ತಂದೆಯೂ ಅವನೇ, ಗಂಡನೂ ಅವನೇ... ಮಗಳನ್ನೇ ಮದುವೆಯಾಗಲು ಇಲ್ಲಿಯ ಕಾನೂನು ಒಪ್ಪಿಗೆ ನೀಡಿದೆ. ಎರಡು ಷರತ್ತು ಒಪ್ಪಿಕೊಂಡ್ರೆ ಅಪ್ಪ-ಮಗಳ ಮದ್ವೆಯಾಗುತ್ತದೆ. ಇದೆಲ್ಲಿ ಗೊತ್ತಾ?
ಹಿಂದೊಮ್ಮೆ ಬಾಲಿವುಡ್ ನಟ ಸೈಫ್ ಅಲಿ ಖಾನ್, ತಮ್ಮ ಮೊದಲ ಮದುವೆಯ ಸಮಯದಲ್ಲಿ ಮಗಳೇ ಎಂದು ಕರೆದಿದ್ದ ಕರೀನಾ ಕಪೂರ್ ಅವರನ್ನೇ ಮದ್ವೆಯಾದಾಗ ಹಲ್ಚಲ್ ಸೃಷ್ಟಿಯಾಗಿತ್ತು. ಇಂದಿಗೂ ಈ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ. ಅಷ್ಟಕ್ಕೂ ಸೈಫ್ಗೂ ಕರೀನಾಗೂ ಯಾವುದೇ ಸಂಬಂಧ ಇರಲಿಲ್ಲ, ಇವರಿಬ್ಬರು ಚಿತ್ರ ತಾರೆಯರು ಆಗಿರೋದನ್ನು ಬಿಟ್ಟರೆ ಬೇರೆ ಸಂಬಂಧವಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿಯೇ ಈ ಪರಿಯಲ್ಲಿ ಇವರನ್ನು ಟ್ರೋಲ್ ಮಾಡಲಾಗಿತ್ತು. ಇನ್ನು ತಂದೆ-ಮಗಳೇ ಮದುವೆಯಾದರೆ...? ಭಾರತೀಯ ಮನಸ್ಥಿತಿ ಉಳ್ಳವರಿಗೆ ಇದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲದ ಮಾತು. ಸಂಬಂಧಗಳಿಗೆ ಇಂದು ಬೆಲೆಯೇ ಇಲ್ಲದಂತೆ ವರ್ತಿಸುವವರು ಕೂಡ ತಂದೆ-ಮಗಳ ಮದುವೆಯ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ. ಅಂಥ ಅಮೂಲ್ಯ ಸಂಬಂಧವಿದು. ಆದರೆ ಕೆಲ ದಿನಗಳ ಹಿಂದೆ ತಂದೆ-ಮಗಳ ಮದುವೆಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಇದು ತಂದೆ ಮತ್ತು ಮಗಳ ಲವ್ಸ್ಟೋರಿ. ಇಬ್ಬರೂ ಪ್ರೀತಿಸಿ ಮದುವೆಯಾಗುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ತನ್ನ ಅಪ್ಪನ ಮದುವೆಗೆ ವಿರೋಧ ವ್ಯಕ್ತಪಡಿಸಿರುವ ಮಗ ಯೂಟ್ಯೂಬರ್ ಒಬ್ಬರಿಗೆ ಕರೆ ಮಾಡಿ ಇದರ ವಿಡಿಯೋ ಮಾಡುವಂತೆ ಹೇಳಿರುವ ಕಾರಣ, ಇದೀಗ ಬಹಿರಂಗವಾಗಿದೆ. ಆದರೆ ವಿಚಿತ್ರ ಎಂದರೆ, ಮಗಳು ಕೂಡ ತುಂಬು ಮನಸ್ಸಿನಿಂದ ಅಪ್ಪನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾಳೆ! ತಾನು ಅಪ್ಪನನ್ನು ಪ್ರೀತಿಸುತ್ತಿರುವುದಾಗಿ ಅವಳು ಹೇಳಿದ್ದಾಳೆ. ಈ ವಿಡಿಯೋ ಆರಂಭವಾಗುವುದು, ಯೂಟ್ಯೂಬರ್ ನೀವೂ ಮುಸ್ಲಿಂ, ಈಕೆಯೂ ಮುಸ್ಲಿಂ ಅಲ್ವಾ ಎಂದು. ಅದಕ್ಕೆ ಇಬ್ಬರೂ ಹೌದು ಎಂದಿದ್ದಾರೆ. ಹಾಗಾದರೆ ಕುಂಕುಮ, ಸಿಂಧೂರ ಇಟ್ಟಿದ್ದು ಯಾಕೆ ಎಂದು ಯುಟ್ಯೂಬರ್ ಪ್ರಶ್ನಿಸಿದ್ದಾರೆ. ಆಗ ಸತ್ಯ ಹೊರ ಬಂದಿದೆ. ಅದೇನೆಂದರೆ, ಯುವತಿಯ ಅಮ್ಮ ಹಿಂದೂ ಆಗಿದ್ದರು ಎನ್ನುವುದು. ಹಿಂದೂ ರೀತಿಯಲ್ಲಿ ಮದ್ವೆಯಾಗುವುದು ಅವಳಿಗೆ ಇಷ್ಟವಿತ್ತು. ಅದಕ್ಕಾಗಿಯೇ ಕುಂಕುಮ, ಸಿಂಧೂರ ಇಟ್ಟಿದ್ದಾಳೆ ಎಂದಿದ್ದಾರೆ ಈ ಅಪ್ಪ.
ಮಗಳನ್ನೇ ಮದ್ವೆಯಾದ ಅಪ್ಪ! ಕುಂಕುಮ-ಸಿಂಧೂರ ಇಟ್ಟದ್ಯಾಕೆ ಎಂದು ಅವ್ರ ಬಾಯಲ್ಲೇ ಕೇಳಿ...
ಆದರೆ ಒಂದು ವಿಚಿತ್ರ ಗೊತ್ತಾ? ಇರಾನ್ನ ಕಾನೂನಿನಲ್ಲಿ ಮತ್ತು ಬಾಂಗ್ಲಾದೇಶದ ಮಂಡಿ ಬುಡಕಟ್ಟು ಜನಾಂಗದಲ್ಲಿ ಅಪ್ಪ- ಮಗಳು ಮದುವೆಯಾಗಲು ಕಾನೂನಿನ ಮಾನ್ಯತೆ ಇದೆ. ಎರಡು ಷರತ್ತುಗಳಿಗೆ ಒಪ್ಪಿಕೊಂಡರೆ, ಸರ್ಕಾರವೂ ಈ ಮದುವೆಗೆ ಗ್ರೀನ್ ಸಿಗ್ನಲ್ ಕೊಡುತ್ತದೆ. ಹೌದು! ವಿಚಿತ್ರ ಹಾಗೂ ಅಸಹ್ಯ ಎಂದು ಉಳಿದವರಿಗೆ ಅನ್ನಿಸಿದರೂ ಇದು ಸತ್ಯ. ಈ ಷರತ್ತುಗಳಲ್ಲಿ ಒಂದು ಭಯಾನಕವಾಗಿದ್ದರೆ, ಇನ್ನೊಂದು ಅಷ್ಟಾದರೂ ಮಾನ ಉಳಿಸಿಕೊಂಡಿದ್ದಾರಲ್ಲಾ ಎನ್ನುವಂತಿದೆ. ಅದೇನೆಂದರೆ, ಬಾಲಕಿಗೆ ಅಂದರೆ ಮಗಳಿಗೆ 13 ವರ್ಷ ವಯಸ್ಸಾಗಿರಬೇಕು. ಅವಳಿಗೆ 13 ವರ್ಷಕ್ಕಿಂತ ಕಡಿಮೆ ಆಗಿದ್ದರೆ ಈ ಅಪ್ಪ ಎನಿಸಿಕೊಂಡವ ಗಂಡ ಆಗುವಂತಿಲ್ಲ. 13 ವರ್ಷ ಆಗಿದ್ದರೆ ಮದುವೆಯಾಗಬಹುದು! ಇನ್ನೊಂದು ಷರತ್ತು ಏನೆಂದರೆ, ಸ್ವಂತ ಮಗಳನ್ನು ಮದುವೆಯಾಗುವಂತಿಲ್ಲ. ಅಷ್ಟರ ಮಟ್ಟಿಗೆ ಮನುಷ್ಯತ್ವ ಇದೆಯಲ್ಲಾ ಎಂದು ಇದನ್ನು ಕೇಳಿದವರು ಎಂದುಕೊಳ್ಳಬಹುದು.
ಹಾಗಿದ್ದರೆ ಯಾರನ್ನು ಮದುವೆಯಾಗಬಹುದು ಎಂದರೆ, 13 ವರ್ಷ ಮೀರಿದ ಹೆಣ್ಣಾಗಿರಬೇಕು, ಜೊತೆಗೆ ಆ ಬಾಲಕಿ-ಯುವತಿಯ ತಂದೆ ಬೇರೆಯವರಾಗಿರಬೇಕು. ಅಂದರೆ ಈ ಮದುವೆಯಾಗುವ, ಅಪ್ಪ ಎನಿಸಿಕೊಂಡು ಈಗ ಗಂಡ ಆಗಲು ರೆಡಿಯಾಗಿರುವಾತನಿಗೆ ಆಕೆ ಮಲ ಮಗಳಾಗಿರಬೇಕು. ಮಗಳು ಎಂದಿಗೂ ಮಗಳೇ. ಒಬ್ಬ ಹೆಣ್ಣನ್ನು ಮದುವೆಯಾದ ಮೇಲೆ ಆಕೆಯ ಮಕ್ಕಳೂ ಈತನಿಗೆ ಮಕ್ಕಳು ಇದ್ದಂತೆಯೇ ಎಂದು ನಾವು ಎಂದುಕೊಂಡರೂ, ಇಲ್ಲಿ ಗಂಡಸರಿಗೆ ಸ್ವಂತ ಹೆಣ್ಣು ಮಕ್ಕಳು ಬಿಟ್ಟು ಉಳಿದವರೆಲ್ಲರೂ ಭೋಗದ ವಸ್ತುಗಳು. ಆದ್ದರಿಂದ ಪತ್ನಿಗೆ ಮೊದಲ ಗಂಡನಿಂದ ಹುಟ್ಟಿದ ಮಗಳನ್ನು ಇವರು ಮದುವೆಯಾಗಬಹುದಾಗಿದೆ! ಇರಾನ್ನಲ್ಲಿ ಈ ಕಾನೂನು 2013ರಿಂದ ಜಾರಿಯಲ್ಲಿದ್ದರೆ, ಮಂಡಿ ಬುಡಕಟ್ಟುವಿನಲ್ಲಿ ಈ ಸಂಪ್ರದಾಯ ಹಿಂದಿನಿಂದಲೂ ಇದೆ. ಇವರದ್ದು ಹೇಗೆಂದರೆ ಯಾವುದೇ ಮಹಿಳೆಯ ಗಂಡ ಸತ್ತರೆ ಆಕೆಯನ್ನು ಹೋಗಿ ಮದುವೆಯಾಗುತ್ತಾರೆ. ಆಕೆಗೆ ಮಗಳು ಇದ್ದರೆ, ಅವಳನ್ನೂ ಮದುವೆಯಾಗಿ ಮಗಳಿಗೂ ಗಂಡನಾಗುತ್ತಾರೆ!
30 ವರ್ಷವಾದ್ರೂ ಮದ್ವೆಯಾಗದಿದ್ರೆ ಮಾಸಿಕ ಒಂದೂವರೆ ಲಕ್ಷ ರೂ. ಹಣ: ಪ್ರತ್ಯೇಕ ಮೆಟ್ರೊ, ಕ್ಲಬ್, ಬೀಚ್!