ನಾವು ಧರಿಸುವ ಒಳ ಉಡುಪಿನ ಬಗ್ಗೆ ನಿರ್ಲಕ್ಷ್ಯ ಮಾಡೋರೇ ಹೆಚ್ಚು. ಅದು ಯಾರಿಗೂ ಕಾಣಲ್ಲ ಎನ್ನುವ ಕಾರಣಕ್ಕೆ ಹಳೆಯ, ಹರಿದ ಬಟ್ಟೆ ಧರಿಸ್ತಾರೆ. ಆದ್ರೆ ಅದು ತುಂಬಾ ಮಹತ್ವದ್ದು. ಎಚ್ಚರ ತಪ್ಪಿದ್ರೆ ಸೋಂಕು ನಿಶ್ಚಿತ.
ಪ್ರತಿಯೊಂದು ಪದಾರ್ಥಕ್ಕೂ ಎಕ್ಸ್ ಪೈರಿ ಡೇಟ್ ಇರುತ್ತದೆ. ಆಹಾರಗಳನ್ನು ಹಾಗೂ ಮಾತ್ರೆಗಳನ್ನು ಎಕ್ಸ್ ಪೈರಿ ಡೇಟ್ ಮುಗಿದ ನಂತ್ರವೂ ಸೇವನೆ ಮಾಡಿದ್ರೆ ಆರೋಗ್ಯ ಹಾಳಾಗುತ್ತದೆ. ತಿನ್ನುವ ಪದಾರ್ಥಗಳು ಮಾತ್ರವಲ್ಲ ಬಳಸುವ ವಸ್ತುಗಳಿಗೂ ಕೊನೆ ದಿನಾಂಕವಿರುತ್ತದೆ. ಯಾವುದೇ ವಸ್ತುಗಳನ್ನು ಕೊಂಡುಕೊಳ್ಳುವ ಮುನ್ನ ನಾವು ಎಕ್ಸ್ ಪೈರಿ ಡೇಟ್ ಪರಿಶೀಲನೆ ಮಾಡ್ಬೇಕು.
ಆಹಾರ (Food), ಮಾತ್ರೆ, ಕ್ರೀಂ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿಸುವ ಮೊದಲು ನಾವು ಎಕ್ಸ್‌ಪೈರಿ ಡೇಟ್ (Expiry Date ) ಪರಿಶೀಲನೆ ಮಾಡುತ್ತೇವೆ. ಆದ್ರೆ ಬಟ್ಟೆ ವಿಷ್ಯದಲ್ಲಿ ಇದನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡ್ತೇವೆ. ಬಟ್ಟೆ ಖರೀದಿ ಮಾಡುವಾಗ ಎಕ್ಸ್ ಪೈರಿ ಡೇಟ್ ನೋಡೋದು ಸಾಧ್ಯವಿಲ್ಲ. ಆದ್ರೆ ನೀವು ಬಳಕೆ ಸಮಯದಲ್ಲಿ ಅದರ ಎಕ್ಸ್ ಪೈರಿ ಡೇಟ್ ಪರೀಕ್ಷೆ ಮಾಡ್ಬೇಕಾಗುತ್ತದೆ. ಯಾವುದೇ ಬಟ್ಟೆ ಮೇಲೆ ಕೊನೆ ದಿನಾಂಕವನ್ನು ಮುದ್ರಿಸಿರೋದಿಲ್ಲ. ಆದ್ರೆ ಆ ಬಟ್ಟೆಯಲ್ಲಿ ಕಾಣಿಸಿಕೊಳ್ಳುವ ಕೆಲ ಕಲೆ, ಲಕ್ಷಣಗಳಿಂದ ನಾವು ಇದನ್ನು ಕಸಕ್ಕೆ ಹಾಕುವ ಸಮಯ ಬಂದಿದೆ ಎಂದು ತಿಳಿಯಬೇಕು. ದುಬಾರಿ ಬೆಲೆಯ ಒಳ ಉಡುಪಿ (Innerwear) ರಲಿ ಇಲ್ಲ ಅಗ್ಗದ ಒಳ ಉಡುಪಿರಲಿ ಅದರ ಸ್ವಚ್ಛತೆ ಬಹಳ ಮುಖ್ಯ. ಪ್ರತಿ ದಿನ ಅದನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ದೀರ್ಘ ಕಾಲದವರೆಗೆ ಒಂದೇ ಪ್ಯಾಂಟಿಯನ್ನು ಬಳಸಬಾರದು. ಕೆಲ ಸಂದರ್ಭದಲ್ಲಿ ಪ್ಯಾಂಟಿ ನಮಗೆ ಇಷ್ಟವಾಗಿರುತ್ತದೆ. ಅದನ್ನು ಬದಲಿಸಲು ಮನಸ್ಸು ಬರೋದಿಲ್ಲ. ವರ್ಷಗಟ್ಟಲೆ ಅದೇ ಪ್ಯಾಂಟಿಯನ್ನು ಧರಿಸುತ್ತಿರುತ್ತೇವೆ. ಆದ್ರೆ ಇದು ತಪ್ಪು. ಪ್ಯಾಂಟಿ ಬದಲಿಸುವ ದಿನ ಬಂದಿದೆ ಎಂಬುದನ್ನು ನೀವು ಕೆಲ ಚಿಹ್ನೆಗಳ ಮೂಲಕ ತಿಳಿದುಕೊಳ್ಳಬೇಕು.
undefined
Winter Care: ಚಳಿಯಲ್ಲಿ ಒಳ ಉಡುಪಿನ ಬಗ್ಗೆ ಇರಲಿ ಹೆಚ್ಚಿನ ಎಚ್ಚರ
ಪ್ಯಾಂಟಿ ಎಕ್ಸ್ ಪೈರಿ ಡೇಟ್ ಚಿಹ್ನೆ :
ವಾಸನೆ (Bad Odor) : ನಿಮ್ಮ ಪ್ಯಾಂಟಿಯಿಂದ ನಿರಂತರವಾಗಿ ವಾಸನೆ ಬರ್ತಿದೆ ಎಂದಾದ್ರೆ ನೀವು ಪ್ಯಾಂಟಿ ಬದಲಿಸುವ ದಿನ ಬಂದಿದೆ ಎಂದರ್ಥ. ನೀವು ಅದನ್ನೇ ಬಳಕೆ ಮಾಡ್ತಿದ್ದರೆ ಯೋನಿ ಆರೋಗ್ಯ ಹದಗೆಡುವ ಸಾಧ್ಯತೆಯಿರುತ್ತದೆ. ತಕ್ಷಣ ಅದನ್ನು ಮೂಲೆಗೆಸೆದು ಹೊಸ ಪ್ಯಾಂಟಿ ಧರಿಸಲು ಶುರು ಮಾಡಿ.
ಮಾಸದ ಕಲೆ : ಯೋನಿ ಡಿಸ್ಚಾರ್ಜ್ ಹೆಚ್ಚಾದಾಗ ಪ್ಯಾಂಟಿಯ ಬಣ್ಣದಲ್ಲಿ ಬದಲಾವಣೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಡಾರ್ಕ್ ಪ್ಯಾಂಟಿಯ ಬಣ್ಣದಲ್ಲಿ ಬದಲಾವಣೆಗೆ ಕಾರಣ ಯೋನಿ ಡಿಸ್ಚಾರ್ಜ್ ನ ಪಿಎಚ್ ಮಟ್ಟ. ಪ್ಯಾಂಟಿ ತೊಳೆದು ಬಿಸಿಲಿನಲ್ಲಿ ಒಣಗಿಸಿದಾಗ ಯೋನಿ ಡಿಸ್ಚಾರ್ಜ್ ಬಣ್ಣ ಬದಲಾಗುತ್ತದೆ. ಇದರಿಂದ ಪ್ಯಾಂಟಿ ಬಣ್ಣ ಕೂಡ ಬದಲಾಗುತ್ತದೆ.
ಆನ್ಲೈನ್ ನಲ್ಲಿ ಪ್ಯಾಂಟಿ ಖರೀದಿಸುವ ಮುನ್ನ..
ಆಕಾರ ಹಾಗೂ ಬಣ್ಣದಲ್ಲಿ ಬದಲಾವಣೆ : ಒಂದೇ ಪ್ಯಾಂಟಿಯನ್ನು ಪದೇ ಪದೇ ಬಳಸಿ, ಸ್ವಚ್ಛಗೊಳಿಸುವ ಕಾರಣ ಅದು ಹಾಳಾಗುತ್ತದೆ. ಅದ್ರ ಬಣ್ಣದ ಜೊತೆಗೆ ಆಕಾರವೂ ಬದಲಾಗುತ್ತದೆ. ಮೊದಲು ನಿಮ್ಮ ದೇಹಕ್ಕೆ ಫಿಟ್ ಆಗ್ತಿದ್ದ ಪ್ಯಾಂಟಿ ಈಗ ಸಡಿಲಗೊಳ್ಳುತ್ತದೆ. ಪ್ಯಾಂಟಿ ಸಡಲಿ ಅಥವಾ ಬಿಗಿಯಾದ ಅನುಭವವಾದ್ರೆ ಆ ಪ್ಯಾಂಟಿಯನ್ನು ಮತ್ತೆ ಧರಿಸಬೇಡಿ.
ಬಿಗಿಯಾಗುವ ಪ್ಯಾಂಟಿ : ನಮ್ಮ ತೂಕ ಒಂದೇ ರೀತಿ ಇರೋದಿಲ್ಲ. ತೂಕ ಹೆಚ್ಚಾದಂತೆ ಹಳೆ ಪ್ಯಾಂಟಿ ಬಳಸೋದು ಕಷ್ಟ. ಪ್ಯಾಂಟಿ ಟೈಟ್ ಆಗಲು ಶುರುವಾಗುತ್ತದೆ. ಟೈಟ್ ಪ್ಯಾಂಟಿ ಧರಿಸಿದ್ರೆ ಚರ್ಮದ ಆರೋಗ್ಯ ಹಾಳಾಗುತ್ತದೆ. ಚರ್ಮಕ್ಕೆ ಸರಿಯಾಗಿ ಉಸಿರಾಡಲು ಸಾಧ್ಯವಾಗೋದಿಲ್ಲ. ಯೋನಿ ಸುತ್ತಮುತ್ತ ಸೋಂಕು ಕಾಣಿಸಿಕೊಳ್ಳುತ್ತದೆ. ಬೆವರು ಸರಿಯಾಗಿ ಆರದ ಕಾರಣ ಬ್ಯಾಕ್ಟೀರಿಯಾ ಬೆಳೆಯುತ್ತದೆ. ತುರಿಕೆ, ಕೆಂಪು ಗುಳ್ಳೆ ಸೇರಿದಂತೆ ಅನಾರೋಗ್ಯ ಕಾಡುತ್ತದೆ.
ಪ್ಯಾಂಟಿಯಿಂದ ಯೋನಿ ಆರೋಗ್ಯ ಹದಗೆಡಬಾರದು ಎಂದಾದ್ರೆ ಅದ್ರ ಸ್ವಚ್ಛತೆ ಜೊತೆಗೆ ಆಗಾಗ ಪ್ಯಾಂಟಿ ಬದಲಿಸುವುದನ್ನು ಕಲಿಯಬೇಕು.