
ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಯ ಬಯಕೆ. ಆದ್ರೆ ಎಲ್ಲರ ಆಸೆ ಈಡೇರೋದಿಲ್ಲ. ಮಗು ಕೈಗೆ ಬರ್ತಿದ್ದಂತೆ ತಾಯಿ ಸಾವನ್ನಪ್ಪಿದ ಅನೇಕ ಘಟನೆಗಳಿವೆ. ಈಗ್ಲೂ ನಮ್ಮ ದೇಶದಲ್ಲಿ ಮಾಹಿತಿ ಕೊರತೆ, ಚಿಕಿತ್ಸೆ ಕೊರತೆಯಿಂದಾಗಿ ತಾಯಂದಿರು ಸಾವನ್ನಪ್ಪುತ್ತಿದ್ದಾರೆ. ಗರ್ಭಿಣಿಯರು ಹಾಗೂ ತಾಯಂದಿರ ಆರೋಗ್ಯ ರಕ್ಷಣೆಯ ಉದ್ದೇಶದಿಂದಲೇ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಪ್ರತಿ ವರ್ಷ ಏಪ್ರಿಲ್ 11 ರಂದು ಆಚರಿಸಲಾಗುತ್ತದೆ. ಸುರಕ್ಷಿತ ತಾಯ್ತನವನ್ನು ಖಚಿತಪಡಿಸಿಕೊಳ್ಳಲು ಆರೈಕೆ, ವೈದ್ಯಕೀಯ ತಪಾಸಣೆ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಸುರಕ್ಷಿತ ತಾಯ್ತನ ದಿನವನ್ನು ಆಚರಿಸಲಾಗುತ್ತದೆ.
2003 ರಲ್ಲಿ, ಭಾರತ (India) ಸರ್ಕಾರ ಏಪ್ರಿಲ್ 11 ರಂದು ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸಲು ಘೋಷಿಸಿತು. ಈ ಅಭಿಯಾನವನ್ನು ವೈಟ್ ರಿಬ್ಬನ್ (White Ribbon) ಅಲೈಯನ್ಸ್ ಇಂಡಿಯ ಆರಂಭಿಸಿದೆ. ಗರ್ಭಾವಸ್ಥೆ (Pregnancy) ಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಯಾವುದೇ ಮಹಿಳೆಯ ಸಾವಾಗಬಾರದು ಎನ್ನುವ ಉದ್ದೇಶವನ್ನು ಇದು ಹೊಂದಿದೆ. ಭಾರತದಲ್ಲಿ, ಮಗುವಿನ ಜನನದ ವೇಳೆ ಸಾವನ್ನಪ್ಪುವ ತಾಯಂದಿರ ಸಂಖ್ಯೆ ಹೆಚ್ಚಿದೆ. ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ 2023 ರ ಇತಿಹಾಸ ಮತ್ತು ಮಹತ್ವ ಇಲ್ಲಿದೆ.
Relationship Advice : ಗಂಡ ಮನೆ ಕೆಲಸದಲ್ಲಿ ಹೆಲ್ಪ್ ಮಾಡೋಲ್ಲ ಅಂತ ಗೊಣಗೋ ಬದಲು ಹೀಗ್ ಮಾಡಿ
ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನದ ಇತಿಹಾಸ : ವೈಟ್ ರಿಬ್ಬನ್ ಅಲೈಯನ್ಸ್ ಇಂಡಿಯಾದ ಕೋರಿಕೆಯ ಮೇರೆಗೆ ಭಾರತ ಸರ್ಕಾರವು 2003 ರಲ್ಲಿ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಘೋಷಿಸಿತು. ಕಸ್ತೂರ್ಬಾ ಗಾಂಧಿಯವರ ವಾರ್ಷಿಕೋತ್ಸವವಾದ ಏಪ್ರಿಲ್ 11 ರಂದು ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ ಎಂದು ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಏಪ್ರಿಲ್ 11 ಅನ್ನು 'ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ' ಆಚರಿಸಲಗುತ್ತ ಬರಲಾಗ್ತಿದೆ. ಈ ದಿನದಂದು ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ರಾಷ್ಟ್ರೀಯ ಮಾತೃತ್ವ ದಿನವನ್ನು ಆಚರಿಸುವ ಉದ್ದೇಶವೇನು? : ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸುವ ಉದ್ದೇಶ ಗರ್ಭಧಾರಣೆ, ಹೆರಿಗೆ ಮತ್ತು ಹೆರಿಗೆ ನಂತರದ ಮತ್ತು ಆರೋಗ್ಯ ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವುದು. ಸೂಕ್ತ ಮಾಹಿತಿ ಸಿಕ್ಕಿದ್ರೆ ಮಹಿಳೆಯರು ಈ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಿಸುವುದಿಲ್ಲ. ಈ ದಿನ ಗರ್ಭಾವಸ್ಥೆಯಲ್ಲಿ ಎದುರಿಸುವ ತೊಂದರೆಗಳ ಬಗ್ಗೆ ಮತ್ತು ಅದರ ವಿರುದ್ಧ ಹೇಗೆ ಹೋರಾಡಬೇಕು ಎನ್ನುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಬಾಲ್ಯವಿವಾಹವನ್ನು ತಡೆಗಟ್ಟುವ ಬಗ್ಗೆಯೂ ಜಾಗೃತಿ ಕಾರ್ಯಕ್ರಮ ಈ ದಿನ ನಡೆಯುತ್ತದೆ.
ಈ ನಿಗೂಢ ಕೋಟೆಯ ದ್ವಾರದಲ್ಲಿ 7 ಹುಡುಗಿಯರನ್ನು ಇಂದಿಗೂ ಪೂಜಿಸುತ್ತಾರೆ
• ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 24000 ಕ್ಕೂ ಹೆಚ್ಚು ಮಹಿಳೆಯರು ಗರ್ಭಾವಸ್ಥೆಯಲ್ಲಿ ಸರಿಯಾದ ಆರೈಕೆಯ ಕೊರತೆಯಿಂದಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.
• ಡಬ್ಲ್ಯುಹೆಚ್ ಒ ಅಂಕಿ ಅಂಶದ ಪ್ರಕಾರ ಗರ್ಭಧಾರಣೆ ಮತ್ತು ಹೆರಿಗೆ ಸಂದರ್ಭದಲ್ಲಿ ಸಮಸ್ಯೆಯಾಗಿ ಪ್ರತಿದಿನ ಸುಮಾರು 830 ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಈ ಸಂಖ್ಯೆ 60.
• ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಾಯಂದಿರ ಸಾವಿನ ಸಂಖ್ಯೆ ಶೇಕಡಾ 99ರಷ್ಟಿದೆ.
• ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಭಾರತದಲ್ಲಿ ತಾಯಂದಿರ ಸಾವಿನ ಸಂಖ್ಯೆ ಗಣನೀಯವಾಗಿ ಇಳಿದಿದೆ. ಆದ್ರೆ ಗರ್ಭಾವಸ್ಥೆ ಮತ್ತು ಹೆರಿಗೆಯಲ್ಲಿ ಸಾವನ್ನಪ್ಪುವ ಮಹಿಳೆಯರ ಸಂಖ್ಯೆಯಲ್ಲಿ ನೈಜೀರಿಯಾದ ನಂತರ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ.
• ಮಹಿಳೆಯರಿಗಿಂತ ಹದಿಹರೆಯದ ಹುಡುಗಿಯರು ತಾಯ್ತನದ ಸಂದರ್ಭದಲ್ಲಿ ಸಾವನ್ನಪ್ಪುವುದು ಹೆಚ್ಚು.
• ಹೆರಿಗೆ ಮೊದಲು ಮತ್ತು ನಂತ್ರ ನುರಿತ ವೈದ್ಯರಿಂದ ಚಿಕಿತ್ಸೆ ಅಗತ್ಯವಿರುತ್ತದೆ. ಈ ಸಂದರ್ಭದಲ್ಲಿ ಸೂಕ್ತ ಆರೈಕೆ ಸಿಗದೆ ಹೋದಾಗ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.