ದೀಪಾವಳಿಗೆ ಡಾಲಿ ಧನಂಜಯ್, ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ನಟನೆಯ ಜೀಬ್ರಾ ತೆರೆಗೆ

By Kannadaprabha News  |  First Published Sep 21, 2024, 5:46 PM IST

ಡಾಲಿ ಧನಂಜಯ್ ಹಾಗೂ ತೆಲುಗು ನಟ ಸತ್ಯದೇವ್ ಅಭಿನಯದ ‘ಜೀಬ್ರಾ’ ಸಿನಿಮಾ ದೀಪಾವಳಿಗೆ ತೆರೆಗೆ ಬರಲಿದೆ. ಇದೀಗ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.


ಡಾಲಿ ಧನಂಜಯ್ ಹಾಗೂ ತೆಲುಗು ನಟ ಸತ್ಯದೇವ್ ಅಭಿನಯದ ‘ಜೀಬ್ರಾ’ ಸಿನಿಮಾ ದೀಪಾವಳಿಗೆ ತೆರೆಗೆ ಬರಲಿದೆ. ಇದೀಗ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮೋಷನ್ ಪೋಸ್ಟರ್​​ನಲ್ಲಿ ಸತ್ಯರಾಜ್, ಸತ್ಯ ಅಕ್ಕಲಾ, ಜೆನ್ನಿಫರ್ ಪಿಕ್ಕಿನಾಟೊ, ಸುನಿಲ್, ಪ್ರಿಯಾ ಭವಾನಿ ಶಂಕರ್, ಡಾಲಿ ಧನಂಜಯ್ ಮತ್ತು ಸತ್ಯ ದೇವ್ ಅವರನ್ನು ಪರಿಚಯಿಸಲಾಗಿದೆ. ಚೆಸ್ ಆಟ, ಕಾಯಿನ್ ಫ್ಲಿಪ್ಪಿಂಗ್, ಕರೆನ್ಸಿ ನೋಟುಗಳು ಮತ್ತು ಫ್ಲೈಓವರ್​​ನಿಂದ ಕಾರ್ ಇಳಿಯುವ ದೃಶ್ಯಗಳು ಆಕರ್ಷಕವಾಗಿವೆ. ಬಹಳ ಕ್ರಿಯೇಟಿವ್​ ಆಗಿ ಮೋಷನ್ ಪೋಸ್ಟರ್ ಅನ್ನು ಚಿತ್ರೀಕರಿಸಲಾಗಿದೆ. ಜೀಬ್ರಾ ಸಿನಿಮಾಗೆ ಈಶ್ವರ್ ಕಾರ್ತಿಕ್ ಆ್ಯಕ್ಷನ್​​ ಕಟ್​​ ಹೇಳಿದ್ದಾರೆ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರೋ ಚಿತ್ರ. 

ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಎಸ್‌ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡಿದ್ದಾರೆ. ಕೆಜಿಎಫ್ ಮತ್ತು ಸಲಾರ್ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ. ಎಸ್ ಶ್ರೀಲಕ್ಷ್ಮಿ ರೆಡ್ಡಿ ಸಹ ಚಿತ್ರದ ನಿರ್ಮಾಪಕಿ. ಅನಿಲ್ ಕ್ರಿಶ್ ಸಂಕಲನ, ಮೀರಾಖ್ ಸಂಭಾಷಣೆ ಸಿನಿಮಾಗಿದೆ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರುವ ಈ ಸಿನಿಮಾವನ್ನು ಎಸ್‌ ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಿಸಿದ್ದಾರೆ. ರವಿ ಬಸ್ರೂರು ಸಂಗೀತ ಈ ಸಿನಿಮಾಕ್ಕಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

Tap to resize

Latest Videos

undefined

ಭಕ್ತಿಪ್ರದಾನ ಚಿತ್ರ ತಾರಕೇಶ್ವರ: ಹಿರಿಯ ನಟ ಗಣೇಶ್‌ರಾವ್ ಕೇಸರ್‌ಕರ್ ನಟನೆ, ನಿರ್ಮಾಣದ ಭಕ್ತಿ ಪ್ರಧಾನ ಚಿತ್ರ ‘ತಾರಕೇಶ್ವರ’ದ ಹಾಡುಗಳು ಬಿಡುಗಡೆಯಾಗಿವೆ. ಶಾಸಕ ಡಾ. ಸಿ ಎನ್ ಅಶ್ವಥ್ ನಾರಾಯಣ್ ಆಡಿಯೋ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಓಂಕಾರ್‌ ಪುರುಷೋತ್ತಮ್‌, ‘ಗಂಗೆ ಗೌರಿ ಚಿತ್ರದಲ್ಲಿ ಗಣೇಶ್‌ ರಾವ್ ಶಿವನಾಗಿ ನಟಿಸುತ್ತಿರುವಾಗ, ತಾರಕೇಶ್ವರ ಸಿನಿಮಾದ ಒನ್‌ಲೈನ್ ಮನಸ್ಸಿಗೆ ಬಂತು. ಅದೇ ಇಂದು ಸಿನಿಮಾವಾಗಿದೆ. ಶಿವಪುರಾಣದ ಕಥೆಯಲ್ಲಿ ತಾರಕಾಸುರ ತಂದೆ ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ದೀರ್ಘ ತಪಸ್ಸು ಮಾಡಿ ಸಾವು ಬರಬಾರದೆಂದು ಬ್ರಹ್ಮನಿಂದ ವರ ಪಡೆದುಕೊಳ್ಳುತ್ತಾನೆ. 

ಲಂಗೋಟಿ ಮ್ಯಾನ್‌ ಚಿತ್ರ ವಿಮರ್ಶೆ: ಸರಳ ಕಥೆಯ ಹಿನ್ನೆಲೆಯಲ್ಲಿ ಸಂಕೀರ್ಣ ವಿಚಾರಗಳ ಹೊದಿಕೆ

ಅದೇ ಕಥೆಯನ್ನು ಸಿನಿಮಾಕ್ಕೆ ಅಳವಡಿಸಿಕೊಳ್ಳಲಾಗಿದೆ’ ಎಂದರು. ಗಣೇಶ್‌ರಾವ್ ಕೇಸರ್‌ಕರ್, ‘ಈವರೆಗೆ 333 ಸಿನಿಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದೇನೆ. ಈ ಸಿನಿಮಾದಲ್ಲಿ ಈಶ್ವರ ಹಾಗೂ ತಾರಕೇಶ್ವರನಾಗಿ ಕಾಣಿಸಿಕೊಂಡಿದ್ದೇನೆ’ ಎಂದರು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ಹಿರಿಯ ನಿರ್ದೇಶಕ ಸಾಯಿಪ್ರಕಾಶ್, ಟೆಲಿವಿಷನ್ ಸಂಘದ ಅಧ್ಯಕ್ಷ ರವಿ.ಆರ್.ಗರಣಿ, ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ‍್ಕೆ ವಿಶ್ವನಾಥ್‌ ಮೊದಲಾದವರಿದ್ದರು.

click me!