ಮೋದಿ ಸಿದ್ದರಾಮಯ್ಯನವರ ಮನೆತನದ ಮರ್ಯಾದೆ ಉಳಿಸಿದ್ದಾರೆ: ಎಚ್‌ಡಿಕೆ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ

By Girish Goudar  |  First Published Apr 30, 2024, 7:58 PM IST

ಪ್ರಧಾನಿ ಮೋದಿ ಸಿದ್ದರಾಮಯ್ಯನವರ ಮನೆತನದ ಮರ್ಯಾದೆ ಉಳಿಸಿದ್ದಾರೆಂಬ ಕುಮಾರಸ್ವಾಮಿ ಹೇಳ್ತಿರುವುದು ಎಲ್ಲವೂ ಸುಳ್ಳು. ನಾನು ಮೋದಿ ಜೊತೆಗೆ ಮಾತನಾಡಿಯೇ ಇಲ್ಲ ಅಂತ ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 


ಬೆಳಗಾವಿ(ಏ.30):  ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಕೇಸ್ ಎಸ್ಐಟಿಗೆ ನೀಡಿದ್ದೇವೆ, ಅದು ತಮ್ಮ ಪಾಡಿಗೆ ಕೆಲಸ ಮಾಡುತ್ತಿದೆ. ಎಸ್ಐಟಿ ಸಾಂವಿಧಾನಿಕವಾಗಿ ರೂಪಗೊಂಡ ಸಂಸ್ಥೆಯಾಗಿದೆ. ವೈಯಕ್ತಿಕವಾಗಿ ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಇಂದು(ಮಂಗಳವಾರ) ಬೆಳಗಾವಿ ಜಿಲ್ಲೆಯ ಗೋಕಾಕ್‌ ನಗರದ ಹಿಲ್‌ ಗಾರ್ಡನ್‌ನಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ಸಿದ್ದರಾಮಯ್ಯನವರ ಮನೆತನದ ಮರ್ಯಾದೆ ಉಳಿಸಿದ್ದಾರೆಂಬ ಕುಮಾರಸ್ವಾಮಿ ಹೇಳ್ತಿರುವುದು ಎಲ್ಲವೂ ಸುಳ್ಳು. ನಾನು ಮೋದಿ ಜೊತೆಗೆ ಮಾತನಾಡಿಯೇ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. 

Tap to resize

Latest Videos

ಪ್ರಧಾನಿ ಮೋದಿ ಹತಾಶರಾಗಿದ್ದಾರೆ, ಗೆಲ್ಲುವ ವಿಶ್ವಾಸ ಕಳೆದುಕೊಂಡಿದ್ದಾರೆ: ಸಿಎಂ ಸಿದ್ದರಾಮಯ್ಯ

ನನ್ನ ಮಗ ಸತ್ತಿರುವುದು ಹೊರ ದೇಶದಲ್ಲಿ. ಡೆಡ್ ಬಾಡಿ ತಂದಿದ್ದೇವೆ. ಕುಮಾರಸ್ವಾಮಿ ಆರೋಪ ಎಲ್ಲವೂ ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 

click me!