ಜಿಮ್ಮೂ ಇಲ್ಲ, ಡಯೆಟೂ ಇಲ್ಲ, ಕ್ರೀಂ-ಶ್ಯಾಂಪೂ ಗೊತ್ತೇ ಇರ್ಲಿಲ್ಲ... ಆದ್ರೂ 59ನೇ ವಯಸ್ಸಲ್ಲೂ ಸ್ಮಾರ್ಟ್-ಫಿಟ್​ ಹೇಗೆ?

Published : Apr 30, 2024, 07:11 PM IST
ಜಿಮ್ಮೂ ಇಲ್ಲ, ಡಯೆಟೂ ಇಲ್ಲ, ಕ್ರೀಂ-ಶ್ಯಾಂಪೂ ಗೊತ್ತೇ ಇರ್ಲಿಲ್ಲ... ಆದ್ರೂ 59ನೇ ವಯಸ್ಸಲ್ಲೂ ಸ್ಮಾರ್ಟ್-ಫಿಟ್​ ಹೇಗೆ?

ಸಾರಾಂಶ

59ನೇ ವಯಸ್ಸಿನಲ್ಲಿಯೂ ನಟ ಆಮೀರ್​ ಖಾನ್​ ಸ್ಮಾರ್ಟ್​, ಫಿಟ್​  ಆಗಿರುವುದು ಹೇಗೆ? ನಟ ಕೊಟ್ಟ ಅಚ್ಚರಿಯ ಹೇಳಿಕೆ ಹೀಗಿದೆ...   

ಇತ್ತೀಚೆಗಷ್ಟೇ ನಟ ಆಮೀರ್​ ಖಾನ್​ 59ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.  ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೂ ಕರೆಯಲ್ಪಡುವ ಆಮೀರ್​ ಖಾನ್​,  ವರ್ಷಗಳ ಕಾಲ ವೃತ್ತಿಜೀವನದೊಂದಿಗೆ,  ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಬೇಡಿಕೆಯಿರುವ ನಟರಲ್ಲಿ ಒಬ್ಬರಾಗಿದ್ದಾರೆ.  ಈಚೆಗಷ್ಟೇ ಇವರು ದಿ ಗ್ರೇಟ್​ ಕಪಿಲ್​ ಶರ್ಮಾ ಷೋನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರು ಹಲವಾರು ವಿಷಯಗಳ ಕುರಿತು ಮಾತನಾಡಿದ್ದು, ಅವುಗಳ ಒಂದೊಂದೇ ವೈರಲ್​ ಆಗುತ್ತಿವೆ. ಅಷ್ಟಕ್ಕೂ ನಟ ಆಮೀರ್​ ಖಾನ್​ ಇಷ್ಟು ವಯಸ್ಸಾದರೂ ಫಿಟ್​, ಸ್ಮಾರ್ಟ್​ ಆ್ಯಂಡ್​ ಫೈನ್​ ಆಗಿದ್ದಾರೆ. ಇದರ ಗುಟ್ಟನ್ನು ಇದೀಗ ನಟ ಬಿಚ್ಚಿಟ್ಟಿದ್ದಾರೆ. ಸಾಮಾನ್ಯವಾಗಿ ನಟರು ಜಿಮ್​, ವರ್ಕ್​ಔಟ್​, ಮೇಕಪ್​ಗಾಗಿ ಸಾಕಷ್ಟು ಸಮಯವನ್ನು ಮೀಸಲು ಇಡುವುದು ಸಹಜ. ಆದರೆ ಇದ್ಯಾವುದನ್ನೂ ತಾವು ಮಾಡುವುದೇ ಇಲ್ಲ ಎನ್ನುವ ಸತ್ಯವನ್ನು ನಟ ಆಮೀರ್​ ಖಾನ್​ ಈ ಷೋದಲ್ಲಿ ಹೇಳಿದ್ದಾರೆ. ಇವರ ಈ ಮಾತು ಕೇಳಿ ಇವರ ಫ್ಯಾನ್ಸ್​ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ನಟ ಹೇಳಿದ್ದೇನೆಂದರೆ, ನಾನು  ಸಿನಿಮಾ ಇದ್ದಾಗ ಮಾತ್ರ ವರ್ಕೌಟ್ ಮಾಡುತ್ತೇನೆ.  ಉಳಿದ ಸಂದರ್ಭದಲ್ಲಿ ಇದರ ಉಸಾಬರಿಗೇ ಹೋಗುವುದಿಲ್ಲ ಎಂದಿದ್ದಾರೆ. ಕಪಿಲ್​ ಶರ್ಮಾ ಅವರು ಸೌಂದರ್ಯದ ಗುಟ್ಟಿನ ಬಗ್ಗೆ ಕೇಳಿದಾಗ ಆಮೀರ್​ ಈ ವಿಷಯ ತಿಳಿಸಿದ್ದಾರೆ.  ನಾನು ವರ್ಕೌಟ್ ಮಾಡಲ್ಲ. ಮುಖಕ್ಕೆ ಯಾವುದೇ ಕ್ರೀಮ್ ಹಾಕಲ್ಲ. ನಿಜವಾಗಿ ಹೇಳಬೇಕು ಎಂದರೆ ಶಾಂಪೂ, ಕ್ರೀಂ ಅಂದ್ರೇನೇ ಗೊತ್ತಿರಲಿಲ್ಲ. ನಟನಾದ ಮೇಲೆ ಇವುಗಳ ಪರಿಚಯವಾದದ್ದು ಎಂದಿರುವ ನಟ ತಮ್ಮ ಸೌಂದರ್ಯದ ಗುಟ್ಟಿನ ಬಗ್ಗೆ ಹೇಳುತ್ತಾ, ಅದರಲ್ಲೇನೂ ವಿಶೇಷವಿಲ್ಲ.  ಅಪ್ಪನ ಜೀನ್ಸ್​ ಚೆನ್ನಾಗಿತ್ತು. ನನಗೆ ಯಾವುದೇ ಕ್ರೆಡಿಟ್ ಬೇಡ. ಅಪ್ಪನಿಂದ ಪಡೆದ ಬಳುವಳಿ ಇದು ಎಂದಿದ್ದಾರೆ.

ಆಮೀರ್​ ಖಾನ್​@ 59: ಆರು ರೂ. ಶಾಲಾ ಫೀಸ್​ ಕಟ್ಟಲಾಗದೇ ಒದ್ದಾಡಿದ್ದ ನಟನ ರೋಚಕ ಸ್ಟೋರಿ ಇಲ್ಲಿದೆ..

 ಮುಖಕ್ಕೆ ಯಾವುದೇ ಕ್ರೀಮ್ ಹಾಕಲ್ಲ.  ನಟನಾದ ಮೇಲೆ ಶಾಂಪೂ ಹಾಕುತ್ತಿದ್ದೇನೇ ಹೊರತು ಅಲ್ಲಿಯವರೆಗೆ ತಲೆಗೆ  ಸೋಪ್ ಹಚ್ಚುತ್ತಿದ್ದೆ  ನಾನು ಸಖತ್ ಸೋಮಾರಿ ಎಂದು ಹೇಳಿದ್ದಾರೆ ನಟ.  ಇದೇ ವೇಳೆ ತ್ರೀ ಈಡಿಯಟ್ಸ್​ ಚಿತ್ರದ ಬಗ್ಗೆ ಮಾತನಾಡಿದ್ದು, ಆಗ ನನಗೆ  44 ವರ್ಷ ವಯಸ್ಸಾಗಿತ್ತು. ಆದರೆ ಸಿನಿಮಾದಲ್ಲಿ 18 ವರ್ಷದ ಕಾಲೇಜು ಹುಡುಗನ ಪಾತ್ರ ಮಾಡಬೇಕಿತ್ತು. ಜನರು ತಮ್ಮನ್ನು ನೋಡಿ ನಗಬಹುದು ಎಂದೇ ಅಂದುಕೊಂಡಿದ್ದೆ.   ಮೂವರು ಯಂಗ್ ಹೀರೋಗಳನ್ನು ತೆಗೆದುಕೊಳ್ಳುವಂತೆ ರಾಜ್​ಕುಮಾರ್ ಹಿರಾನಿಗೆ ಹೇಳಿದ್ದೆ. ಆದರೆ, ಕಥೆ ಕೇಳಿದ ಬಳಿಕ ಪಾತ್ರ ಮಾಡಬೇಕು ಎನಿಸಿತು. ಆದರೆ ಯಾರೂ ನನ್ನನ್ನು 44 ವರ್ಷದವ ಎಂದು ಅಂದುಕೊಳ್ಳದೇ ಇರುವುದು ಖುಷಿ ಕೊಟ್ಟಿತು ಎಂದಿದ್ದಾರೆ.  

ಈಚೆಗಷ್ಟೇ ನಟ ಬಾಲ್ಯದ ಬಡತನದ ದಿನಗಳ ಕುರಿತು ಮಾತನಾಡಿದ್ದರು. 6 ನೇ ತರಗತಿಯಲ್ಲಿ 6 ರೂ, 7 ನೇ ತರಗತಿಯಲ್ಲಿ 7 ರೂ ಮತ್ತು 8 ನೇ ತರಗತಿಯಲ್ಲಿ 8 ರೂಪಾಯಿ ಕಟ್ಟುವ ಅನಿವಾರ್ಯತೆ ಉಂಟಾದಾಗ ತಮ್ಮ ಕುಟುಂಬ ಪಟ್ಟ ಪರಿಪಾಟಲಿನ ಬಗ್ಗೆ ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ, ಆಮೀರ್​ ಖಾನ್​ ತಿಳಿಸಿದ್ದಾರೆ. ಸುಮಾರು ಎಂಟು ವರ್ಷ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಬಂದಿತ್ತು. ಸಾಲದ ಸುಳಿಯಲ್ಲಿ ಕುಟುಂಬ ಸಿಲುಕಿತ್ತು. ಇನ್ನು ಶಾಲೆಯ ಶುಲ್ಕ ಕಟ್ಟುವುದು ದೂರದ ಮಾತೇ ಆಗಿತ್ತು ಎಂದಿದ್ದಾರೆ. ತಾವು ಮತ್ತು ಅಣ್ಣ ತಮ್ಮಂದಿರು ಶಾಲೆಯ ಶುಲ್ಕವನ್ನು ಯಾವಾಗಲೂ ತಡವಾಗಿ ಜಮಾ ಮಾಡುತ್ತಿದ್ದೆವು.  ಅಂತಹ ಪರಿಸ್ಥಿತಿಯಲ್ಲಿ ಪ್ರಾಂಶುಪಾಲರು ಎಲ್ಲಾ ಶಾಲಾ ಮಕ್ಕಳ ಮುಂದೆ ಅಸೆಂಬ್ಲಿಯಲ್ಲಿ ನಮ್ಮ ಹೆಸರನ್ನು ಘೋಷಿಸುತ್ತಿದ್ದರು. ತುಂಬಾ ನಾಚಿಕೆ ಹಾಗೂ ಸಂಕಟವಾಗುತ್ತಿತ್ತು ಎಂದಿದ್ದರು.

ಕುಟುಂಬಕ್ಕಾಗಿ ಸಿನಿಮಾ ತೊರೆಯುವ ನಿರ್ಧರಿಸಿದ್ದ ಆಮೀರ್ ಖಾನ್​ ಇಬ್ಬರೂ ಪತ್ನಿಯರಿಂದ ದೂರವಾಗಿದ್ದೇಕೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?