ ಮೊಕದ್ದಮೆಯನ್ನು ಏಪ್ರಿಲ್‌ನಲ್ಲಿ ಸಲ್ಲಿಸಲಾಗಿತ್ತು. ಮೇ ತಿಂಗಳಲ್ಲಿ ಮಿಚಿಗನ್ ಕೋರ್ಟ್ ಆಫ್ ಕ್ಲೈಮ್ಸ್ ಗರ್ಭಪಾತ ಕಾನೂನಿನ ವಿರುದ್ಧ ಪೇರೆಂಟ್‌ಹುಡ್ ಮತ್ತು ಎಸಿಎಲ್‌ಯು ಸಲ್ಲಿಸಿದ ಮೊಕದ್ದಮೆಯಲ್ಲಿ ಪ್ರಾಥಮಿಕ ತಡೆಯಾಜ್ಞೆಯನ್ನು ನೀಡಿತು. ಇದು ಸದರಿ ಮೊಕದ್ದಮೆಯಲ್ಲಿ ತೀರ್ಪು ಬರುವವರೆಗೆ ಜಾರಿಗೆ ಬರುವುದನ್ನು ತಡೆಯುತ್ತದೆ.

ರೋಯ್ ವರ್ಸಸ್ ವೇಡ್ ಎಂದರೇನು?
ರೋಯ್ ವಿ. ವೇಡ್ ಪ್ರಕರಣದಲ್ಲಿ U.S. ಸಂವಿಧಾನದ ಅಡಿಯಲ್ಲಿ ವೈಯಕ್ತಿಕ ಗೌಪ್ಯತೆಯ ಹಕ್ಕು ಮಹಿಳೆಯ ಗರ್ಭಾವಸ್ಥೆಯನ್ನು ಅಂತ್ಯಗೊಳಿಸುವ ಸಾಮರ್ಥ್ಯವನ್ನು ರಕ್ಷಿಸುತ್ತದೆ ಎಂದು ಗುರುತಿಸಿದ್ದಾರೆ. ಆಗ್ನೇಯ ಪೆನ್ಸಿಲ್ವೇನಿಯಾ ವಿರುದ್ಧ ಪ್ಲಾನ್ಡ್ ಪೇರೆಂಟ್‌ಹುಡ್ ಎಂಬ 1992 ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಗರ್ಭಪಾತದ ಹಕ್ಕುಗಳನ್ನು ಪುನರುಚ್ಚರಿಸಿತು ಮತ್ತು ಗರ್ಭಪಾತದ ಪ್ರವೇಶದ ಮೇಲೆ "ಅನಗತ್ಯ ಹೊರೆ" ಹೇರುವ ಕಾನೂನುಗಳನ್ನು ನಿಷೇಧಿಸಿತು.

ಅಮೆರಿಕಾಕ್ಕೆ ದುಃಖದ ದಿನ:
ಗರ್ಭಪಾತದ ಹಕ್ಕುಗಳನ್ನು ರದ್ದುಗೊಳಿಸುವ ಸುಪ್ರೀಂಕೋರ್ಟ್ ತೀರ್ಪಿಗೆ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದ್ದಾರೆ. ಇಂದು ಅಮೆರಿಕಕ್ಕೆ ಅತ್ಯಂತ ದುಃಖದ ದಿನವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸುಪ್ರೀಂಕೋರ್ಟ್ ತೀರ್ಪು ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದೆ. ಮಹಿಳೆಯರ ಆರೋಗ್ಯ ಮತ್ತು ಜೀವನ ಅಪಾಯದಲ್ಲಿ ಬಿದ್ದಿದೆ ಎಂದು ಹೇಳಿದರು.

click me!