Women Health: ಗರ್ಭಿಣಿಯರೇ, ಖಿನ್ನರಾಗಬೇಡಿ ಖುಷಿ ಖುಷಿಯಾಗಿರಿ

By Suvarna NewsFirst Published Dec 30, 2021, 8:17 PM IST
Highlights

ಮದುವೆಯಾಗಿ ಮೂರ್ನಾಲ್ಕು ವರ್ಷವಾದರೂ ಮಗು ಮಾಡಿಕೊಳ್ಳಲು ಹಿಂದೇಟು ಹಾಕುವ ಯುವತಿಯರನ್ನು ಕಾಣಬಹುದು. ಮಗುವೆಂದರೆ ಅದೊಂದು ಜವಾಬ್ದಾರಿ ಎನ್ನುವ ಚಿಂತೆ ಅವರದ್ದು. ಗರ್ಭಿಣಿಯಾದ ಬಳಿಕವೂ ಈ ಚಿಂತೆ ಮುಂದುವರಿಯುತ್ತದೆ. ಪರಿಣಾಮ, ಹೆರಿಗೆಗೂ ಮುನ್ನ ಖಿನ್ನತೆ ಕಾಣಿಸಿಕೊಳ್ಳುತ್ತದೆ. 
 

ತನ್ನೊಳಗೆ ಜೀವವೊಂದು ಕುಡಿಯೊಡೆಯುತ್ತಿದೆ ಎನ್ನುವುದು ಪ್ರತಿ ಮಹಿಳೆ(Woman) ಗೆ ರೋಮಾಂಚನ (Thrill) ತರುತ್ತದೆ. ಹಾಗೆಯೇ ಆತಂಕವನ್ನೂ ಒಡ್ಡುತ್ತದೆ. ಮುಂದೆ ಹೇಗೋ ಏನೋ ಎನ್ನುವ ಒತ್ತಡ (Tension) ಕಾಡುತ್ತದೆ. ಸರಿಯಾಗಿ ಆರೈಕೆ ಮಾಡುವವರಿಲ್ಲದೆ ಹೋದಲ್ಲಿ ಮಾನಸಿಕವಾಗಿ ಆಕೆ ಬಸವಳಿಯುತ್ತಾಳೆ. ಪರಿಣಾಮವಾಗಿ, ಖಿನ್ನತೆ (Depression) ಉಂಟಾಗಬಹುದು.
ಹೆರಿಗೆ(Delivery) ಯ ಬಳಿಕ ಉಂಟಾಗುವ ಖಿನ್ನತೆಯನ್ನು ಗ್ರಾಮೀಣ ಭಾಗದಲ್ಲಿ ಸನ್ನಿ ಎಂದು ಕರೆಯುತ್ತರೆ. ಇದು ಬೇರೆ ಸಮಸ್ಯೆ. ಇದನ್ನು ನಿಭಾಯಿಸುವ ಕುರಿತು ಇತ್ತೀಚಿಗೆ ಅರಿವು ಮೂಡುತ್ತಿದೆ. ಆದರೆ, ಹೆರಿಗೆಗೂ ಮುನ್ನವೇ ಬಹಳಷ್ಟು ಮಹಿಳೆಯರಲ್ಲಿ ಖಿನ್ನತೆ ಕಂಡುಬರಬಹುದು. ಗರ್ಭ ಧರಿಸಿದ (Pregnancy) ಸಮಯದಲ್ಲಿ ಮಹಿಳೆಗಿರುವ ಜವಾಬ್ದಾರಿ(Responsibility) , ಆಕೆಯ ಮನಸ್ಥಿತಿ(Mental State), ಸನ್ನಿವೇಶ (Situation), ಪರಿಸ್ಥಿತಿಗಳಿಂದಾಗಿ ಖಿನ್ನತೆ ಉಂಟಾಗಬಹುದು. ಆತಂಕದಿಂದಲೂ ಸಮಸ್ಯೆಯಾಗಬಹುದು. 

ಇಂದಿನ ದಿನಗಳಲ್ಲಿ ಚಿಕ್ಕ (Nuclear) ಕುಟುಂಬಗಳೇ ಹೆಚ್ಚು. ಮಗಳು ಗರ್ಭಿಣಿಯಾದರೆ ಅವಳಿಗೆ ಆರೈಕೆ ಮಾಡಲು ಅಮ್ಮನಿಗೆ ಸಾಧ್ಯವಾಗದೇ ಹೋಗಬಹುದು. ಎಲ್ಲರೂ ಆಕೆಗೆ “ಚೆನ್ನಾಗಿ ಆರೋಗ್ಯ ಕಾಪಾಡಿಕೋ’ ಎಂದು ಸಲಹೆ ಮಾಡುತ್ತಾರೆಯೇ ಹೊರತು ಆಕೆಯ ಜತೆಗಿದ್ದು ಬೆಂಬಲ ನೀಡುವವರು, ನೋಡಿಕೊಳ್ಳುವವರು ಯಾರೂ ಇರುವುದಿಲ್ಲ. ಹೀಗಾಗಿ, ಆಕೆ ತನ್ನ ಆರೋಗ್ಯದ ಜವಾಬ್ದಾರಿಯನ್ನು ತಾನೇ ಹೊರಬೇಕಾಗುತ್ತದೆ. ಇದೂ ಸಹ ಅವಳನ್ನು ಆತಂಕಕ್ಕೆ ದೂಡಬಹುದು. ಎಲ್ಲದರ ಪರಿಣಾಮ ಬೆಳೆಯುತ್ತಿರುವ ಮಗುವಿನ ಮೇಲೂ ಆಗಬಹುದು. ಹೀಗಾಗಿ, ಹೆರಿಗೆಗೆ ಮುನ್ನ ಕಾಡುವ ಖಿನ್ನತೆಯ ಬಗ್ಗೆ ಎಚ್ಚರಿಕೆಯಿಂದಿರುವುದು ಅಗತ್ಯ.
ಪ್ರಸವಪೂರ್ವ (Pre Delivery) ಖಿನ್ನತೆ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ. ಅಧ್ಯಯನಗಳ ಪ್ರಕಾರ, ಪ್ರತಿ ಹತ್ತು ಮಹಿಳೆಯರಲ್ಲಿ ಒಬ್ಬರಿಗೆ ಪ್ರಸವಪೂರ್ವ ಖಿನ್ನತೆ ಉಂಟಾಗುತ್ತದೆ. 

ಯಾಕೆ ಖಿನ್ನತೆ?
ದುಡಿಯುವ (Working) ಮಹಿಳೆಯರಲ್ಲಿ ಆತಂಕ ಹೆಚ್ಚು. ಕಚೇರಿಗೆ ಓಡಾಡುವುದು, ಸರಿಯಾದ ಸಮಯಕ್ಕೆ ಊಟ-ತಿಂಡಿ-ನಿದ್ರೆ ಮಾಡಲು ಸಾಧ್ಯವಾಗದೆ ಸಮಸ್ಯೆಯಾಗಬಹುದು. ಅದರಿಂದಾಗಿ ಉಂಟಾಗುವ ಕಿರಿಕಿರಿ, ಅಭದ್ರತಾ ಭಾವನೆಗಳಿಂದ ಚಿಂತೆಯಾಗಬಹುದು. ಆತ್ಮೀಯರನ್ನು ಕಳೆದುಕೊಂಡಾಗಲೂ ಖಿನ್ನರಾಗಬಹುದು. ಕೌಟುಂಬಿಕ ಭಿನ್ನಾಭಿಪ್ರಾಯಗಳಿರುವ ಕುಟುಂಬಗಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವ ಮನೆಗಳಲ್ಲಿ ಗರ್ಭಿಣಿಯರಿಗೆ ಖಿನ್ನತೆ ಸಾಮಾನ್ಯ. 

ಗರ್ಭಿಣಿಯರಿಗೆ ಕೆಟ್ಟ ಕನಸು ಬೀಳುವುದೇಕೆ?

ಎಚ್ಚರ ಎಚ್ಚರ (Be Careful)
ಗರ್ಭಿಣಿಯರು ಎಷ್ಟೇ ಕೆಲಸಕಾರ್ಯ, ಜವಾಬ್ದಾರಿಗಳ ನಡುವೆಯೂ ತಮ್ಮ ಕುರಿತು ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಖಿನ್ನತೆ ಉಂಟಾಗಲು ಅವಕಾಶ ಮಾಡಿಕೊಡಬಾರದು. ಪದೇ ಪದೆ ಅಸಹಾಯಕ ಭಾವನೆ ಬರುತ್ತಿದ್ದರೆ, ಅತಿಯಾಗಿ ದುಃಖವಾಗುತ್ತಿದ್ದರೆ, ತನ್ನ ಬೆಂಬಲಕ್ಕೆ ಯಾರೂ ಇಲ್ಲವೆಂಬ ಭಾವನೆ ಸದಾಕಾಲ ಕಾಡಿದರೆ, ಹತಾಶೆ, ನಕಾರಾತ್ಮಕ ಚಿಂತನೆಗಳು ಮತ್ತೆ ಮತ್ತೆ ಬರುತ್ತಿದ್ದರೆ ಎಚ್ಚರಿಕೆ ವಹಿಸಬೇಕು. ತಾನು ಸತ್ತು ಹೋದರೆ ಎಲ್ಲರೂ ತನ್ನ ಬಗ್ಗೆ ಸಹಾನುಭೂತಿ ತೋರುತ್ತಾರೆ ಎಂದೆಲ್ಲ ಅಂದುಕೊಳ್ಳುವುದು, ನಿದ್ರೆ ಮಾಡದಿರುವುದು, ಸುಮ್ಮಸುಮ್ಮನೆ ಅಳುವುದು, ಕೆಟ್ಟ ಕೋಪ ಮತ್ತು ಆಕ್ರೋಶ ಇಂತಹ ಮನಸ್ಥಿತಿ ಉಂಟಾಗುತ್ತಿದ್ದರೆ ಜಾಗ್ರತೆ ವಹಿಸಬೇಕು.  

ಗರ್ಭಿಣಿಯರೇ ಹೀಗ್ಮಾಡಿ 
•    ನೀವು ಗರ್ಭಿಣಿಯಾದ ತಕ್ಷಣ ನಿಮ್ಮ ಜವಾಬ್ದಾರಿ, ಸುತ್ತಲಿನ ಜನ ಬದಲಾಗುವುದಿಲ್ಲ. ಜೀವನ (Life) ಏಕಾಏಕಿ ಸುಂದರವೆನಿಸುವುದಿಲ್ಲ. ಬದಲಿಗೆ, ಇನ್ನಷ್ಟು ಜಟಿಲ (Problamatic) ಎನಿಸಬಹುದು. ಏಕೆಂದರೆ, ದೈಹಿಕ ಹಿಂಸೆ ಕಾಡಬಹುದು. ಹೀಗಾಗಿ, ನಿರೀಕ್ಷೆ (Expectation) ವಾಸ್ತವವಾಗಿರಲಿ.
•    ನಿಮಗೆ ಅಗತ್ಯವಿದ್ದಾಗ ವಿಶ್ರಾಂತಿ ಪಡೆದುಕೊಳ್ಳಿ.
•    ಗರ್ಭ ಧರಿಸಿದಾಗ ಉದ್ಯೊಗ (Job), ಮನೆ (House) ಬದಲಾವಣೆ ಮಾಡುವುದು ಉತ್ತಮವಲ್ಲ. ಹೊಸ ಬದಲಾವಣೆಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದು.
•    ಉತ್ತಮ ಸಂಗೀತ, ಮನಸ್ಸಿಗೆ ಹಿತವೆನ್ನಿಸುವ ಮಾತುಗಳನ್ನು ಆಲಿಸಬೇಕು. ಇದರಿಂದ ಉದ್ವೇಗ ಶಮನವಾಗುತ್ತದೆ.
•    ಪೌಷ್ಟಿಕ ಆಹಾರ (Nutritional Food), ಹೆಚ್ಚು ನೀರು (Water) ಸೇವನೆ ಮಾಡಿ.
•    ಯೋಗಾಸನ(Yoga), ಧ್ಯಾನ, ಪ್ರಾಣಾಯಾಮ ಮಾಡಿ. ಕೆಲವು ನಿರ್ದಿಷ್ಟ ಯೋಗಾಸನಗಳಿಂದ ಹೆರಿಗೆ ಸುಲಭವಾಗುತ್ತದೆ.  
•    ಹಿತೈಷಿಗಳು, ಪಾಲಕರು, ಒಡಹುಟ್ಟಿದವರು, ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ. ಮನಸ್ಸಿಗೆ ಕಿರಿಕಿರಿಯಾದಾಗ ಅವರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಿ. 

ಸೇಫ್ ಸೆಕ್ಸ್: ಗರ್ಭ ಧರಿಸದೇ ಇರೋದು ಹೇಗೆ?

click me!