Latest Videos

ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಮೊದಲೇ ತಿಳಿಸುತ್ತೇವೆ ಈ ಚೈನಾ ಚಾರ್ಟ್!

By Gowthami KFirst Published Jun 26, 2024, 3:16 PM IST
Highlights

ಚೈನಾದಲ್ಲಿ ಈ ಚಾರ್ಟ್ ನಿಂದ ಕೂಸು ಹುಟ್ಟುವ ಮುನ್ನವೇ ಅದರ ಭ್ರೂಣವನ್ನು ಕಂಡು ಹಿಡಿಯುತ್ತಾರೆ. ಇದು 700 ವರ್ಷಗಳ ಹಿಂದಿನ ಚಾರ್ಟ್ ಆಗಿದೆ. ರಾಜನ ಸಮಾಧಿಯಲ್ಲಿ ಇದು ಸಿಕ್ಕಿತಂತೆ.

ತಾನು ಗರ್ಭಿಣಿ ಎಂದು ಗೊತ್ತಾದ ತಕ್ಷಣ ಪ್ರತಿ ಹೆಣ್ಣು ಕೂಡ ತನ್ನ ಗರ್ಭದಲ್ಲಿರುವ ಮಗು ಗಂಡೋ ಹೆಣ್ಣೋ ಎಂಬ ಕುತೂಹಲವಿದ್ದೇ ಇರುತ್ತದೆ.  ಗರ್ಭದಲ್ಲಿರುವ ಮಗು ಹೆಣ್ಣೋ ಅಥವಾ ಗಂಡೋ ಎಂದು ಪತ್ತೆ ಮಾಡಲು ಹಿಂದಿನಿಂದಲೂ ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಕೆಲವೊಂದು ಗರ್ಭಿಣಿಯ ಗುಣ ಲಕ್ಷಣಗಳಿಂದ ಹಿರಿಯರು ಯಾವ ಮಗು ಎಂದು ಹೇಳುತ್ತಿದ್ದರು. ಭಾರತದಲ್ಲಿ ಭ್ರೂಣ ಪತ್ತೆ ಕಾನೂನು ಬಾಹಿರವಾಗಿದೆ. ಭ್ರೂಣ ಯಾವುದೆಂದು ತಿಳಿದುಕೊಂಡರೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ.

ಹೆಣ್ಣು ಮಗು ಬೇಕೋ ಗಂಡೊ ಎಂದು ಕೇಳಿದ ಪ್ರಶ್ನೆಗೆ ಲಡ್ಡು-ಪೇಡಾ ಉದಾಹರಣೆ ಕೊಟ್ಟ ರಣವೀರ್ ಸಿಂಗ್!

ಆದರೆ ಚೈನಾದಲ್ಲಿ ಈ ಚಾರ್ಟ್ ನಿಂದ ಕೂಸು ಹುಟ್ಟುವ ಮುನ್ನವೇ ಅದರ ಭ್ರೂಣವನ್ನು ಕಂಡು ಹಿಡಿಯುತ್ತಾರೆ. ಇಲ್ಲಿ ನೀಡಿರುವ ಪಟ್ಟಿಯ ಮೂಲಕ ಹುಟ್ಟಲಿರುವ ಮಗು ಗಂಡೋ? ಹೆಣ್ಣೋ? ಎಂದು ಮೊದಲೇ ತಿಳಿಯಬಹುದು. ಇದರಲ್ಲಿ ವಯಸ್ಸನ್ನು 18ರಿಂದ 45ರವರೆಗೆ ಅಡ್ಡವಾಗಿಯೂ ತಿಂಗಳುಗಳನ್ನು ಉದ್ದಕ್ಕೂ ಕೊಡಲಾಗಿದೆ. "ಹೆ" ಎಂದರೆ ಹೆಣ್ಣು ಮಗುವೆಂದು "ಗ" ಎಂದರೆ ಗಂಡು ಮಗುವೆಂದು ಅಂದುಕೊಳ್ಳಬೇಕು. 

ಉದಾಹರಣೆಗೆ ಸ್ತ್ರೀಯ ವಯಸ್ಸು 26 ಆಗಿದ್ದು ಆಕೆ ನವೆಂಬರ್ ತಿಂಗಳಿನಲ್ಲಿ ಗರ್ಭಿಣಿಯಾಗಿದ್ದರೆ (ಗರ್ಭ ನಿಂತರೆ) ಆಕೆಗೆ ಹುಟ್ಟಲಿರುವ ಮಗು ಹೆಣ್ಣಾಗಿರುತ್ತದೆ. ಶೇ.97ರವರೆಗೆ ನಿಜವಾಗುತ್ತದೆಂದು ಖ್ಯಾತಿ ಪಡೆದ ಚಾರ್ಟ್ ಇದಾಗಿದೆ. ಅಂದರೆ 3% ಸುಳ್ಳಾಗಬಹುದು. ಈ ಚಾರ್ಟ್ ಚೈನಾದಲ್ಲಿ ಒಬ್ಬ ರಾಜನ ಸಮಾಧಿಯಲ್ಲಿ  700 ವರ್ಷಗಳ ಹಿಂದೆ ಸಿಕ್ಕಿತು. ಇದರ ಮೂಲ ಚಾರ್ಟ್ ಚೈನಾದಲ್ಲಿರುವ ಬೀಜಿಂಗ್ ಸೈನ್ಸ್ ಆಫ್ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ಇಂದಿಗೂ ಭದ್ರವಾಗಿದೆ.

ಬೋಳು ತಲೆಗೆ ಕೂದಲು ಕಸಿ ಮಾಡಿಸಿಕೊಂಡ ಕನ್ನಡದ ಸ್ಟಾರ್ ನಟರಿವರು!

ಆದರೆ ನೆನಪಿಡಿ ಗರ್ಭಧಾರಣೆಯ ಏಳು ವಾರಗಳ ತನಕ ಶಿಶು ಯಾವುದೇ ಲಿಂಗವನ್ನು ಹೊಂದಿರುವುದಿಲ್ಲ. ಇದರ ಐದು ವಾರಗಳ ಬಳಿಕ ಶಿಶು ಹಾರ್ಮೋನ್ ಬಿಡುಗಡೆ ಆರಂಭಿಸುವುದು ಮತ್ತು ಇದರಿಂದ ಶಿಶುವಿನ ಲೈಂಗಿಕ ಅಂಗಾಂಗಗಳು ಬೆಳವಣಿಗೆ ಆಗುತ್ತದೆ ಎಂಬುದು ವಿಜ್ಞಾನದಲ್ಲಿ ಉಲ್ಲೇಖವಿದೆ.

ಆದರೆ ನೆನಪಿಡಿ, ಕೆಲವೊಂದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಸಾಮಾನ್ಯವಾಗಿ ಕೆಲವು ಚಿಹ್ನೆಗಳು ಗಂಡು ಮಗುವನ್ನು ಸಂಕೇತಿಸಿದರೆ ಕೆಲವು ಹೆಣ್ಣು ಮಗು ಎಂಬುದರ ಸಂಕೇತವಾಗಿವೆ. ಹಳ್ಳಿಯ ಕಡೆ ಇಂದಿಗೂ ಹಿರಿಯರು ಹೇಳುವುದಿದೆ. ಗರ್ಭಿಣಿ ದೈಹಿಕವಾಗಿ ಸಣ್ಣವಿದ್ದು, ಹೊಟ್ಟೆ ಸಣ್ಣದಿದ್ದರೆ ಗಂಡು ಮಗು, ಗರ್ಭಿಣಿ ದಪ್ಪವಾಗಿ ಹೊಟ್ಟೆ ಕೂಡ ದೊಡ್ಡದಾಗಿದ್ದರೆ ಹೆಣ್ಣು ಮಗುವೆಂದು. ಆದರೆ ಎಲ್ಲಾ ಸಂದರ್ಭಗಳಲ್ಲಿ  ಇದು ನಿಜವಾಗಿಲ್ಲ. ಹೊಟ್ಟೆ ಮೇಲೆ ಇದ್ದರೆ ಹೆಣ್ಣು ಮಗು, ಹೊಟ್ಟೆ ಕೆಳಗೆ ಇದ್ದರೆ ಗಂಡು ಮಗು ಎಂಬ ನಂಬಿಕೆ ಇದೆ. ಇದು ಕೂಡ ಎಲ್ಲೂ ಸಾಭೀತಾಗಿಲ್ಲ. 

ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯುವ ಕೌತುಕದ ಬದಲು ಹುಟ್ಟುವ ಮಗು ಆರೋಗ್ಯವಾಗಿ ಇರಲಿ ಎಂದು ಪ್ರಾರ್ಥಿಸುವುದು ಅಷ್ಟೇ ಮುಖ್ಯ ಎಂಬುದನ್ನು ಮರೆಯದಿರಿ. ಈಗಿನ ಕಾಲದಲ್ಲಿ ಆರೋಗ್ಯಕರ ಮಗು ಜನಿಸುವುದು ತುಂಬಾ ಮುಖ್ಯ. ಉತ್ತಮವಾದ ಆಹಾರವನ್ನು ತಿನ್ನಿ ಆರೋಗ್ಯಕರ ಮಗುವಿಗೆ ಜನ್ಮ ನೀಡಿ ಖುಷಿಯಾಗಿರಿ. ಮಗು ಗಂಡೋ ಅಥವಾ ಹೆಣ್ಣೋ ಎಂಬುದು ಮುಖ್ಯವಲ್ಲ ಎಂಬುದನ್ನು ಎಂದಿಗೂ ನೆನಪಿಡಿ.

click me!