ಮುದ್ದಿನ ನಾಯಿ ಕುರಿತು ಭಾವಿ ಅತ್ತೆ ಆಡಿದ ಒಂದೇ ಮಾತಿಗೆ ಮದುವೆ ರದ್ದುಗೊಳಿಸಿದ ವಧು!

By Chethan Kumar  |  First Published Nov 18, 2024, 6:39 PM IST

ಬರೋಬ್ಬರಿ 7 ವರ್ಷಗಳ ಪ್ರೀತಿ. ಎರಡೂ ಮನೆಯವರು ಒಪ್ಪಿ ಮದುವೆಗೆ ಸಿದ್ಧತೆ ನಡೆದಿದೆ. ಆದರೆ ಈ ತಯಾರಿ ನಡುವೆ ಭಾವಿ ಅತ್ತೆ ವಧುವಿನ ಮುದ್ದಿನ ನಾಯಿ ಕುರಿತು ಆಡಿದ ಒಂದು ಮಾತಿಗೆ ಸಂಬಂಧ ಮುರಿದು ಮದುವೆಯನ್ನೇ ರದ್ದುಗೊಳಿಸಿದ ಘಟನೆ ನಡೆದಿದೆ.


ಸಾಕು ನಾಯಿ ಕುಟುಂಬದ ಸದಸ್ಯ. ಮಕ್ಕಳಿಗಿಂತ ಹೆಚ್ಚು ಪ್ರೀತಿ, ಆರೈಕೆಯಲ್ಲಿ ನಾಯಿ ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ನಾಯಿ ಬೆಳೆಸುವುದು, ಆರೈಕೆ ಮಾಡುವುದು ಹೆಚ್ಚು. ಆದರೆ ಇದೇ ಸಾಕು ನಾಯಿ 7 ವರ್ಷದ ಸಂಬಂಧ ಅಂತ್ಯಗೊಳಿಸಿದ್ದು ಮಾತ್ರವಲ್ಲ, ಮದುವೆಯನ್ನು ರದ್ದುಗೊಳಿಸಿದ ಘಟನೆ ನಡೆದಿದೆ. ಪರಿಚಯ, ಸ್ನೇಹ ಬಳಿಕ ಪ್ರೀತಿ. ಈ ಸಂಬಂಧಕ್ಕೆ 7 ವರ್ಷವಾಗಿತ್ತು. ಎರಡೂ ಮನೆಯವರನ್ನು ಒಪ್ಪಿಸಿ ನವ ಜೋಡಿ ಮದುವೆಗೆ ತಯಾರಿ ನಡೆಸಿತ್ತು.ದಿನಾಂಕ ಫಿಕ್ಸ್ ಆಗಿತ್ತು, ಮಂಟಪ ಬುಕ್ ಆಗಿತ್ತು. ಆಮಂತ್ರಣ ಪತ್ರಿಕೆ ಹಂಚಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ವರನ ತಾಯಿ ವಧುವಿನ ನಾಯಿ ಕುರಿತು ಆಡಿದ ಒಂದು ಮಾತಿನಿಂದ  ಮದುವೆ ರದ್ದಾಗಿದೆ.

ಪ್ರಿಯಾಂಕಾ ಅನ್ನೋ ಎಕ್ಸ್ ಯೂಸರ್ ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆ ಹಂಚಿಕೊಂಡಿದ್ದಾರೆ. ತಾನು ಬಾಯ್‌ಫ್ರೆಂಡ್ ಜೊತೆಗಿನ 7 ವರ್ಷಗಳ ಸಂಬಂಧ ಮುರಿದು ಬಿದ್ದಿದೆ. ಇದಕ್ಕೆ ಕಾರಣ ಬಾಯ್‌ಫ್ರೆಂಡ್ ಅಲ್ಲ, ಆತನ ತಾಯಿ ಎಂದು ಹೇಳಿಕೊಂಡಿದ್ದಾಳೆ. ತಾಯಿ ನಮ್ಮ ನಡುವೆ ಯಾಕೆ ಬರಬೇಕು ಎಂದು ಪ್ರಶ್ನಿಸಿದ್ದಾರೆ. 

Latest Videos

undefined

ಪತ್ನಿ ಶೀಲ ಶಂಕಿಸಿದ ಕಿರಾತಕ ಪತಿ, ನಕಲಿ ಖಾತೆಯಿಂದ ಮೆಸೇಜ್ ಕಳುಹಿಸಿ ತಗ್ಲಾಕೊಂಡ!

ಪ್ರಿಯಾಂಕಾ ಹಾಗೂ ಆಕೆಯ ಬಾಯ್‌ಫ್ರೆಂಡ್ ನಡುವೆ 7 ವರ್ಷಗಳ ಪ್ರೀತಿ.  ಸುದೀರ್ಘ ವರ್ಷಗಳ ಸಂಬಂಧಕ್ಕೆ ಮದುವೆ ಅರ್ಥ ನೀಡಲು ಇಬ್ಬರು ಚರ್ಚಿಸಿದ್ದಾರೆ. ಆದರೆ ಸವಾಲು ಬೆಟ್ಟದಷ್ಟಿತ್ತು. ಕಾರಣ ಎರಡೂ ಮನೆಯವರನ್ನು ಒಪ್ಪಿಸಬೇಕಿತ್ತು. ಹುಡುಗಿಯ ಮನೆಯಲ್ಲಿ ಹೆಚ್ಚಿನ ಸಮಸ್ಯೆ ಆಗಿಲ್ಲ. ಹುಡುಗಿಯ ನಿರ್ಧಾರವನ್ನು ಕುಟುಂಬಸ್ಥರು ಗೌರವಿಸಿದ್ದಾರೆ. ಹುಡುಗನ ಕುರಿತು ಮಾಹಿತಿ ಪಡೆದಿದ್ದಾರೆ. ಚೆನ್ನಾಗಿ ನೋಡಿಕೊಂಡರೆ ಸಾಕು ಎಂದಷ್ಟೇ ಹೇಳಿದ್ದಾರೆ. ಆದರೆ ಹುಡುಗನ ಮನೆಯಲ್ಲಿ ನೂರೆಂಟ್ ಪ್ರಶ್ನೆ. ಆಕೆಯೇ ಬೇಕಾ? ಬೇರೆ ಸಂಬಂಧಗಳಿವೆ, ಆಸ್ತಿ ಅಂತಸ್ತು ಇರುವ ಯಾವುದೇ ಕೆಲಸ ಮಾಡದಿದ್ದರೂ ಕುಳಿತಲ್ಲೇ ಆದಾಯಗಳಿಸುವ ಕುಟುಂಬದಿಂದ ಪ್ರಪೋಸಲ್ ಬಂದಿದೆ ಎಂದೆಲ್ಲಾ ಒಂದಷ್ಟು ಪ್ರಶ್ನೆ, ಆತಂಕಗಳನ್ನು ಹುಡುಗನ ತಾಯಿ ಮುಂದಿಟ್ಟಿದ್ದಾರೆ.

ಪ್ರಿಯಾಂಕ ಜೊತೆಗಿನ ಪ್ರೀತಿ ಗಾಢವಾಗಿತ್ತು. ಹೀಗಾಗಿ ಹುಡುಗ ಪೋಷಕರನ್ನು ಒಪ್ಪಿಸಿದ್ದ. ಎರಡೂ ಮನೆಯವರ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಮದುವೆ ಚರ್ಚೆ ಆರಂಭಗೊಂಡಿತ್ತು. ಮದುವೆ ದಿನಾಂಕ ಯಾವಾಗ? ಎಷ್ಟು ಮಂದಿಯನ್ನು ಆಹ್ವಾನಿಸಬೇಕು, ಎಲ್ಲಿ ಮದುವೆ, ಸ್ಥಳ, ಮಂಟಪ ಸೇರಿದಂತೆ ಒಂದಷ್ಟು ಚರ್ಚೆಗಳ ಬಳಿಕ ದಿನಾಂಕ ಫಿಕ್ಸ್ ಆಯಿತು. ಮಂಟಪ ಬುಕ್ ಮಾಡಲಾಯಿತು. ಮದುವ ದಿನ, ಆರತಕ್ಷತೆ ದಿನ ಖಾದ್ಯಗಳ ಪಟ್ಟಿ ಮಾಡಲಾಯಿತು. 

ಇನ್ನೇನು ಮದುವೆಗೆ ಕೆಲವೇ ದಿನಗಳು ಮಾತ್ರ ಬಾಕಿ. ಅಷ್ಟರಲ್ಲೇ ಅತ್ತೆ ಜೊತೆಗಿನ ಮಾತುಕತೆ ಎಲ್ಲವನ್ನು ಬುಡಮೇಲು ಮಾಡಿದೆ. ವಧುವಿನ ಬಳಿ ಮುದ್ದಾದ ನಾಯಿ ಇದೆ. ಅತ್ಯಂತ ಪ್ರೀತಿಯಿಂದ ಸಾಕಿದ್ದಾಳೆ. ಇನ್ನು ವಧುವಿನ ತಾಯಿ ಆರೋಗ್ಯ ಸರಿಯಿಲ್ಲ. ಹೀಗಾಗಿ ಮದುವೆಯಾದ ಬಳಿಕ ತಾಯಿಗೆ ನಾಯಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ತಾಯಿ ಆರೋಗ್ಯದ ಕಾರಣದಿಂದ ಮನೆಯಲ್ಲಿನ ಎಲ್ಲಾ ಜವಾಬ್ದಾರಿಯನ್ನು ತಾನೇ ನಿರ್ವಹಿಸುತ್ತಿದ್ದಾಳೆ. ಹೀಗಾಗಿ ಮದುವೆ ಬಳಿಕ ತಾನು ನಾಯಿಯನ್ನು ಕರೆದುಕೊಂಡು ಬರುವುದಾಗಿ ಅತ್ತೆಗೆ ತಿಳಿಸಿದ್ದಾಳೆ. ಜೊತೆಗೆ ಮನೆಯಲ್ಲಿ ತಾಯಿ ಆರೋಗ್ಯದ ಕುರಿತು ಮಾತನಾಡಿದ್ದಾಳೆ.

ನನ್ನ ಪುತ್ರ ಮದುವೆಯಾಗುತ್ತಿರುವುದು ನಿನ್ನನ್ನು. ನಮ್ಮ ಮನೆಗೆ ನೀನು ಮಾತ್ರ ಬಂದರೆ ಸಾಕು, ನಿನ್ನ ಜೊತೆ ನಾಯಿ ಬೇಕಿಲ್ಲ. ನಮ್ಮ ಮನೆಯಲ್ಲಿ ಒಂದು ನಾಯಿ ಇದೆ. ಇದರ ಜೊತೆಗೆ ಮತ್ತೊಂದು ನಾಯಿ ನಮಗೆ ಬೇಡ. ಎಲ್ಲಾ ನಾಯಿಗಳಿಗೆ ಆಶ್ರಯ ನೀಡಲು ನಮ್ಮ ಮನೆ ಛತ್ರ ಅಲ್ಲ ಎಂದಿದ್ದಾರೆ. ಎಲ್ಲಾ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ ವಧು, ಕೊನೆಯ ಮಾತಿಗೆ ಗರಂ ಆಗಿದ್ದಾಳೆ. ನಾಯಿಗಳಿಗೆ ನೀವು ಆಶ್ರಯ ನೀಡುವುದೇ ಬೇಡ, ಈ ಸಂಬಂಧ ಮುಂದುವರಿಯುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾಳೆ. ಇಷ್ಟೇ ಅಲ್ಲ ಮದುವೆಯನ್ನು ರದ್ದುಗೊಳಿಸುತ್ತಿರುವುದಾಗಿ ಹುಡುಗನ ತಾಯಿ ಬಳಿ ಹೇಳಿದ್ದಾಳೆ.
 

click me!