ಆಕ್ಸಿಜನ್ ಪೈಪ್ ಕನೆಕ್ಟ್ ಆಗಿದೆ, ಲಿಕ್ವಿಡ್ಡೇ ಬರ್ತಿಲ್ಲ; ವಿಕ್ಟೋರಿಯಾ ದುಸ್ಥಿತಿ ಇದು!

Apr 20, 2021, 5:00 PM IST

ಬೆಂಗಳೂರು (ಏ. 20): ರಾಜಧಾನಿ ICU ಬೆಡ್‌ ಸಿಗದೇ ಸಾಯೋರು ಒಂದು ಕಡೆ, ಸರಿಯಾಗಿ ಚಿಕಿತ್ಸೆ ಸಿಗದೆ ಗೋಳಾಡೋರು ಇನ್ನೊಂದು ಕಡೆ, ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದೆ.

2 ನೇ ಅಲೆ ರಾಕ್ಷಸೀ ರೂಪಕ್ಕೆ ಆ ಕಾರಣಗಳಾದ್ರೂ ಏನ್ ಗೊತ್ತಾ

ವಿಕ್ಟೋರಿಯಾ ಆಸ್ಪತ್ರೆ ಬರೀ ಅವ್ಯವಸ್ಥೆಯ ಆಗರವಾಗಿದೆ. ರೋಗಿಗಳು  ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆಕ್ಸಿಜನ್ ಪೈಪ್ ಕನೆಕ್ಟ್ ಆಗಿದೆ, ಲಿಕ್ವಿಡ್ ಬರ್ತಿಲ್ಲ, ಬೆಡ್‌ ಸಿಕ್ಕರೂ ವೆಂಟಿಲೇಟರ್ ಸಿಗುತ್ತಿಲ್ಲ, ಒಂದಿದ್ದರೆ, ಒಂದಿಲ್ಲ ಎನ್ನುವ ಸ್ಥಿತಿ. ರೋಗಿಗಳ ಮಾತು ಕೇಳಿದ್ರೆ ಮನಸ್ಸು ಭಾರವಾಗುವುದು ನಿಶ್ಚಿತ