Jan 13, 2024, 1:44 PM IST
ಬೆಂಗಳೂರು(ಜ.13): ಅವರೆಲ್ಲಾ ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ಸ್.. ಒಂದು ಸಿನಿಮಾದ ಯಶಸ್ಸನ ಸಂಭ್ರಮಿಸಲು ಒಂದು ಪ್ರತಿಷ್ಟಿತ ರೆಸ್ಟೋಬಾರ್ ಒಂದರಲ್ಲಿ ಸೇರಿದ್ರು. ಆದ್ರೆ ಅದೇ ಪಾರ್ಟಿ ಅವರೆಲ್ಲರನ್ನೂ ಇವತ್ತು ಪೊಲೀಸ್ ಠಾಣೆಗೆ ಬರುವಂತೆ ಮಾಡಿತ್ತು. ಹಾಗಾದ್ರೆ ಆ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ಅಂಥದ್ದೇನು ನಡೀತು..? ಪೊಲೀಸರು ಬರೋಬ್ಬರಿ 8 ಸ್ಟಾರ್ಸ್ಗಳಿಗೆ ನೋಟೀಸ್ ಕೊಟ್ಟಿದ್ದೇಕೆ..? ಒಂದು ಸಿನಿಮಾದ ಸಕ್ಸಸ್ ಪಾರ್ಟಿ ಕಿರಿಕ್ ಪಾರ್ಟಿಯಾಗಿ ಬದಲಾದ ಕಥೆಯೇ ಇವತ್ತಿನ ಎಫ್.ಐ.ಆರ್.
ಲೇಟ್ನೈಟ್ ಪಾರ್ಟಿ ಮಾಡಿ ನಂತರ ಪೊಲೀಸರಿಗೇ ಆವಾಜ್ ಹಾಕಿದ್ರೆ ಯಾರು ತಾನೇ ಸುಮ್ಮನಿರುತ್ತಾರೆ ಹೇಳಿ.. ಸೀದಾ ಪೊಲೀಸರು ನೋಟಿಸ್ ನೀಡಿಯೇ ಬಿಟ್ಟರು.. ನೋಟಿಸ್ ಹಿನ್ನಲೆ ಇವತ್ತು 8 ಸ್ಟಾರ್ಸ್ಗಳು ವಿಚಾರಣೆ ಹಾಜರ್ ಆಗಿದ್ರು.. ಪೊಲೀಸರ ಆ ವಿಚಾರಣೆ ಹೇಗಿತ್ತು..? ಯಾವೆಲ್ಲಾ ಪ್ರಶ್ನೆಗಳನ್ನ ನಟರಿಗೆ ಕೇಳಲಾಯ್ತು..? ಎಲ್ಲವನ್ನ ಹೆಳ್ತೀವಿ ನೋಡಿ.
ರಾಕಿಭಾಯ್ ಜೊತೆ ‘ಟಾಕ್ಸಿಕ್’ನಲ್ಲಿ ಕರೀನಾ ಕಪೂರ್ ನಟಿಸೋದು ಗ್ಯಾರಂಟಿ!
ನಿಯಮದ ಪ್ರಕಾರ ರಾತ್ರಿ 1 ಗಂಟೆಗೆ ಎಲ್ಲಾ ಪಾರ್ಟಿಗಳು ಎಂಡ್ ಆಗಬೇಕು ಆದ್ರೆ ಅಲ್ಲಿ ನಿಯಮವನ್ನ ಮೀರಿ ಸ್ಟಾರ್ಸ್ಗಳು ಎಂಜಾಯ್ ಮಾಡ್ತಿದ್ರು..ಇದೇ ಕಾರಣಕ್ಕೆ 8 ಸ್ಟಾರ್ ನಟರಿಗೆ ಪೊಲೀಸರು ನೋಟಿಸ್ ಕಳಿಸಿದ್ರು.. ನೋಟಿಸ್ ಪರಿಣಾಮ ಆ ಎಂಟೂ ಸ್ಟಾರ್ಸ್ಗಳು ವಿಚಾರಣೆಗೆ ಹಾಜರ್ ಆಗಿದ್ರು.. ಆದ್ರೆ ಅವರು ಬರುವ ಹೊತ್ತಿಗೆ ಪೊಲೀಸರು ಪ್ರಶ್ನೆಗಳ ಲಿಸ್ಟ್ ರೆಡಿ ಮಾಡಿಕೊಂಡಿದ್ರು.. ಆದ್ರೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ಹೊರಬಂದ ರಾಕ್ಲೈನ್ ವೆಂಕಟೇಶ್.. ಇದು ಯಾರ ಷಡ್ಯಂತ್ರ ಅಂತ ಗೊತ್ತಿದೆ.. ದರ್ಶನ್ ಹೆಸರಿಗೆ ಮಸಿ ಬಳಿಯಲು ಈ ರೀತಿ ಮಾಡ್ತಿದ್ದಾರೆ ಅಂತ ಹೇಳಿದ್ರು.
ಸದ್ಯ ಪೊಲೀಸರು ಹೇಳಿಕೆಗಳನ್ನ ಪಡೆದಿದ್ದಾರೆ. ಒಂದು ವೇಳೆ ಇವರೆಲ್ಲಾ 1 ಗಂಟೆಯ ನಂತರವೂ ಅಲ್ಲಿ ಊಟ ಮಾಡಿದ್ದೇ ಆದ್ರೆ ಈ ಕೇಸ್ನಲ್ಲಿ ಇವರುಗಳೇ ಸಾಕ್ಷಿಗಳಾಗ್ತಾರೆ. ನಂತರ ಪೊಲೀಸರು ಚಾರ್ಜ್ಶೀಟ್ ರೆಡಿ ಮಾಡಿ ಕೋರ್ಟ್ಗೆ ಸಲ್ಲಿಸಲಿದ್ದಾರೆ. ಕೋರ್ಟ್ನಲ್ಲಿ ಈ ಆರೋಪ ಸಾಭೀತಾದ್ರೆ ಸ್ಟಾರ್ ನಟರಿಗೆ ಸಂಕಷ್ಟ ಎದುರಾದ್ರೂ ಅಚ್ಚರಿ ಇಲ್ಲ.