ಪೀರಿಯಡ್ಸ್‌ ಮಿಸ್‌ ಆಗೋದೇ ಈ 5 ಕಾರಣಗಳಿಗೆ!

By Web Desk  |  First Published Nov 2, 2019, 2:37 PM IST

ಪೀರಿಯಡ್ಸ್‌ನ ಏರುಪೇರು ಹಲವು ದೈಹಿಕ ಸಮಸ್ಯೆಗಳನ್ನು ಸೂಚಿಸುತ್ತಿರಬಹುದು. ಅವುಗಳತ್ತ ಗಮನ ಹರಿಸುವುದು ಅಗತ್ಯ. 


ಪ್ರತಿ ಮಹಿಳೆಯ ಪೀರಿಯಡ್ಸ್ ವಿಭಿನ್ನ. ಕೆಲ ಮಹಿಳೆಯರಿಗೆ ಎರಡು ದಿನ ಋತುಸ್ರಾವ ಇದ್ದರೆ ಮತ್ತೆ ಕೆಲವರಿಗೆ ಇದು ವಾರದ ಗೋಳು. ಕೆಲವರಿಗೆ ಗೊತ್ತೇ ಆಗದಷ್ಟು ಬ್ಲೀಡಿಂಗ್ ಇದ್ದರೆ ಮತ್ತೆ ಕೆಲವರಿಗೆ ಹೊಳೆಯಂತೆ ಹರಿದು ಸುಸ್ತು ಬಡಿಸಬಹುದು.

Tap to resize

Latest Videos

ಕೆಲವರಿಗೆ ಹೊಟ್ಟೆ ನೋವು ತೀವ್ರವಾಗಿದ್ದರೆ ಮತ್ತೆ ಕೆಲವರಿಗೆ ಇದು ಸಣ್ಣ ಮಟ್ಟದಲ್ಲಿರಬಹುದು. ಆದರೆ, ನಿಮಗೆ ಪ್ರತಿ ಬಾರಿಯೂ ಒಂದೇ ರೀತಿ ಇದ್ದರೆ ಯಾವ ಭಯವೂ ಇಲ್ಲ, ಟೆನ್ಷನ್ ಕೂಡಾ ಬೇಡ. ಆದರೆ, ಇದ್ದಕ್ಕಿದ್ದಂತೆ ಈ ಸೈಕಲ್‌ನಲ್ಲಿ ಬದಲಾವಣೆಯಾದರೆ ಮಾತ್ರ ಸ್ವಲ್ಪ ಜಾಗೃತರಾಗಬೇಕು. ಅಂಥ ಕೆಲ ಬದಲಾವಣೆಗಳು ಕಂಡುಬಂದಾಗ ನಿಮ್ಮ ವೈದ್ಯರಿಗೆ ಒಂದು ಮಾತು ತಿಳಿಸುವುದು ಉತ್ತಮ. ಅಂಥ ಬದಲಾವಣೆಗಳು ಯಾವುವು ನೋಡೋಣ...

1. ಪೀರಿಯಡ್ಸ್ ಆಗಿಲ್ಲವೆಂದರೆ

undefined

ಸಾಮಾನ್ಯವಾಗಿ ಋತುಚಕ್ರವು 28 ದಿನದ ಸೈಕಲ್. ಆದರೆ ಪ್ರತಿ ಮಹಿಳೆಯರಿಗೂ 15 ದಿನದಿಂದ ಹಿಡಿದು 40 ದಿನಗಳವರೆಗೂ ಈ ಚಕ್ರದಲ್ಲಿ ವ್ಯತ್ಯಾಸವಿರಬಹುದು. ಆದರೆ, ನಿಮ್ಮ ಋತುಚಕ್ರ ಎಂದಿನಷ್ಟು ದಿವಸ ಕಳೆದು ವಾರವಾದರೂ ಆಗಿಲ್ಲವೆಂದರೆ ಅದಕ್ಕೆ ಕೆಲ ಕಾರಣಗಳಿರಬಹುದು. ಮೊದಲನೆಯದಾಗಿ ಪ್ರಗ್ನೆನ್ಸಿ ಇರಬಹುದು. ತಕ್ಷಣ ಮನೆಯಲ್ಲೇ ಪ್ರಗ್ನೆನ್ಸಿ ಟೆಸ್ಟ್ ಮಾಡಿಕೊಳ್ಳಬಹುದು. ಅದು ನೆಗೆಟಿವ್ ಬಂದರೆ, ಹೀಗೆ ಚಕ್ರ ತಪ್ಪಿದ್ದಕ್ಕೆ ಅತಿಯಾದ ವ್ಯಾಯಾಮ ಅಥವಾ ಅತಿಯಾಗಿ ತೂಕ ಕಳೆದುಕೊಂಡಿರುವುದು ಕೂಡಾ ಕಾರಣವಿರಬಹುದು. 
ಅತಿಯಾಗಿ ಎಕ್ಸರ್ಸೈಸ್ ಮಾಡುವುದರಿಂದ ಋತುಚಕ್ರ ನಿಯಂತ್ರಿಸುವ ಹಾರ್ಮೋನ್ ಮಟ್ಟದಲ್ಲಿ ಏರುಪೇರಾಗಬಹುದು.

ನೀವು ಡಯಟ್ ಅಥವಾ ವ್ಯಾಯಾಮದ ಮೂಲಕ ಬಹಳಷ್ಟು ದೇಹದ ಫ್ಯಾಟ್ ಕಳೆದುಕೊಂಡರೆ ಪೀರಿಯಡ್ಸ್ ಸಂಪೂರ್ಣ ನಿಂತೇ ಹೋಗಬಹುದು. ಹಾರ್ಮೋನ್‌ಗಳ ಉತ್ಪಾದನೆಗೆ ದೇಹದಲ್ಲಿ ಸ್ವಲ್ಪ ಫ್ಯಾಟ್ ಇರುವುದು ಅತ್ಯಗತ್ಯ.

ಮತ್ತೊಂದು ಕಾರಣ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್(ಪಿಸಿಒಎಸ್). ಈ ಸಮಸ್ಯೆ ಇದ್ದರೆ ಹಾರ್ಮೋನ್ ಏರುಪೇರಿನಿಂದ ಪೀರಿಯಡ್ಸ್ ಏರುಪೇರಾಗುತ್ತದೆ.  ಇನ್ನು ಅತಿಯಾದ ಒತ್ತಡಕ್ಕೆ ಒಳಗಾಗಿದ್ದರೂ ಪೀರಿಯಡ್ಸ್ ಸ್ಕಿಪ್ ಆಗಬಹುದು. ಇದಲ್ಲದೆ, ನೀವು 40ರಿಂದ 50 ವಯಸ್ಸಿನವರಾಗಿದ್ದಲ್ಲಿ ಮನೋಪಾಸ್ ಹಂತ ತಲುಪುವ ಮುನ್ನಿನ ಹಂತಗಳಲ್ಲಿ ಹೀಗೆ ಪೀರಿಯಡ್ಸ್ ಸ್ಕಿಪ್ ಆಗುವುದು ಕಾಮನ್. ಇದಕ್ಕೆ ಈಸ್ಟ್ರೋಜನ್ ಮಟ್ಟ ಕಡಿಮೆಯಾಗುವುದು ಕಾರಣ. 12 ತಿಂಗಳ ಕಾಲ ಪೀರಿಯಡ್ಸ್ ಆಗಲಿಲ್ಲವೆಂದರೆ ನೀವು ಮೆನೋಪಾಸ್‌ನಲ್ಲಿದ್ದೀರಿ ಎಂದರ್ಥ.

2. ಅತಿಯಾದ ಬ್ಲೀಡಿಂಗ್

ಪೀರಿಯಡ್ಸ್‌ನಲ್ಲಿ ಒಬ್ಬೊಬ್ಬ ಮಹಿಳೆಗೆ ಒಂದೊಂದು ಮಟ್ಟಿನ ಬ್ಲೀಡಿಂಗ್ ಆಗುತ್ತದೆ. ನೀವೇನಾದರೂ ಗಂಟೆಗೆ ಒಂದಕ್ಕಿಂತ ಹೆಚ್ಚು ಪ್ಯಾಡ್ ಅಥವಾ ಟ್ಯಾಂಪೂನ್ ಬಳಸಬೇಕಾಗಿ ಬರುತ್ತಿದೆ ಎಂದರೆ ನಿಮಗೆ ಅತಿಯಾದ ಬ್ಲೀಡಿಂಗ್ ಆಗುವ ಮೆನೋರಾಗಿಯಾ ಇದೆ ಎಂದರ್ಥ. ಇದರಿಂದ ಅನೀಮಿಯಾ, ಅತಿಯಾದ ಸುಸ್ತು, ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಸ್ತ್ರೀರೋಗ ತಜ್ಞರನ್ನು ಕಾಣಬೇಕು. 

ಪೀರಿಯಡ್ಸ್‌‌ ನೋವಿದ್ಯಾ? ಡಯಟ್ ಹೀಗಿರಲಿ

ಅತಿಯಾದ ಬ್ಲೀಡಿಂಗ್‌ಗೆ ಇತರೆ ಕಾರಣಗಳೆಂದರೆ ಹಾರ್ಮೋನ್ ಇಂಬ್ಯಾಲೆನ್ಸ್. ಪಿಸಿಒಎಸ್, ಹೈಪೋಥೈರಾಯ್ಡ್‌ ಮುಂತಾದ ಸಮಸ್ಯೆಗಳು ಹಾರ್ಮೋನ್ ಉತ್ಪತ್ತಿಯ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಗರ್ಭಾಶಯದ ಲೈನಿಂಗ್ ದಪ್ಪಗಾಗುತ್ತದೆ. ಇದರಿಂದ ಪೀರಿಯಡ್ಸ್‌ನಲ್ಲಿ ಬ್ಲೀಡಿಂಗ್ ಹೆಚ್ಚಾಗುತ್ತದೆ. ಎಂಡೋಮೆಟ್ರಿಯೋಸಿಸ್ ಇದ್ದರೆ, ಅಡೆನೋ ಮಯೋಸಿಸ್ ಇದ್ದರೆ, ಗರ್ಭಕೋಶದ ಕ್ಯಾನ್ಸರ್ ಇದ್ದರೆ ಕೂಡಾ ಬ್ಲೀಡಿಂಗ್ ಹೆಚ್ಚಬಹುದು. ಇದಲ್ಲದೆ, ಜನನ ನಿಯಂತ್ರಣ ವಿಧಾನವಾಗಿ ಇಂಟ್ರಾಯುಟೆರಿನ್ ಡಿವೈಸ್ ಬಳಸಿದ್ದರೆ ಕೂಡಾ ಆರಂಭದ ವರ್ಷದಲ್ಲಿ ಅಡ್ಡ ಪರಿಣಾಮವಾಗಿ ಸಿಕ್ಕಾಪಟ್ಟೆ ಬ್ಲೀಡಿಂಗ್ ಆಗಬಹುದು. 

3. ಅಸಹಜ ಅವಧಿಯ ಪೀರಿಯಡ್ಸ್

ಸಾಮಾನ್ಯವಾಗಿ ಪೀರಿಯಡ್ಸ್ ಎರಡರಿಂದ ಏಳು ದಿನಗಳವರೆಗೆ ಇರಬಹುದು. ನಿಮ್ಮ ಪೀರಿಯಡ್ಸ್ ಯಾವಾಗಲೂ ಅಲ್ಪಾವಧಿಯದೇ ಆಗಿದ್ದರೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹಾರ್ಮೋನಲ್ ಬರ್ತ್ ಕಂಟ್ರೋಲ್ ಬಳಸಿದ್ದಾಗ ಕೂಡಾ ಅಲ್ಪಾವಧಿಯ ಪೀರಿಯಡ್ಸ್ ಆಗಬಹುದು. ಮೆನೋಪಾಸ್‌ನಿಂದಲೂ ಹೀಗಾಗಬಹುದು.  ಆದರೆ ಪೀರಿಯಡ್ಸ್ ಸಡನ್ ಆಗಿ ತೀರಾ ಅಲ್ಪಾವಧಿಗೆ ಇಳಿದರೆ ವೈದ್ಯರೊಂದಿಗೆ ವಿಚಾರಿಸಿ. ಇನ್ನು ಬ್ಲೀಡಿಂಗ್ ಹೆಚ್ಚಾಗಿಸುವ ಅದೇ ಕಾರಣಗಳು ಪೀರಿಯಡ್ಸನ್ನು ಧೀರ್ಘಾವಧಿಗೆ ಏರಿಸಬಹುದು. 

'ಆ ದಿನಗಳ'ಲ್ಲಿ ಏನು ತಿನ್ನಬೇಕು?

4. ತಡೆಯಲಾಗದ ಹೊಟ್ಟೆನೋವು

ಪೀರಿಯಡ್ಸ್ ಎಂದರೆ ಹೊಟ್ಟೆನೋವು ಸಾಮಾನ್ಯ. ಆದರೆ, ಅತಿಯಾದ ಹೊಟ್ಟೆನೋವಿದ್ದು, ಅಸಹಜ ಎನಿಸುತ್ತಿದ್ದರೆ ಮಾತ್ರ ಅದಕ್ಕೆ ಫೈಬ್ರಾಯ್ಡ್ಸ್, ಐಯುಡಿ, ಎಂಡೋಮೆಟ್ರಿಯೋಸಿಸ್, ಅಡೆನೋಮಯೋಸಿಸ್, ಲೈಂಗಿಕವಾಗಿ ಹರಡುವ ಕಾಯಿಲೆಗಳು, ಒತ್ತಡ ಕಾರಣವಾಗಿರಬಹುದು. 

5. ಪೀರಿಯಡ್ಸ್‌ಗಳ ಮಧ್ಯೆ ಬ್ಲೀಡಿಂಗ್

ಪೀರಿಯಡ್ಸ್ ಮುಗಿದ ಬಳಿಕ ಮಧ್ಯಾವಧಿಯಲ್ಲಿ ಸ್ವಲ್ಪ ರಕ್ತ ಕಾಣಿಸಿಕೊಳ್ಳುವುದು ಅಥವಾ ಬ್ಲೀಡ್ ಆಗುವುದು ಕಂಡುಬಂದರೆ ಅದಕ್ಕೆ ಜನನ ನಿಯಂತ್ರಣ ವಿಧಾನ ಬದಲಿಸಿದ್ದು ಕಾರಣವಿರಬಹುದು. ಇದಲ್ಲದೆ ಬೇರೆ ಕಾರಣವಾಗಿದ್ದರೆ ವೈದ್ಯರನ್ನು ಭೇಟಿಯಾಗಬೇಕು. ಏಕೆಂದರೆ ಇದಕ್ಕೆ ಲೈಂಗಿಕ ಕಾಯಿಲೆಗಳು, ಪಿಸಿಒಎಸ್, ಯೋನಿಗಾದ ಗಾಯ, ಗರ್ಭಾಶಯದಲ್ಲಿ ಗಂಟು, ಗುಳ್ಳೆಗಳಾಗುವುದು, ಅಬಾರ್ಶನ್, ಪೆರಿಮೆನೋಪಾಸ್, ಸರ್ವಿಕಲ್, ಓವಾರಿಯನ್ ಅಥವಾ ಯುಟೆರಿನ್ ಕ್ಯಾನ್ಸರ್ ಕೂಡಾ ಕಾರಣವಿರಬಹುದು. 

click me!