ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಚತ್ರು, ಕೇವಲ ಹತ್ತನೇ ತರಗತಿ ಪಾಸಾಗಿದ್ದರೂ, ಮರದ ಆಟಿಕೆಗಳನ್ನು ತಯಾರಿಸಿ ಅಮೆಜಾನ್‌ನಲ್ಲಿ ಮಾರಾಟ ಮಾಡುವ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ದೇಶ-ವಿದೇಶಗಳಲ್ಲಿ ಅವರ ಉತ್ಪನ್ನಗಳಿಗೆ ಬೇಡಿಕೆಯಿದ್ದು, ಹಲವರಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ.
ರಾಜಸ್ಥಾನ (ಡಿ.16): ನಮ್ಮ ಹಿರಿಯರು ಗಾದೆಯೊಂದನ್ನು ಹೇಳುವಂತೆ 'ಓದು ಒಕ್ಕಾಲಾಗಿದ್ದರೂ, ಬುದ್ಧಿ ಮುಕ್ಕಾಲು' ಆಗಿದ್ದರೆ ಜೀವನದಲ್ಲಿ ಯಶಸ್ಸು ಖಚಿತ. ಈ ಗಾದೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಮಹಿಳೆ ಚತ್ರು ಅವರಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಅವರು ಮರದಿಂದ ವಿವಿಧ ರೀತಿಯ ಆಟಿಕೆಗಳು ಮತ್ತು ಉತ್ಪನ್ನಗಳನ್ನು ತಯಾರಿಸಿ ಅವುಗಳನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡುತ್ತಾ, ತಿಂಗಳಿಗೆ 1 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.
ಇವರು ಮೂಲತಃ ಬಾರ್ಮರ್‌ನ ಪಾಕಿಸ್ತಾನ ಗಡಿ ಪ್ರದೇಶದ ಲಖೇ ಕಾ ತಲಾ ಗ್ರಾಮದವರು. ವರ್ಷಕ್ಕೆ ಸುಮಾರು 15 ಲಕ್ಷ ರೂಪಾಯಿ ಗಳಿಸುತ್ತಾರೆ. ಹತ್ತನೇ ತರಗತಿಯವರೆಗೆ ಓದಿರುವ ಈ ಮಹಿಳೆಯ ಉತ್ಪನ್ನಗಳನ್ನು ರಾಜಸ್ಥಾನದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ಜನರು ಆನ್‌ಲೈನ್‌ನಲ್ಲಿ ಖರೀದಿಸುತ್ತಾರೆ. ಇತ್ತೀಚೆಗೆ ಸರ್ಕಾರದ ಒಂದು ವರ್ಷದ ಸಂದರ್ಭದಲ್ಲಿ ನಡೆದ ಪ್ರದರ್ಶನದಲ್ಲಿ ಇವರ ಅಂಗಡಿಯನ್ನು ನೋಡಿ ಜಿಲ್ಲಾಧಿಕಾರಿ ಟೀನಾ ಡಾಬಿ ಕೂಡ ಪ್ರಭಾವಿತರಾದರು.
ಇದನ್ನೂ ಓದಿ: ಈ ₹100 ನೋಟು ಇದ್ದರೆ, ನೀವು ಈಗಲೇ ಲಕ್ಷಾಧಿಪತಿ ಆಗಬಹುದು!
ಹತ್ತನೇ ತರಗತಿಯವರೆಗೆ ಓದು: ಚತ್ರು ಹೇಳುವಂತೆ, ಮೊದಲು ಅವರು ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆ ಸಮಯದಲ್ಲಿ, ಅಂತಹ ಉತ್ಪನ್ನಗಳನ್ನು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಲ್ಲಿಯೂ ಪ್ರದರ್ಶಿಸಲಾಗುತ್ತದೆ ಎಂದು ಅವರಿಗೆ ತಿಳಿದುಬಂದಿತು. ಹೀಗಾಗಿ ಅವರು ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದರು. ಪ್ರಸ್ತುತ, ಅವರ ವಾರ್ಷಿಕ ವಹಿವಾಟು 15 ಲಕ್ಷ ರೂಪಾಯಿಗಳಷ್ಟಿದೆ.
undefined
ಸ್ವಾವಲಂಬನೆಯ ವಿಷಯದಲ್ಲಿ ಮಾದರಿ: ಇಷ್ಟೇ ಅಲ್ಲ, ಪ್ರಸ್ತುತ 5 ರಿಂದ 7 ಜನರಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ. ಅವರು ಮರದ ಜಿಂಕೆ, ಗಿಳಿ ಸೇರಿದಂತೆ ಇತರ ಪ್ರಾಣಿ ಪಕ್ಷಿಗಳನ್ನು ತಯಾರಿಸುತ್ತಾರೆ. ಇವುಗಳನ್ನು ಆಟಿಕೆಗಳಾಗಿ ಮಾತ್ರವಲ್ಲದೆ ಅಲಂಕಾರಿಕ ವಸ್ತುಗಳಾಗಿಯೂ ಬಳಸಲಾಗುತ್ತದೆ. ಪ್ರಸ್ತುತ, ಅವರು ಬಾರ್ಮರ್‌ನಲ್ಲಿ ಮಹಿಳೆಯರ ಸ್ವಾವಲಂಬನೆಯ ವಿಷಯದಲ್ಲಿ ಒಂದು ಮಾದರಿಯಾಗಿದ್ದಾರೆ. ಈಗ ಅವರ ಕನಸು ತಮ್ಮದೇ ಆದ ಕಂಪನಿಯನ್ನು ಪ್ರಾರಂಭಿಸುವುದು, ಇದರಿಂದ ಡಜನ್ಗಟ್ಟಲೆ ಜನರಿಗೆ ಉದ್ಯೋಗ ದೊರೆಯುತ್ತದೆ.
ಇದನ್ನೂ ಓದಿ: ಹೊಟೇಲ್’ನಲ್ಲಿ ವೈಟರ್ ಆಗಿದ್ದಾಕೆ ಈಗ 100 ಕೋಟಿಯ ಒಡತಿ… ಜಗತ್ಪ್ರಸಿದ್ಧ ಆಟಗಾರನ ಗರ್ಲ್ ಫ್ರೆಂಡ್!