
ಇತ್ತೀಚೆಗೆ ಕೆಲವು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ರೀಲ್ಸ್‌ಗೆ ವೈರಲ್ ಆಗುವುದಕ್ಕಾಗಿ ಯಾವುದೇ ಹಂತಕ್ಕೆ ಇಳಿದು ಬಿಡುತ್ತಾರೆ. ಕೆಲ ದಿನಗಳ ಹಿಂದಷ್ಟೇ ಯುವಕನೋರ್ವ ರೀಲ್ಸ್‌ಗಾಗಿ ಮೂಗಿಗೆ ಹತ್ತಿ ತುಂಬಿಸಿ ವಾಹನಗಳಿಂದ ಗಿಜಿಗುಡುತ್ತಿದ್ದ ರಸ್ತೆಯಲ್ಲಿ ಹೆಣದಂತೆ ಮಲಗಿದ್ದ.ಈತನ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದರು. ಈಗ ಮಹಿಳೆಯ ಸರದಿ.
ಮಹಿಳೆಯೊಬ್ಬಳು ರೀಲ್ಸ್ ಮಾಡುವುದಕ್ಕಾಗಿ ತೆರೆದ ಬಾವಿಯ ಕಟ್ಟೆ ಮೇಲೆ ಕುಳಿತುಕೊಂಡು ಒಂದು ಕಾಲನ್ನು ಬಾವಿ ಒಳಭಾಗಕ್ಕೆ ಇಳಿಬಿಟ್ಟಿದ್ದಾಳೆ. ಮತ್ತೊಂದು ಕಾಲು ಕಟ್ಟೆ ಮೇಲೆಯೇ ಇದೆ. ಬಾವಿಯೊಳಗೆ ಇಳಿಬಿಟ್ಟ ಕಾಲಿನ ಮೇಲೆ ಆಕೆ ಪುಟ್ಟ ಮಗುವನ್ನು ನೇತಾಡಿಸಿಕೊಂಡು ವೀಡಿಯೋ ರೀಲ್ಸ್ ಮಾಡುತ್ತಿದ್ದಾಳೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೀಗೆ ಅಪಾಯಕಾರಿ ಸ್ಥಳದಲ್ಲಿ ಪುಟ್ಟ ಮಗುವಿನೊಂದಿಗೆ ರೀಲ್ಸ್ ಮಾಡಿದ ಮಹಿಳೆಯ ಬಗ್ಗೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಈಕೆ ತಾನು ಅಪಾಯಕ್ಕೊಳಗಾಗುವುದರ ಜೊತೆಗೆ ಏನು ಅರಿಯದ ಪುಟ್ಟ ಮಗುವನ್ನು ರೀಲ್ಸ್ ಹೆಸರಿನಲ್ಲಿ ಅಪಾಯಕ್ಕೆ ತಳ್ಳಿದ್ದಾಳೆ.
ವೈರಲ್ ರೀಲ್ಸ್‌ಗಾಗಿ ಮೂಗಿಗೆ ಹತ್ತಿ ತುಂಬಿಸಿ ರಸ್ತೆ ಮಧ್ಯೆ ಹೆಣದಂತೆ ಮಲಗಿದವನ ಬಂಧನ
@RawAndRealMan ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಒಬ್ಬರು ಹೀಗೆ ಬರೆದಿದ್ದಾರೆ, 'ಕೌಟುಂಬಿಕ ನ್ಯಾಯಾಲಯಗಳು ಮಕ್ಕಳನ್ನು ಪೋಷಕರ ಕಸ್ಟಡಿಗೆ ನೀಡುವ ಸಮಯದಲ್ಲಿ ಕೇವಲ ತಾಯಿ ಮಾತ್ರ ಮಗುವನ್ನು ಎಲ್ಲರಿಗಿಂತ ಹೆಚ್ಚು ಪ್ರೀತಿಸಬಲ್ಲಳು ಎಂದು ಹೇಳುತ್ತಾರೆ. ಆದರೆ ಇಲ್ಲಿ ನೋಡಿ ತಾಯಿ ಏನ್ ಮಾಡ್ತಿದ್ದಾಳೆ ಅಂತ' ಎಂದು ಬರೆದಿದ್ದಾರೆ. ಸೆಪ್ಟೆಂಬರ್ 18ರಂದು ಪೋಸ್ಟ್ ಆದ ಈ ವೀಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಅನೇಕರು ಮಹಿಳೆಯ ಈ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂತಹ ಮೂರ್ಖತನವಿದ್ದು, ಸಿಲ್ಲಿ ರೀಲ್ಸ್‌ಗಾಗಿ ಈಕೆ ತನ್ನ ಜೊತೆ ಮಗುವನ್ನು ಕೂಡ ಅಪಾಯಕ್ಕೆ ದೂಡಿದ್ದಾಳೆ ಎಂದು ಒಬ್ಬರು ದೂರಿದ್ದಾರೆ. ಈಕೆ ಹಾಡಹಗಲೇ ಈ ರೀತಿ ರೀಲ್ಸ್ ಮಾಡುವ ಮೂಲಕ ಕೊಲೆಯತ್ನ ನಡೆಸಿದ್ದಾಳೆ.
ಫೇಕ್ ಭಕ್ತಿಗೆ ಸಿಟ್ಟಿಗೆದ್ದ ಮಹಾದೇವ: ಗಂಗಾ ನದಿಗೆ ಬಿದ್ದ ರೀಲ್ಸ್ ರಾಣಿ
ಆದರೆ ಈ ರೀತಿ ರೀಲ್ಸ್ ಮಾಡಿದ ಮಹಿಳೆ ಯಾರು ಎಲ್ಲಿ ಈ ರೀಲ್ಸ್ ಮಾಡಲಾಗಿದೆ ಎಂಬ ಮಾಹಿತಿ ಇಲ್ಲ. ಅಲ್ಲದೇ ಇವರಿಬ್ಬರು ತಾಯಿ ಮಗನೇ ಎಂಬುದು ತಿಳಿದಿಲ್ಲ, ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಮಹಿಳೆಯ ಈ ಕೃತ್ಯಕ್ಕೆ ತೀವ್ರ ಆಕ್ರೋಶ ಕೇಳಿ ಬಂದಿದೆ. ಕೆಲವರು ವೀವ್ಸ್‌ಗಾಗಿ ತಮ್ಮದೇ ಮಕ್ಕಳನ್ನು ಅಪಾಯಕ್ಕೆ ತಳ್ಳುತ್ತಾರೆ. ಅವರಿಗೆ ಮಾನಸಿಕ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ನೀಡಬೇಕಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಅನೇಕರು ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡಲು ಹೋಗಿ ಜೀವನನ್ನೇ ಕಳೆದುಕೊಂಡಿದ್ದಾರೆ. ಆದರೂ ರೀಲ್ಸ್ ಮಾಡೋ ಕೆಲ ಅವಿವೇಕಿಗಳು ಬುದ್ಧಿ ಕಲಿಯದೇ ಇರೋದು ವಿಪರ್ಯಾಸ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ