ಕೆಲಸ ಮಾಡಿದ್ಮೇಲೆ ಅದಕ್ಕೆ ತಕ್ಕಂತೆ ಸಿಬ್ಬಂದಿ ವೇತನ ಪಡೆಯಬೇಕು. ಸಂಬಳದ ವಿಷ್ಯದಲ್ಲಿ ಲಿಂಗತಾರತ್ಯವಾಗ್ತಿದ್ದರೆ ಅಥವಾ ಒಂದೇ ಕೆಲಸಕ್ಕೆ ಬೇರೆ ಬೇರೆ ಉದ್ಯೋಗಿಗೆ ಬೇರೆ ಬೇರೆ ಸಂಬಳ ಸಿಗ್ತಿದ್ದರೆ ಅದರ ವಿರುದ್ಧ ಪ್ರಶ್ನೆ ಮಾಡುವ ಹಕ್ಕು ಕೂಡ ಉದ್ಯೋಗಿಗಳಿಗಿದೆ.
ಮಹಿಳೆ, ಪುರುಷರಿಗೆ ಸಮನವಾಗಿ ಕೆಲಸ ಮಾಡ್ತಿದ್ದಾಳೆ. ಪ್ರತಿಯೊಂದು ಕ್ಷೇತ್ರದಲ್ಲೂ ಸಾಧಕಿ ಮಹಿಳೆಯರಿದ್ದಾರೆ. ಭಾರತ ಪುರುಷ ಪ್ರಧಾನ ದೇಶ. ಇಲ್ಲಿ ಸಮಾನ ಅವಕಾಶದ ಜೊತೆ ಸಮಾನ ಹಕ್ಕು ನೀಡುವಂತೆ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಎಷ್ಟೇ ಬುದ್ಧಿವಂತಿಕೆಯಿದ್ರೂ ಪುರುಷರಿಗೆ ಸಮನಾದ ಸಂಬಳ ಮಹಿಳೆಗೆ ಸಿಗ್ತಿಲ್ಲ.
ಸಿನಿಮಾ (Movie) ರಂಗದಿಂದ ಹಿಡಿದು ಕ್ರಿಕೆಟ್ (Cricket), ಕ್ರೀಡೆ ಸೇರಿದಂತೆ ಸಾಮಾನ್ಯ ಕಂಪನಿಗಳಲ್ಲಿ, ಕೂಲಿ ಕೆಲಸದಲ್ಲಿ ಕೂಡ ಮಹಿಳೆಗೆ ಪುರುಷರಿಗಿಂತ ಕಡಿಮೆ ಸಂಬಳ (Salary) ನೀಡಲಾಗುತ್ತದೆ. ಈ ಬಗ್ಗೆ ಆಗಾಗ ಮಹಿಳೆಯರು ಧ್ವನಿ ಎತ್ತುತ್ತಲೇ ಇದ್ದಾರೆ. ಆದ್ರೆ ಅವರ ಧ್ವನಿ ಅಡಗಿಸುವ ಕೆಲಸ ಕೂಡ ನಿರಂತರವಾಗಿ ನಡೆಯುತ್ತಿದೆ. ನಿಮ್ಮ ಕಚೇರಿ (Office) ಯಲ್ಲಿ ಪುರುಷ ಸಹೋದ್ಯೋಗಿಗೆ ಸಮನಾಗಿ ನಿಮಗೆ ಸಂಬಳ ಸಿಗ್ತಿಲ್ಲ, ವೇತನ ವಿಷ್ಯದಲ್ಲಿ ತಾರತಮ್ಯವಾಗ್ತಿದೆ ಅಂದ್ರೆ ನೀವು ಹೋರಾಡಬಹುದು. ನ್ಯಾಯಕ್ಕಾಗಿ ನೀವು ಎದ್ದು ನಿಲ್ಲುವ ಹಕ್ಕನ್ನು ಹೊಂದಿದ್ದೀರಿ. ಸಮಾನ ವೇತನಬೇಕೆಂದ್ರೆ ನೀವು ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೆವೆ.
undefined
ಮೊದಲು ಕಚೇರಿಯಲ್ಲಿ ಈ ವಿಷ್ಯ ಚರ್ಚಿಸಿ : ನಿಮಗೆ ಸಂಬಳ ಕಡಿಮೆಯಾಗಿದೆ ಎಂಬುದು ತಿಳಿದ ನಂತರ ಮೊದಲು ಕಂಪನಿಯಲ್ಲಿಯೇ ಮಾತನಾಡಬೇಕು. ಇದಕ್ಕಾಗಿ ನೀವು ಸಭೆ ನಡೆಸಬಹುದು. ಕಂಪನಿ ವ್ಯವಸ್ಥಾಪಕರು ಅಥವಾ ಮುಖ್ಯಸ್ಥರ ಮುಂದೆ ನೀವು ಈ ವಿಷ್ಯವನ್ನು ಚರ್ಚಿಸಬೇಕು. ಹಿರಿಯ ಅಧಿಕಾರಿಗಳ ಮುಂದೆ ಕಿರುಚಾಡಿ, ಜಗಳವಾಡಿ ನೀವು ಸಮಸ್ಯೆ ದೊಡ್ಡದು ಮಾಡಬೇಡಿ. ನ್ಯಾಯಯುತವಾಗಿ ಸಂಬಳ ಹೆಚ್ಚಿಸುವಂತೆ ನೀವು ಬೇಡಿಕೆಯಿಡಿ. ಕೆಲವೊಮ್ಮೆ ಸಹೋದ್ಯೋಗಿ ಪುರುಷ ಸೇರಿದ ಸಮಯ ಹಾಗೂ ನೀವು ಕೆಲಸಕ್ಕೆ ಸೇರಿದ ಸಮಯದಲ್ಲಿ ವ್ಯತ್ಯಾಸವಿರಬಹುದು. ಆಗ ಆರ್ಥಿಕ ಸ್ಥಿತಿ ಉತ್ತಮವಾಗಿದ್ದ ಕಾರಣ ಹೆಚ್ಚಿಗೆ ಸಂಬಳ ನೀಡಲಾಗ್ತಿದೆ ಎಂದು ಹಿರಿಯ ಅಧಿಕಾರಿಗಳು ಹೇಳಬಹುದು. ಹಾಗಾಗಿ ಮೊದಲು ಕಂಪನಿ ಯಾವ ಕಾರಣಕ್ಕೆ ತಾರತಮ್ಯ ಮಾಡಿದೆ ಎಂಬುದನ್ನು ಪತ್ತೆ ಹಚ್ಚಿ. ನೀವು ಸ್ತ್ರೀ ಎನ್ನುವ ಕಾರಣಕ್ಕೆ ಹಾಗೆ ಮಾಡ್ತಿದ್ದರೆ ಹಾಗೂ ನೀವು ನ್ಯಾಯುತವಾಗಿ ಸಂಬಳ ಹೆಚ್ಚಿಸುವಂತೆ ಕೇಳಿದ್ರೂ ನಿಮಗೆ ನ್ಯಾಯ ಸಿಕ್ಕಿಲ್ಲವೆಂದಾಗ ನೀವು ಮುಂದಿನ ನಿಧಾರ ಕೈಗೊಳ್ಳಬೇಕಾಗುತ್ತದೆ.
ಅತಿ ಮೊಬೈಲ್ ಬಳಕೆಯಿಂದ ವೈವಾಹಿಕ ಸಂಬಂಧಕ್ಕೆ ಧಕ್ಕೆ!
ನಿಮ್ಮ ನೆರವಿಗೆ ಬರಲಿದೆ ಹೈಕೋರ್ಟ್ (High Court) : ನಿಮ್ಮ ಕಂಪನಿಯಲ್ಲಿ ಮಾತನಾಡಿದ ನಂತರ ನೀವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೀವು ಆರ್ಟಿಕಲ್ 14 ಮತ್ತು 15 ರ ಆಧಾರದ ಮೇಲೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆರ್ಟಿಕಲ್ 14 ನಿಮಗೆ ಸ್ವಾತಂತ್ರ್ಯದ ಹಕ್ಕನ್ನು ನೀಡುತ್ತದೆ. ಆದರೆ ಆರ್ಟಿಕಲ್ 15 ನಿಮ್ಮನ್ನು ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಆಗದಂತೆ ತಡೆಯುತ್ತದೆ. ಹಾಗಾಗಿ ನೀವು ಈ ಎರಡು ಆರ್ಟಿಕಲ್ ಬಳಸಿಕೊಂಡು ಸಂಬಳ ಹೆಚ್ಚಿಸುವಂತೆ ಅರ್ಜಿ ಸಲ್ಲಿಸಬಹುದಾಗಿದೆ.
ಸಮಾನ ಸಂಬಳ (Equal Package) ಪಡೆಯುವುದರಲ್ಲಿ ತಪ್ಪಿಲ್ಲ : ನಾವು ಮಾಡುವ ಕೆಲಸಕ್ಕೆ ಸರಿಯಾದ ಸಂಬಳ ಪಡೆಯುವುದು ನಮ್ಮ ಹಕ್ಕು. ಒಂದೇ ಕೆಲಸವನ್ನು ಪುರುಷ ಹಾಗೂ ಮಹಿಳೆ ಇಬ್ಬರೂ ಮಾಡ್ತಿದ್ದು, ಪುರುಷರಿಗೆ ಮಾತ್ರ ಹೆಚ್ಚು ಸಂಬಳ ನೀಡುವುದು ಸೂಕ್ತವಲ್ಲ. ಪುರುಷನಿಗೆ ಸಮಾನವಾದ ಸಂಬಳವನ್ನು ಪಡೆಯುವ ಹಕ್ಕನ್ನು ಮಹಿಳೆ ಹೊಂದಿದ್ದಾಳೆ. ಹಾಗಾಗಿ ಆಕೆ ನ್ಯಾಯಕ್ಕಾಗಿ ಹೋರಾಟ ನಡೆಸಬಹುದಾಗಿದೆ.
Menopause ಒತ್ತಡ ನಿವಾರಣೆಗೆ ಶಾಸ್ತ್ರೀಯ ರಾಗ!
ಸಮಾನ ವೇತನ ನೀಡ್ತಿದೆ ಅನೇಕ ಕಂಪನಿ : ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ಸಮಾನ ವೇತನ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿವೆ. ಕಚೇರಿಯಲ್ಲಿ ಯಾವುದೇ ರೀತಿಯ ಲಿಂಗತಾರತಮ್ಯ ಆಗದಂತೆ ನೋಡಿಕೊಳ್ಳುತ್ತಿದೆ. ಪುರುಷ ಇರಲಿ ಮಹಿಳೆ ಇರಲಿ ಒಂದೇ ರೀತಿಯ ಕೆಲಸ ಮಾಡುವ ಎಲ್ಲ ಉದ್ಯೋಗಿಗೆ ಸಮಾನ ವೇತನ ನೀಡಲು ಮುಂದಾಗ್ತಿದೆ.