ಪ್ರಜ್ವಲ್‌ಗೆ ರಾಕ್ಷಸ ಎನ್ನಬೇಕು. ನೂರಾರು ಮಹಿಳೆಯರನ್ನ ರೇಪ್ ಮಾಡಿದ್ದಾನೆ. 3000 ಕ್ಕೂ ಹೆಚ್ಚು ವಿಡಿಯೋಗಳು ಇವೆ. ಇದು ಸೆಕ್ಸ್ ಸ್ಕ್ಯಾಂಡಲ್ ಅಲ್ಲ, ಸಾಮೂಹಿಕ ಬಲಾತ್ಕಾರ ಮಾಡಿದ್ದಾನೆ. ಮಹಿಳೆಯರು ಏನು ತಪ್ಪು ಮಾಡಿದ್ದಾರೆ. ಮನೆಯಲ್ಲಿ ಕೆಲಸ ಮಾಡುವರು, ಪಕ್ಷದ ಮಹಿಳಾ ಕಾರ್ಯಕರ್ತರು, ಜಿಲ್ಲಾ ಪಂಚಾಯತ ಸದಸ್ಯ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮೋದಿ ಅವರು ಇಂತವರ ಪರವಾಗಿ ಪ್ರಚಾರ ಮಾಡಿದ್ದಾರೆ. ಎಲ್ಲವೂ ಗೊತ್ತಿದ್ದರು ಪ್ರಜ್ವಲ್ ಪರವಾಗಿ ಪ್ರಚಾರ ಮಾಡಿದ್ದಾರೆ ಎಂದು ಕಿಡಿ ಕಾರಿದ ಎಐಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷೆ ಸುಪ್ರಿಯಾ ಶ್ರಿನೆಟ್
ಹುಬ್ಬಳ್ಳಿ(ಏ.30): ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಮಾಡಿದ್ದು ತಪ್ಪು, ಇಂತಹ ಸಾರ್ವಜನಿಕ ಸಮಾಜದಲ್ಲಿ ನಡೆದಿರುವ ಈ ಘಟನೆ ಖಂಡನೀಯ. ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರ ಮೊಮ್ಮಗ ಮಹಿಳೆಯರ ಜೊತೆ ಈ ರೀತಿ ನಡೆದುಕೊಂಡಿದ್ದು ನಿಜಕ್ಕೂ ಖಂಡನೀಯ. ಪ್ರಜ್ವಲ್ ರೇವಣ್ಣ ಸದ್ಯ ದೇಶ ಬಿಟ್ಟು ಓಡಿ ಹೋಗಿದ್ದಾನೆ. ಪ್ರಧಾನಿ ಮೋದಿ ಅವರು ಮೈತ್ರಿ ಅಭ್ಯರ್ಥಿಯಾಗಿ ಇಂತವರನ್ನ ಚುನಾವಣೆಗೆ ಸ್ಪರ್ಧೆ ಮಾಡಿಸಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಎಐಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷೆ ಸುಪ್ರಿಯಾ ಶ್ರಿನೆಟ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಪ್ರಿಯಾ ಶ್ರಿನೆಟ್ ಅವರು, ಪ್ರಜ್ವಲ್‌ಗೆ ರಾಕ್ಷಸ ಎನ್ನಬೇಕು. ನೂರಾರು ಮಹಿಳೆಯರನ್ನ ರೇಪ್ ಮಾಡಿದ್ದಾನೆ. 3000 ಕ್ಕೂ ಹೆಚ್ಚು ವಿಡಿಯೋಗಳು ಇವೆ. ಇದು ಸೆಕ್ಸ್ ಸ್ಕ್ಯಾಂಡಲ್ ಅಲ್ಲ, ಸಾಮೂಹಿಕ ಬಲಾತ್ಕಾರ ಮಾಡಿದ್ದಾನೆ. ಮಹಿಳೆಯರು ಏನು ತಪ್ಪು ಮಾಡಿದ್ದಾರೆ. ಮನೆಯಲ್ಲಿ ಕೆಲಸ ಮಾಡುವರು, ಪಕ್ಷದ ಮಹಿಳಾ ಕಾರ್ಯಕರ್ತರು, ಜಿಲ್ಲಾ ಪಂಚಾಯತ ಸದಸ್ಯ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮೋದಿ ಅವರು ಇಂತವರ ಪರವಾಗಿ ಪ್ರಚಾರ ಮಾಡಿದ್ದಾರೆ. ಎಲ್ಲವೂ ಗೊತ್ತಿದ್ದರು ಪ್ರಜ್ವಲ್ ಪರವಾಗಿ ಪ್ರಚಾರ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಇಂತವರ ಪರ ಪ್ರಚಾರ ಮಾಡಿದ ಮೋದಿ ಮೌನಿ ಯಾಕೆ?, ಗುಂಡೂರಾವ್
ಪ್ರಜ್ವಲ್ ರೇವಣ್ಣರ ಬಗ್ಗೆ ಡಿಸೆಂಬರ್‌ನಲ್ಲಿ ವಿಜಯೇಂದ್ರ ಅವರಿಗೆ ಬಿಜೆಪಿ ಮುಖಂಡರೊಬ್ಬರು ಪತ್ರ ಬರೆದಿದ್ದರು ಇಷ್ಟಾದ್ರೂ ಇವನಿಗೆ ಮೈತ್ರಿ ಅಭ್ಯರ್ಥಿ ಮಾಡಿದ್ದರು. ಫೆಬ್ರುವರಿ, ಮಾರ್ಚ್‌ನಲ್ಲಿ ಅಮಿತ್ ಶಾ ಮೈಸೂರಿನಲ್ಲಿ ಪ್ರಚಾರ ಮಾಡಿದ್ದಾರೆ. ಪ್ರಜ್ವಲ್‌ನ ರಾಸಲೀಲೆಯ ಬಗ್ಗೆ ಎಲ್ಲವೂ ಮೊದಲೇ ಬಿಜೆಪಿಗೆ ಗೊತ್ತಿದೆ. ಮೋದಿ ಅವರು ಇದಕ್ಕೆ ಉತ್ತರ ಕೊಡಬೇಕು. ಇಂತಹ ರಾಕ್ಷಸರ ಜೊತೆ ಯಾಕೆ ಮೋದಿ ಅವರು ಪ್ರಜ್ವಲ್ ಜೊತೆ ವೇದಿಕೆ ಶೇರ್ ಮಾಡಿದ್ರು. ಯಾಕೆ ಸುಮ್ಮನಿದ್ದಾರೆ ಮೋದಿ..?, ಸ್ಮೃತಿ ಇರಾಣಿ ಎಲ್ಲಿದ್ದಾರೆ ಎಂದು ಸುಪ್ರಿಯಾ ಶ್ರಿನೆಟ್ ಪ್ರಶ್ನೆ ಮಾಡಿದ್ದಾರೆ.
ಎಸ್‌ಐಟಿಗೆ ಪ್ರಕರಣ ವಹಿಸುತ್ತಿದ್ದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿ ಹೋಗಿದ್ದಾರೆ. ಬಿಜೆಪಿ ಪಕ್ಷ ಇಂತವರಿಗೆ ಸಂರಕ್ಷಣೆ ಮಾಡುತ್ತಾರೆ. ಬಿಜೆಪಿ ಪಕ್ಷ ಇಂತಹ ಆರೋಪಿಗಳಿಗೆ ಸಾಥ್ ಕೊಡ್ತಾ ಇದೆ. ಮಹಿಳೆಯರ ಅನ್ಯಾಯ ಆದ್ರೆ ಮೋದಿ ಸರ್ಕಾರ ನ್ಯಾಯ ನೀಡುತ್ತಿಲ್ಲ. ಪ್ರಜ್ವಲ್‌ಗೆ ಸರಿಯಾದ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿಯವರಿಗೆ ನೈತಿಕತೆ ಇಲ್ಲ
ಬಿಜೆಪಿಯವರಿಗೆ ಯಾವ ನೈತಿಕತೆಯೂ ಇಲ್ಲ. ಭಾರತದಲ್ಲಿ ಮಳೆಯರು ಎಷ್ಟು ಸುರಕ್ಷಿತ ಇದ್ದಾರೆ ನೀವೆ ನೋಡಿ... ಮೋದಿ ಮತ್ತು ಗೃಹ ಸಚಿವರು ದೇಶದ ಜನತೆಯ ಮುಂದೆ ಕ್ಷಮೆ ಕೇಳಬೇಕು. ಗೃಹ ಸಚಿವರು ಪರ್ಸನಲ್ ಮ್ಯಾಟರ್ ಎಂದ್ರು ಪರ್ಸನಲ್ ಮ್ಯಾಟರ್ ಎಂದವರಿಗೆ ನಾಚಿಕೆಯಾಗಬೇಕು. ನಾನು ಒಬ್ಬ ಮಹಿಳೆಯಾಗಿ ಹೇಳುತ್ತೇನೆ. ಇಂತಹ ಘಟನೆಗೆ ಸಾಥ್ ಕೊಟ್ಟಿರುವ ಅಮಿತ್ ಶಾಗೆ ನಾಚಿಕೆಯಾಗಬೇಕು. ಎಚ್.ಡಿ. ರೇವಣ್ಣ ನಾಲ್ಕು ವರ್ಷದ ವಿಡಿಯೋಸ್ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಇದನ್ನ ಹೇಗೆ ಫೇಕ್ ವಿಡಿಯೋಸ್ ಎನ್ನಬೇಕು ಹೇಳಿ ನೋಡೋಣ. ಇಂತಹ ದರಿದ್ರ ಸಂಸದರ ಜೊತೆ ಹೇಗೆ ಪ್ರಧಾನಿ ಮೋದಿ ಅವರು ನಿಂತಿದ್ದಾರೆ. ಬಿಜೆಪಿ ನಾಯಕರುಗಳಿಗೆ ನಾಚಿಕೆಯಾಗಬೇಕು. ಕಾಂಗ್ರೆಸ್ ಸರಕಾರ ಯಾವಾಗಲೂ ಮಹಿಳೆಯರ ಪರವಾಗಿ ನಿಂತಿದೆ. ಕಾಂಗ್ರೆಸ್‌ನಲ್ಲಿ ಮಹಿಳೆಯರು ಸಶಕ್ತ ಮಹಿಳೆಯರಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.