ಇಲ್ಲೊಬ್ಬ ಪತ್ನಿ ತಾಯಿ ಅಂದರೆ ಅತ್ತೆ ಜೊತೆಗೆ ರಹಸ್ಯವಾಗಿ ಸಂಬಂಧ ಇಟ್ಟುಕೊಂಡಿದ್ದ. ಆದರೆ ಚಪಲ ಚೆನ್ನಿಗರಾಯನ ಮಂಚದಾಟ ಅತೀಯಾಗುತ್ತಿದ್ದಂತೆ ಗುಟ್ಟು ರಟ್ಟಾಗಿದೆ. ಗ್ರಾಮಸ್ಥರು ಅತ್ತೆ ಜೊತೆಗೆ ಈತನಿಗೆ ಮದುವೆ ಮಾಡಿಸಿದ ವಿಡಿಯೋ ವೈರಲ್ ಆಗಿದೆ.
ಪಾಟ್ನಾ(ಏ.30) ಮದುವೆ ಬಳಿಕ ರಹಸ್ಯ ಸಂಬಂದ ಇಟ್ಟುಕೊಳ್ಳುವುದು, ಪತ್ನಿಗೆ ಡಿವೋರ್ಸ್, ಮತ್ತೊಬ್ಬಳ ಜೊತೆ ಸಂಸಾರದ ಘಟನೆಗಳು ಮೇಲಿಂದ ಮೇಲೆ ಕೇಳಿಬರುತ್ತಿದೆ. ಈ ಪೈಕಿ ಪತ್ನಿಯ ತಾಯಿ ಜೊತೆಗೆ ಸಂಬಂಧ ಇಟ್ಟುಕೊಂಡ ವಿರಳ ಪ್ರಕರಣಗಳು ನಡೆದಿದೆ. ಇದೀಗ ಇಂತದ್ದೆ ಪ್ರಕರಣವೊಂದು ನಡೆದಿದೆ. ಆದರೆ ಈ ಪ್ರಕರಣ ಮದುವೆಯಲ್ಲಿ ಸುಖಾಂತ್ಯ ಕಂಡಿದೆ. ಪತ್ನಿಯ ತಾಯಿ ಜೊತೆಗೆ ರಹಸ್ಯ ಸಂಬಂಧ ಇಟ್ಟುಕೊಂಡಿದ್ದ ಈತನ ಲವ್ವಿ ಡವ್ವಿ ರಟ್ಟಾಗಿದೆ. ಕುಟಂಬಸ್ಥರು ಹಾಗೂ ಗ್ರಾಮಸ್ಥರು ಕೊನೆಗೆ ಅತ್ತೆಯೊಂದಿಗೆ ಈತನ ಮದುವೆ ಮಾಡಿಸಿದ ಘಟನೆ ಬಿಹಾರದ ಮೊಟಿ ಗ್ರಾಮದಲ್ಲಿ ನಡೆದಿದೆ.
45 ವರ್ಷದ ಸಿಕಂದರ್ ಯಾದವ್ ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. ಆದರೆ ಪತ್ನಿ ಅನಾರೋಗ್ಯದಿಂದ ನಿಧನಳಾದ ಬಳಿಕ ತಿಂಗಳ ಹಿಂದೆ ಅತ್ತೆ ಮನೆಗೆ ಸ್ಥಳಾಂತರಗೊಂಡಿದ್ದ. ಅತ್ತೆ ಗೀತಾ ದೇವಿ ಹಾಗೂ ಮಾವ ದೀಲೇಶ್ವರ್ ಧಾರ್ವೆ ಮನೆಗೆ ತನ್ನ ಮಕ್ಕಳನ್ನು ಕರೆದುಕೊಂಡು ಹೋಗಿದ್ದ. ಬಳಿಕ ಅತ್ತೆ ಮನೆಯಲ್ಲೇ ಉಳಿದುಕೊಂಡಿದ್ದ.
ಕೆಲಸ ಕೊಟ್ಟ ಬಾಸ್‌ನ ಹೆಂಡ್ತಿ ಜೊತೆ ಉದ್ಯೋಗಿಯ ಅಕ್ರಮ ಸಂಬಂಧ, ವಿಷ್ಯ ಗೊತ್ತಾದ ಮೇಲೆ ಮನೆಗೆ ಕರೆಸಿದ..!
ಸಿಕಂದರ್ ಯಾದವ್ ಅತ್ತೆ ಮನೆಯಿಂದಲೇ ಕೂಲಿ ಕೆಲಸಕ್ಕೆ ತೆರಳುತ್ತಿದ್ದ. ತಾಯಿ ಇಲ್ಲದ ಮಕ್ಕಳು ಅಜ್ಜಿ-ಅಜ್ಜನ ಆರೈಕೆಯಲ್ಲಿ ಸುರಕ್ಷಿತವಾಗಿತ್ತು. ಆದರೆ ದಿನಗಳು ಉರುಳುತ್ತಿದ್ದಂತೆ ಸಿಕಂದರ್ ಯಾದವ್ ಹಾಗೂ ಅತ್ತೆ ಗೀತಾ ದೇವಿ ರಹಸ್ಯ ಸಂಬಂಧ ಬೆಳೆದು ಬೆಟ್ಟಿದೆ. ಇವರಿಬ್ಬರ ಸಂಬಂಧ ಗಾಢವಾಗುತ್ತಿದ್ದಂತೆ ಗೀತಾ ದೇವಿ ಪತಿ ದೀಲೇಶ್ವರ್ ಧಾರ್ವೆಗೆ ಮಾಹಿತಿ ಸಿಕ್ಕಿದೆ.
बिहार, में सास-दामाद ने गांव वालों के सामने रचाई शादी, दामाद और सास का कई सालों से चल रहा था अफेयर, अब यही देखना रह गया था pic.twitter.com/YGKl7P8pQj
— Priya halchal (@HalchalPriya)
ರೆಡ್ ಹ್ಯಾಂಡ್ ಆಗಿ ಧಿಲೇಶ್ವರ್ ಧಾರ್ವೆ ಕೈಗೆ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಮನೆಯಲ್ಲಿ ಜೋರು ಜಟಾಪಟಿಯೇ ನಡೆದು ಹೋಗಿದೆ. ಇತ್ತ ಸಿಕಂದರ್ ಯಾದವ್ ಹಾಗೂ ಗೀತಾ ದೇವಿ ಒಬ್ಬರಿಗೊಬ್ಬರು ಬಿಟ್ಟಿರಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಇತ್ತ ದಿಕ್ಕ ತೋಚದ ಗೀತಾ ದೇವಿ ಪತಿ ಧೀಲೇಶ್ವರ್ ಗ್ರಾಮದ ಹಿರಿಯರಿಗೆ ತಿಳಿಸಿ ಪಂಚಾಯಿತಿಗೆ ಸೂಚಿಸಿದ್ದಾರೆ.
ಅನೈತಿಕ ಸಂಬಂಧ ರಟ್ಟಾಗುತ್ತಿದ್ದಂತೆ ವಿದ್ಯುತ್ ಕಂಬ ಹತ್ತಿದ ಪತ್ನಿ, ಹೈಡ್ರಾಮಕ್ಕೆ ಗ್ರಾಮಸ್ಥರು ಸುಸ್ತು!
ಪಂಚಾಯಿತಿಯಲ್ಲಿ ಸಿಕಂದರ್ ಯಾದವ್ ಹಾಗೂ ಗೀತಾ ದೇವಿಗೆ ಮದುವೆ ಮಾಡಿಸಲು ಮಾವ ಧಿಲೇಶ್ವರ್ ಧಾರ್ವೆ ಸೂಚಿಸಿದ್ದಾರೆ. ಹೀಗಾಗಿ ಪಂಚಾಯಿತಿ ಕಟ್ಟೆಯಲ್ಲೇ ಇವರಿಬ್ಬರ ಮದುವೆ ಕೂಡ ನಡೆದಿದೆ. ಸಿಕಂದರ್ ಯಾದವ್, ಅತ್ತೆ ಗೀತಾ ದೇವಿಗೆ ಹಣೆಗೆ ಸಿಂಧೂರ ಇಡುವ ಮೂಲಕ ಸರಳ ಹಾಗೂ ಸಾಂಪ್ರದಾಯಿಕವಾಗಿ ಪತ್ನಿಯಾಗಿ ಬರಮಾಡಿಕೊಂಡಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.