ಇಂದಿನಿಂದ ಚಳಿಗಾಲದ ಬಿಸಿಬಿಸಿ ಅಧಿವೇಶನ, ಕೋಲಾಹಲಕ್ಕೆ ಕಾರಣವಾಗಲಿದ್ಯಾ ಅದಾನಿ ಹಗರಣ, ವಕ್ಫ್‌ ಮಸೂದೆ?

By Kannadaprabha News  |  First Published Nov 25, 2024, 8:35 AM IST

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಗೌತಮ್ ಅದಾನಿ ವಿರುದ್ಧದ ಸೌರ ವಿದ್ಯುತ್ ಹಗರಣ ಆರೋಪ ಮತ್ತು ಮಣಿಪುರ ಗಲಭೆಗಳು ಪ್ರಮುಖ ವಿಷಯಗಳಾಗಿವೆ. ವಕ್ಫ್ (ತಿದ್ದುಪಡಿ) ಮಸೂದೆ ಅಂಗೀಕಾರಕ್ಕೆ ಸರ್ಕಾರದ ಪ್ರಯತ್ನ ಮತ್ತು 15 ಇತರ ಮಸೂದೆಗಳನ್ನು ಮಂಡಿಸುವ ಯೋಜನೆಯೂ ಇದೆ.


ನವದೆಹಲಿ (ನ.25): ಸಂಸತ್ತಿನ ಚಳಿಗಾಲ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಅಧಿವೇಶನದಲ್ಲಿ ಉದ್ಯಮಿ ಗೌತಮ್‌ ಅದಾನಿ ವಿರುದ್ಧದ ಸೌರ ವಿದ್ಯುತ್‌ ಹಗರಣ ಆರೋಪ ಹಾಗೂ ಮಣಿಪುರ ಗಲಭೆಗಳು ಮೊದಲ ದಿನದಿಂದಲೇ ಕೋಲಾಹಲ ಎಬ್ಬಿಸುವ ಸಂಭವ ಇದೆ. ಇದರ ಜತೆಗೆ ವಿವಾದಾತ್ಮಕ ವಕ್ಫ್‌ (ತಿದ್ದುಪಡಿ) ಮಸೂದೆ ಅಂಗೀಕಾರಕ್ಕೆ ಸರ್ಕಾರ ಸರ್ವಸಿದ್ಧತೆ ಮಾಡಿಕೊಂಡಿದ್ದು, ಕಲಾಪಗಳು ಕಾವೇರುವ ಎಲ್ಲ ಲಕ್ಷಣಗಳಿವೆ. ಏತನ್ಮಧ್ಯೆ, ನ.26ರಂದು ದೇಶವು ಸಂವಿಧಾನವನ್ನು ಸ್ವೀಕರಿಸಿ 75 ವರ್ಷಗಳಾಗಲಿದ್ದು, ಅಂದು ಸಂಸತ್ತಿನ ಜಂಟಿ ಅಧಿವೇಶನ ನಡೆಯಲಿದೆ. ಬಳಿಕ ನಿಯಮಿತ ಕಲಾಪಗಳು ನಡೆಯಲಿದ್ದು, ಡಿ.20ರಂದು ಅಧಿವೇಶನ ಮುಕ್ತಾಯಗೊಳ್ಳಲಿದೆ.

ಅದಾನಿ ಅವರು ತಮ್ಮ ಕಂಪನಿ ಉತ್ಪಾದಿಸಿದ ಸೌರ ವಿದ್ಯುತ್‌ ಮಾರಾಟಕ್ಕೆ ಕೆಲವು ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ 2100 ಕೋಟಿ ರು. ಲಂಚ ನೀಡಿದರು ಎಂದು ಅಮೆರಿಕದಲ್ಲಿ ದೋಷಾರೋಪ ಹೊರಿಸಲಾಗಿದೆ. ಹೀಗಾಗಿ ಅದಾನಿಗೆ ಪ್ರಧಾನಿ ನರೇಂದ್ರ ಮೋದಿ ಶ್ರೀರಕ್ಷೆ ಇದೆ ಎಂದು ಆರೋಪಿಸಿ ವಿಪಕ್ಷಗಳು ಗದ್ದಲ ಎಬ್ಬಿಸುವ ಸಂಭವವಿದೆ. ಮಣಿಪುರ ಗಲಭೆಯನ್ನೂ ಪ್ರಸ್ತಾಪಿಸಿ ವಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲಿವೆ.

Tap to resize

Latest Videos

ಮುಡಾ ಹಗರಣ: ರಾಜ್ಯದಲ್ಲಿರುವುದು ಎ1 ಆರೋಪಿ ಸರ್ಕಾರ, ಬಿಜೆಪಿ ಶಾಸಕ ಶ್ರೀವತ್ಸ

ಇನ್ನು ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಅರಕ್ಕೆ ಈ ಅಧಿವೇಶನದಲ್ಲಿ ಸರ್ಕಾರ ಯತ್ನಿಸಲಿದೆ ಎಂದು ಗೃಹ ಸಚಿವ ಅಮಿತ್‌ ಶಾ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ವಿಪಕ್ಷಗಳ ವಿರೋಧ ಇರುವ ಕಾರಣ ಸದನ ರಣರಂಗವಾದರೂ ಅಚ್ಚರಿಯಿಲ್ಲ ಎನ್ನಲಾಗಿದೆ.

ಐಪಿಎಲ್ ಹರಾಜು: ಮುಂಬೈ ಇಂಡಿಯನ್ಸ್‌ಗೆ ಟಕ್ಕರ್ ಕೊಟ್ಟು ಮಾರಕ ವೇಗಿ ಖರೀದಿಸಿದ ರಾಜಸ್ಥಾನ ರಾಯಲ್ಸ್!

15 ಮಸೂದೆ ಮಂಡನೆ:  ಇದೇ ವೇಳೆ ಅಭಿವೃದ್ಧಿ ಚಟುವಟಿಕೆಗೆ ಸಂಬಂಧಿಸಿದ 15 ಇತರ ಮಸೂದೆಗಳನ್ನೂ ಸರ್ಕಾರ ಪಟ್ಟಿ ಮಾಡಿದೆ. ಆದರೆ ವಿವಾದಾತ್ಮಕ ‘ಒಂದು ದೇಶ ಒಂದು ಚುನಾವಣೆ’ಯನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ.


 

click me!