Ballary: ಆಪರೇಷನ್‌ ಕಮಲ ಭೀತಿ, ರೆಸಾರ್ಟ್ ಮೊರೆ ಹೋದ ಕಾಂಗ್ರೆಸ್

Mar 17, 2022, 11:05 AM IST

ಬಳ್ಳಾರಿ (ಮಾ. 17): ಬಳ್ಳಾರಿಯಲ್ಲಿ ಮತ್ತೊಮ್ಮೆ ರೆಸಾರ್ಟ್ ರಾಜಕೀಯಕ್ಕೆ ಮುಂದಾಗಿದೆ ಕಾಂಗ್ರೆಸ್.  ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಆಪರೇಷನ್ ಕಮಲದ ಭೀತಿ ಹಿನ್ನೆಲೆ ಕಾಂಗ್ರೆಸ್ ಸದಸ್ಯರು ರೆಸಾರ್ಟ್ ಗೆ ಶಿಫ್ಟ್ ಆಗಿದ್ದಾರೆ. ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಮೇಯರ್ ಉಪ ಮೇಯರ್ ಚುನಾವಣೆಗೆ ಆಪರೇಷನ್ ಕಮಲ ಭೀತಿ ಎದುರಾಗಿದೆ. 

ಭ್ರಷ್ಟಚಾರ, ನಿರುದ್ಯೋಗ ಮುಕ್ತ, ರೈತ ಸ್ನೇಹಿ ಸರ್ಕಾರ ನೀಡುತ್ತೇವೆ: ಪಂಜಾಬ್ ಸಿಎಂ ಮಾನ್ ಭರವಸೆ

ಪೂರ್ಣ ಬಹುಮತ  ಜೊತೆಗೆ ಪಕ್ಷೇತರರ ಬೆಂಬಲ ಇದ್ರೂ ಕಾಂಗ್ರೆಸ್ ಗೆ ಆಪರೇಷನ್ ಭೀತಿ ಕಾಡುತ್ತಿದೆ. ಮಾರ್ಚ್ 19ರಂದು ನಡೆಯಲಿರುವ ಪಾಲಿಕೆ ಚುನಾವಣೆವರೆಗೂ ರೆಸಾರ್ಟ್‌ನಲ್ಲಿ ಲಾಕ್ ಆಗಲಿದ್ದಾರೆ ಸದಸ್ಯರು. ಕೆಪಿಸಿಸಿ ಸೂಚನೆ ಮೇರೆಗೆ 21 ಕಾಂಗ್ರೆಸ್ ಮತ್ತು ಐವರು ಪಕ್ಷೇತರರು ಬೆಂಗಳೂರು ರೆಸಾರ್ಟ್ ಗೆ ಶಿಫ್ಟ್ ಆಗಲಿದ್ದಾರೆ. ಒಟ್ಟು 39 ಸದಸ್ಯರ ಬಲ ಇರುವ ಪಾಲಿಕೆಯಲ್ಲಿ 21 ಕಾಂಗ್ರೆಸ್,  5 ಪಕ್ಷೇತರರು ಮತ್ತು 13 ಬಿಜೆಪಿ ಸದಸ್ಯರಿದ್ದಾರೆ.