ಈ ಪದ ಬಳಕೆ ನಂತರ ನಿರೂಪಕಿ 'ಅಂದ್ರೆ ನಿಮ್ಮ ಓವರ್‌ಆಲ್ ಲೈಫ್, ನಿರ್ಗತಿಕ, ನಿರ್ದಿಗಂತ.. ಅಂತ ಮಾತನ್ನು ತೇಲಿಸಿ ಮುಂದಕ್ಕೆ ಹೋಗಿದ್ದಾರೆ. ಹಾಗಿದ್ದರೆ ಅಲ್ಲಿ ಆ 'ನಿರ್ಗತಿಕ' ಪದ ಉದ್ದೇಶಪೂರ್ವಕವೇ ಅಥವಾ ಪ್ರಶ್ನೆ ಕೇಳಿದವರಿಗೆ ನಿಜವಾಗಿಯೂ ಆ ಪದದ ಅರ್ಥ ಗೊತ್ತಿಲ್ಲವೇ ಎಂಬ ಬಗ್ಗೆ..
'ನಿರ್ಗತಿಕ ಲೈಫ್ ಅಂದ್ರೆ? ಅಂತ ಪದ ಯಾಕೆ ಯೂಸ್ ಮಾಡ್ತೀರಾ?' ನಟ ಪ್ರಕಾಶ್ ರಾಜ್ (Prakash Raj) ಅವರು ಕೋಪಗೊಂಡಿದ್ದರೂ ಒಂಥರಾ ಕೂಲ್ ಆಗಿ ತಮಗೆ ಪ್ರಶ್ನೆ ಕೇಳಿದ್ದ ಸಂದರ್ಶಕರನ್ನು ಮರುಪ್ರಶ್ನಿಸಿದ್ದಾರೆ. ಪ್ರಕಾಶ್ ರಾಜ್ ಸಂದರ್ಶನವೊಂದಕ್ಕೆ ಸಂಬಂಧಪಟ್ಟ ಈ 'ನಿರ್ಗತಿಕ' ಎಂಬ ಪದ ಈಗ ಸಾಕಷ್ಟು ವೈರಲ್ ಆಗಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ. 'ನಿರ್ದಿಗಂತ' ಎನ್ನಲು ತಪ್ಪಾಗಿ 'ನಿರ್ಗತಿಕ' ಎಂಬ ಪದವನ್ನು ಪರ್ತಕರ್ತರು ಉಪಯೋಗಿಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನೂ ಕೆಲವರು ಇಲ್ಲ, ಅದನ್ನು ಉದ್ಧೇಶಪೂರ್ವಕವಾಗಿಯೇ ಕೇಳಿದ್ದಾರೆ ಎನ್ನುತ್ತಿದ್ದಾರೆ.
ಹಾಗಿದ್ದರೆ ಈ 'ನಿರ್ಗತಿಕ (Nirgatika) ಪದಬಳಕೆಯ ಅಸಲಿಯತ್ತೇನು? ಈ ಬಗ್ಗೆ ಸತ್ಯ ಗೊತ್ತಿರುವುದು ಪ್ರಶ್ನೆ ಕೇಳಿದ್ದ ನಿರೂಪಕರಿಗೆ ಮಾತ್ರ ಎನ್ನಬಹುದು. ಏಕೆಂದರೆ, ನಟ ಪ್ರಕಾಶ್ ರಾಜ್ ಅವರಿಗೆ 'ನಿಮ್ಮ ನಿರ್ಗತಿಕ ಲೈಫ್ ಎಲ್ಲೀತನಕ ಬಂತು..? ಎಂದು ಅವರು ಪ್ರಶ್ನೆ ಕೇಳಿದ್ದಾರೆ. ಆಗ ಕೊಂಚ ಗಲಿಬಿಲಿ ಹಾಗೂ ಕೋಪಗೊಂಡಂತೆ ಕಂಡುಬರುವ ನಟ ಪ್ರಕಾಶ್ ರಾಜ್ ಅವರು 'ನಿರ್ಗತಿಕ ಲೈಫ್ ಅಂದ್ರೆ?, ಅಂತ ಪದ ಯಾಕೆ ಯೂಸ್ ಮಾಡ್ತೀರಾ' ಅಂತ ಮರುಪ್ರಶ್ನೆ ಮಾಡಿದ್ದಾರೆ. ಆದರೆ, ಮೊದಲು ಆ ಪದ ಉಪಯೋಗಿಸಿದ ಪತ್ರಕರ್ತರು ಆ ಬಗ್ಗೆ 'ಬೈ ಮಿಸ್ಟೇಕ್ ಹೇಳ್ಬಿಟ್ಟೆ' ಅಂತ ಏನೊಂದೂ ಸ್ಪಷ್ಟೀಕರಣ ಕೊಡದೇ ಮುಂದಿನ ಮಾತುಕತೆಗೆ ಹೋಗಿದ್ದಾರೆ.
'ಆ ಕರಾಳ ರಾತ್ರಿ'ಯ ಬಗ್ಗೆ ಮಾತನಾಡಿದ ಅನುಪಮಾ ಗೌಡ; ಅಲ್ಲಿಂದ ಮುಂದಕ್ಕೆ ಜೀವನ ಹೇಗೆ ನಡೀತಿದೆ?
ಈ ಪದ ಬಳಕೆ ನಂತರ ನಿರೂಪಕಿ 'ಅಂದ್ರೆ ನಿಮ್ಮ ಓವರ್‌ಆಲ್ ಲೈಫ್, ನಿರ್ಗತಿಕ, ನಿರ್ದಿಗಂತ.. ಅಂತ ಮಾತನ್ನು ತೇಲಿಸಿ ಮುಂದಕ್ಕೆ ಹೋಗಿದ್ದಾರೆ. ಹಾಗಿದ್ದರೆ ಅಲ್ಲಿ ಆ 'ನಿರ್ಗತಿಕ' ಪದ ಉದ್ದೇಶಪೂರ್ವಕವೇ ಅಥವಾ ಪ್ರಶ್ನೆ ಕೇಳಿದವರಿಗೆ ನಿಜವಾಗಿಯೂ ಆ ಪದದ ಅರ್ಥ ಗೊತ್ತಿಲ್ಲವೇ ಎಂಬ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಈಗ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಪ್ರಕಾಶ್ ರಾಜ್ ವಿರೋಧಿಗಳು ಈ ಪದವನ್ನು ಉಪಯೋಗಿಸಿ ಅವರನ್ನು ಟ್ರೋಲ್ ಮಾಡುತ್ತಿದ್ದರೆ, ಅವರ ಪರವಾಗಿರುವವರು ಪ್ರಶ್ನೆ ಕೇಳಿರುವ ಪತ್ರಕರ್ತೆಗೆ ಬಯ್ಯುತ್ತಿದ್ದಾರೆ. ಈ ಬಿಸಿಬಿಸಿ ಚರ್ಚೆ ಈಗ ಟ್ರೆಂಡ್ ಸೃಷ್ಟಿ ಮಾಡಿದೆ.
ವಿಜಯ್ ದೇವರಕೊಂಡ ಜತೆ ಸಿನಿಮಾಗೆ ಹೋಗ್ಬೇಕು ಅಂದ ರಶ್ಮಿಕಾ ಹೃತಿಕ್ ಜತೆ ಹಾಗಂದ್ಬಿಟ್ರಾ?
'ನಿರ್ಗತಿಕ' ಅಂದ್ರೆ ಗತಿಯಿಲ್ಲದವ, ಅನಾಥ, ಒಬ್ಬಂಟಿ ಎಂಬ ಅರ್ಥವಿದೆ. 'ನಿರ್ದಿಗಂತ' ಎಂದರೆ 'ಆಕಾಶವನ್ನೂ ಮೀರಿದ, ಅಂದರೆ ಎಲ್ಲ ಮೇರೆಗಳನ್ನೂ ದಾಟಿದ' ಎಂಬ ಅರ್ಥವಿದೆ. ಪ್ರಶ್ನೆ ಕೇಳಿದ ನಿರೂಪಕಿಗೆ ಶಬ್ದದ ಅರ್ಥ ಗೊತ್ತಿಲ್ಲ ಎಂದುಕೊಳ್ಳಬೇಕೆ? ಆದರೆ, ಮುಂದಿನ ಅವರ ಮಾತುಕತೆ ನೋಡಿದರೆ ಹಾಗೇನೂ ಅನ್ನಿಸುವುದಿಲ್ಲ.
ಅಂಬಿ ಕಡೆಯಿಂದ ವಿಷ್ಣು ರಾಜಕೀಯ ಪ್ರವೇಶಕ್ಕೆ ಪ್ಲಾನ್ ನಡೆದಿತ್ತು; ಯಾರ ವಿರುದ್ಧ ಗೊತ್ತಾ?
ಪ್ರಶ್ನೆ ಕೇಳಿದವರಿಗೆ ಗೊತ್ತಿಲ್ಲ ಅಂದುಕೊಂಡರೂ ಕೇಳಿಸಿಕೊಂಡ ನಟ ಪ್ರಕಾಶ್ ರಾಜ್ ಅವರಿಗೆ ಆ ಶಬ್ಧದ ಅರ್ಥ ಸ್ಪಷ್ಟವಾಗಿ ಗೊತ್ತಿದೆ. ಯಾಕೆಂದರೆ, ಅದರ ಅರ್ಥ 'ಗತಿಯಿಲ್ಲದವನು' ಅಂತ ಎಂದು ಅವರೇ ಸ್ವತಃ ಆ ಕೂಡಲೇ ಹೇಳಿದ್ದಾರೆ. ಒಟ್ಟಿನಲ್ಲಿ, ಈ 'ನಿರ್ಗತಿಕ' ಪದವೀಗ ಸೋಷಿಯಲ್ ಮೀಡಿಯಾ ಸೇರಿದಂತೆ ಜನರ ಬಾಯಲ್ಲಿ ಓಡಾಡುತ್ತ ಸುದ್ದಿಮಾಡುತ್ತಿದೆ.
ನಟಿ ಗೀತಾ ನೆನಪಿದ್ಯಲ್ಲ ನಿಮಗೆ? ಅಮೆರಿಕಾದಿಂದ ಬಂದು ಈಗ ಮತ್ತೆ ಸಿನಿಮಾದಲ್ಲಿ ನಟಿಸ್ತಿರೋದ್ಯಾಕೆ..?