ನಾವು ದಿನಬಳಕೆ ಮಾಡುವ ಅದೆಷ್ಟೋ ವಸ್ತುಗಳು ನಮ್ಮನ್ನು ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತೆ. ಅವುಗಳಲ್ಲಿ ಹೆಚ್ಚಿನವುಗಳ ಬಗ್ಗೆ ನಮಗೆ ಗೊತ್ತೇ ಇರೋದಿಲ್ಲ. ಅಂತಹ ಕೆಲವೊಂದು ಟಿಪ್ಸ್ ಗಳ ಬಗ್ಗೆ ನಾವು ನಿಮಗೆ ಹೇಳ್ತೀವಿ. ಇವು ಸಾಮಾನ್ಯವಾಗಿ ನಮ್ಮನ್ನು ಕಾಡುವ ಸಮಸ್ಯೆಗಳಿಂದ ಪರಿಹಾರ ನೀಡುತ್ತೆ.
ಕೆಮ್ಮು (Cough) : 6 ಖರ್ಜೂರವನ್ನು ತೆಗೆದುಕೊಂಡು ಅದನ್ನ ಅರ್ಧ ಲೀಟರ್ ನೀರಿನಲ್ಲಿ ಹಾಕಿ ಲೋ ಫ್ಲೇಮ್ ನಲ್ಲಿ 25 ನಿಮಿಷ ಕುದಿಸಿ. ದಿನಕ್ಕೆ ಮೂರು ಬಾರಿ ಇದನ್ನ ಕುಡಿಯಿರಿ. ಒಣ ಕೆಮ್ಮು ಸಮಸ್ಯೆ ಬೇಗನೆ ನಿವಾರಣೆಯಾಗುತ್ತೆ.
ಆಸಿಡಿಟಿ (Acidity) : ನಿಮಗೆ ಆಸಿಡಿಟಿ ಸಮಸ್ಯೆ ಇದೆಯಾ? ಹಾಗಿದ್ರೆ ಪ್ರತಿದಿನ ಊಟದ ಬಳಿಕ ಲವಂಗವನ್ನು ಬಾಯಿಯಲ್ಲಿ ಇಟ್ಟು ಚಪ್ಪರಿಸಿ. ಇದರಿಂದ ಆಸಿಡಿಟಿ ಬೇಗನೆ ನಿವಾರಣೆಯಾಗುತ್ತದೆ.
ಶೀತ (Cold) : ನಿಮಗೆ ಶೀತ ಸಮಸ್ಯೆ ಕಾಡುತ್ತಿದ್ದರೆ, ಶುಂಠಿ ಟಿ ಮಾಡಿ ಅದಕ್ಕೆ ಸ್ವಲ್ಪ ಕರಿಮೆಣಸಿನ ಪುಡಿ ಮತ್ತು ಬೆಲ್ಲವನ್ನು ಬೆರೆಸಿ ಸೇವಿಸಿ. ಇದರಿಂದ ಶೀತ, ಮೂಗು ಕಟ್ಟುವುದು ಎಲ್ಲವೂ ನಿವಾರಣೆಯಾಗುತ್ತೆ.
ಹೊಟ್ಟೆ ನೋವು (Stomach Pain) : ಕಾರಣವಿಲ್ಲದೇ ಹೊಟ್ಟೆ ನೋವಾಗುತ್ತಿದ್ದರೆ ಶೀಘ್ರ ಪರಿಣಾಮಕ್ಕಾಗಿ ಅರ್ಧ ಟೀ ಸ್ಪೂನ್ ಜೀರಿಗೆ ಪುಡಿಗೆ, ಚಿಟಿಕೆ ಹಿಂಗು ಮತ್ತು ಚಿಟಿಕೆ ಕಲ್ಲುಪ್ಪು ಸೇರಿಸಿ ಚಪ್ಪರಿಸಿ, ಬಳಿಕ ನೀರು ಕುಡಿಯಿರಿ. ಹೊಟ್ಟೆ ನೋವು ನಿವಾರಣೆಯಾಗುತ್ತೆ.
ಕಾಲು ಗಂಟುಗಳಲ್ಲಿ ನೋವು (Joint Pain): ವಯಸ್ಸಾಗುತ್ತಾ ಬಂದಂತೆ ಕಾಲಿನ ಗಂಟು, ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ, ಪ್ರತಿದಿನ ಒಂದು ಗ್ಲಾಸ್ ಹಾಲಿಗೆ ಬೆಲ್ಲ ಬೆರೆಸಿ ಸೇವಿಸಿ, ಇದರಿಂದ ಮಸಲ್ಸ್, ಬೋನ್ಸ್ ಸ್ಟ್ರಾಂಗ್ ಆಗುತ್ತೆ.
ಪುದೀನಾ (Mint) : ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಾ, ಹಾಗಿದ್ರೆ ಪುದೀನಾ ಸೊಪ್ಪಿನ ನೀರು, ಡಿಟಾಕ್ಸ್ ವಾಟರ್ ಮಾಡಿ ಕುಡಿಯಿರಿ. ಇದರಿಂದ ಪಿರಿಯಡ್ಸ್ ನೋವಿನಿಂದ ವಿಶ್ರಾಂತಿ ಸಿಗುತ್ತೆ.
ತಲೆ ನೋವು (Headache) : ತುಂಬಾನೆ ಬಿಸಿಲಿನಿಂದಾಗಿ ತಲೆ ನೋವಾಗ್ತಾ ಇದ್ಯಾ? ಹಾಗಿದ್ರೆ ಕಲ್ಲಂಗಡಿ ಹಣ್ಣಿನ ಜ್ಯೂಸ್ ಕುಡಿಯಿರಿ. ಪ್ರತಿದಿನ ಒಂದು ಗ್ಲಾಸ್ ಜ್ಯೂಸ್ ಕುಡಿಯೋದರಿಂದ ತಲೆ ನೋವು ನಿವಾರಣೆಯಾಗುತ್ತೆ.