Jul 1, 2022, 3:40 PM IST
ವಿಜಯಪುರ (ಜು. 01): ಇಲ್ಲಿ 108 ಆಂಬುಲೆನ್ಸ್ (Ambulance) ರೋಗಗ್ರಸ್ಥವಾಗಿ ನಿಂತಿತ್ತು. ಅಪಘಾತವಾದರೆ ತಕ್ಷಣಕ್ಕೆ ಸಿಗದೇ ಪರದಾಡುವಂತಾಗಿದೆ. ಈ ಬಗ್ಗೆ ಬಿಗ್ 3 ವರದಿ ಪ್ರಸಾರದ ಬಳಿಕ, ಕ್ಯಾಮೆರಾ ಮುಂದೆ ಮಾತನಾಡಬೇಡಿ ಎಂದು ಜಿವಿಕೆ ಕಂಪನಿ ಸಿಬ್ಬಂದಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಕೆಲಸದಿಂದ ವಜಾ ಮಾಡುವ, ಸಂಬಳ ತಡೆ ಹಿಡಿಯುವ ಬೆದರಿಕೆ ಹಾಕುತ್ತಾರೆ. ಈ ಸಮಸ್ಯೆ ಡೀಸಿ ಗಮನಕ್ಕೆ ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜೊತೆಗೆ ನಾಗಠಾಣಾ ಶಾಸಕ ದೇವಾನಂದ ಚವ್ಹಾಣ ಕೂಡಾ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತನಾಡಿದರು.
ವಿಜಯಪುರ: ರಿಪೇರಿ ಆಗದೇ ನಿಂತಿವೆ ಆಂಬುಲೆನ್ಸ್‌ಗಳು, ಕಣ್ಮುಚ್ಚಿ ಕೂತಿದೆ ಆರೋಗ್ಯ ಇಲಾಖೆ!