ಮಕ್ಕಳ ಕಳ್ಳರು ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಸ್ಕೂಲ್ ಬಸ್‌ಗೆ ಕಾಯುತ್ತಿದ್ದ ಮಗುವನ್ನು ಅಪರಿಚತನೊಬ್ಬ ಅಪಹರಣ ಮಾಡಿರುವ ಶಾಕಿಂಗ್ ವಿಡಿಯೋ ವೈರಲ್ ಆಗಿದೆ.
ಮಕ್ಕಳ ಕಳ್ಳತನ ಎನ್ನುವುದು ಇಂದು, ನಿನ್ನೆಯ ಮಾತಲ್ಲ. ಮಕ್ಕಳ ಕಳ್ಳರು ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಸ್ಕೂಲ್ ಬಸ್‌ಗೆ ಕಾಯುತ್ತಿದ್ದ ಮಗುವನ್ನು ಅಪರಿಚಿತನೊಬ್ಬ ಅಪಹರಣ ಮಾಡಿರುವ ಶಾಕಿಂಗ್ ವಿಡಿಯೋ ವೈರಲ್ ಆಗಿದೆ. ಸ್ಕೂಲ್ ಬಸ್‌ಗೆ ಕಾಯುತ್ತಿದ್ದ ಸಂದರ್ಭದಲ್ಲಿ ಯಾವುದೋ ನೆಪ ಮಾಡಿ ಬಂದಿರುವ ಕಳ್ಳ ಮಕ್ಕಳ ಅಮ್ಮನನ್ನು ಒಳಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದು, ನಂತರ ಇಬ್ಬರು ಮಕ್ಕಳಲ್ಲಿ ಒಬ್ಬನನ್ನು ಕ್ಷಣ ಮಾತ್ರದಲ್ಲಿ ಕದ್ದು, ಶರ ವೇಗದಲ್ಲಿ ಅಪಹರಿಸಿ ಬೈಕ್‌ನಲ್ಲಿ ಹೊತ್ತು ಸಾಗಿದ್ದಾನೆ. ಈ ವೈರಲ್ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯವಾಗಿದೆ. ಇದರಲ್ಲಿ ಅಮ್ಮನ ಜೊತೆ ಮಕ್ಕಳು ಶಾಲೆಯ ಬಸ್‌ಗೆ ಗೇಟ್ ಬಳಿ ಕಾಯುತ್ತಿರುವುದನ್ನು ನೋಡಬಹುದು.
ಆ ಕ್ಷಣದಲ್ಲಿ ಒಬ್ಬಾತ ಅಲ್ಲಿಗೆ ಬಂದಿದ್ದಾನೆ. ಮಹಿಳೆಯ ಬಳಿ ಏನೋ ಕೇಳಿದ್ದಾನೆ. ಬಹುಶಃ ಕುಡಿಯಲು ನೀರು ಏನಾದರೂ ಕೇಳಿರಬಹುದು. ಅವನನ್ನು ನೋಡಿದ ಮಹಿಳೆ ಅಯ್ಯೋ ಪಾಪ ಎಂದುಕೊಂಡು ಅದನ್ನು ತರಲು ಒಳಗೆ ಹೋಗಿದ್ದಾಳೆ. ಚಿಕ್ಕ ಮಕ್ಕಳಿಗೆ ಏನೂ ಗೊತ್ತಾಗದೇ ಅಲ್ಲಿಯೇ ನಿಂತಿದ್ದಾರೆ. ಆಗ ಅದರಲ್ಲಿ ಒಂದು ಮಗುವನ್ನು ಎತ್ತಿಕೊಂಡು ಆ ವ್ಯಕ್ತಿ ಬೈಕ್ ಏರಿ ಹೊರಟಿದ್ದಾನೆ. ಮುಂದೇನಾಯಿತು ಎನ್ನುವುದು ತಿಳಿದಿಲ್ಲ. ಸಿಸಿಟಿವಿಯಲ್ಲಿ ಈ ವ್ಯಕ್ತಿಯ ಮುಖ ಚೆನ್ನಾಗಿ ಕಾಣಿಸುತ್ತದೆ. ಇದು ಎಲ್ಲಿಯದೃಶ್ಯ ಎನ್ನುವುದೂ ಸದ್ಯ ತಿಳಿದು ಬಂದಿಲ್ಲ. ಮುಖ ಸುಲಭದಲ್ಲಿ ಗುರುತಿಸಬಹುದಾಗಿರುವ ಕಾರಣ, ಕಳ್ಳ ಸಿಕ್ಕರೂ ಸಿಗುವ ಸಾಧ್ಯತೆ ಇದೆ. ಆದರೆ ಎಲ್ಲಾ ಕಡೆಗಳಲ್ಲಿ ಸಿಸಿಟಿವಿ ಇರುವುದಿಲ್ಲವಲ್ಲ, ಒಂದು ವೇಳೆ ಇದ್ದರೂ, ಆ ಕಳ್ಳರನ್ನು ಹುಡುಕುವುದು ಅಷ್ಟುಸುಲಭದ ಮಾತು ಕೂಡ ಅಲ್ಲ. ಆದ್ದರಿಂದ ಪಾಲಕರು ಎಷ್ಟು ಎಚ್ಚರದಿಂದ ಇದ್ದರೂ ಸಾಕಾಗುವುದಿಲ್ಲ.
ಬ್ರೇಕ್ ಬದ್ಲು ಆಕ್ಸಿಲರೇಟರ್ ಒತ್ತಿದ ವೈದ್ಯ: ಜೀವವೇ ಹೋಯ್ತು- ಸಿಸಿಟಿವಿಯಲ್ಲಿ ಶಾಕಿಂಗ್ ಘಟನೆ ಸೆರೆ
ಶಾಲೆಗೆ ಹೋಗುವಾಗ ಮತ್ತು ಹೊರಡುವಾಗ, ಮಕ್ಕಳು ಏಕಾಂಗಿಯಾಗಿರುವಾಗ, ಬಸ್‌ನಲ್ಲಿ ಅಥವಾ ಕಾರಿನಲ್ಲಿ ಹೋಗುತ್ತಿರುವಾಗ ಮಕ್ಕಳ ನಿರಂತರ ಮೇಲ್ವಿಚಾರಣೆ ವಹಿಸಿಕೊಳ್ಳುವುದು ಇಂದಿನ ಅತ್ಯಗತ್ಯಗಳಲ್ಲಿ ಒಂದು ಎನ್ನುತ್ತಾರೆ ಪೊಲೀಸರು. ಉದ್ಯಾನವನಗಳು ಮತ್ತು ಆಟದ ಮೈದಾನಗಳಲ್ಲಿ ಅಥವಾ ಹೊರಗೆ ಆಟವಾಡುತ್ತಿರುವಾಗ, ಮಕ್ಕಳನ್ನು ಅಪರಿಚಿತರು ಸುಲಭವಾಗಿ ಸಂಪರ್ಕಿಸಬಹುದು ಅಥವಾ ಅಲೆದಾಡಬಹುದು. ಅಂಥ ಸಂದರ್ಭಗಳಲ್ಲಿಯೂ ನಿಗಾ ವಹಿಸಬೇಕು ಎನ್ನುವುದು ಅವರಮಾತು. ಅಷ್ಟೇ ಅಲ್ಲದೆ, ಶಾಪಿಂಗ್ ಮಾಲ್‌ಗಳು ಮತ್ತು ಕಿಕ್ಕಿರಿದ ಸಾರ್ವಜನಿಕ ಸ್ಥಳಗಳು - ಈ ಪರಿಸರದಲ್ಲಿ, ಮಕ್ಕಳು ವಿಚಲಿತರಾಗಬಹುದು ಮತ್ತು ತಮ್ಮ ಪೋಷಕರಿಂದ ಬೇರ್ಪಡಬಹುದು. ಆದ್ದರಿಂದ ಸದಾ ಮಕ್ಕಳ ಮೇಲೆ ನಿಗಾ ಇಟ್ಟಿರಿ ಎಂಬ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ನೀಡಿದೆ.
undefined
ಸಾರ್ವಜನಿಕ ಸಾರಿಗೆ - ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳು ಕೂಡ ಮಕ್ಕಳ ಅಪಹರಣಕ್ಕೆ ಸುಲಭದ ಮಾರ್ಗಗಳಾಗುತ್ತವೆ ಎಂದಿರುವ ಪೊಲೀಸರು ಮಕ್ಕಳು ಎಲ್ಲಿಯೇ ಹೋದರೂ ಅವರನ್ನು ಪತ್ತೆ ಹಚ್ಚಲು ಸುಲಭ ಆಗುವಂತೆ StepWhere ಸ್ಮಾರ್ಟ್ ಶೂಸ್‌ಗಳನ್ನು ಮಕ್ಕಳಿಗೆ ಹಾಕುವಂತೆ ಸೂಚನೆ ನೀಡಲಾಗಿದೆ. ಇದರಿಂದ ನಿಮ್ಮ ಮಗು ಎಲ್ಲಿದ್ದರೂ ನೀವು ಅವರೊಂದಿಗೆ ಸಂಪರ್ಕದಲ್ಲಿರಬಹುದು. ಈ GPS-ಸಕ್ರಿಯಗೊಳಿಸಿದ ಬೂಟುಗಳು ನೈಜ ಸಮಯದಲ್ಲಿ ಅವರ ನಿಖರವಾದ ಸ್ಥಳವನ್ನು ಟ್ರ್ಯಾಕ್ ಮಾಡಲು ನಿಮಗೆ ಅನುಮತಿಸುತ್ತದೆ ಎಂದು StepWhere ಕಂಪೆನಿ ಹೇಳಿಕೊಂಡಿದೆ. ಅಪಹರಣದ ವಿಡಿಯೋ ಕೂಡ ಅದೇ ಶೇರ್ ಮಾಡಿದೆ.
ಸತ್ರೂ ಇನ್ನೊಮ್ಮೆ ವಿಮಾನದಲ್ಲಿ ಹೋಗಂಗಿಲ್ಲ... ನರಕದ ಅನುಭವ ತೆರೆದಿಟ್ಟ ಬಿಗ್‌ಬಾಸ್ ಹನುಮಂತು!