ಇದಾದ ನಂತರ ‘ಯಾರಿಗುಂಟು ಯಾರಿಗಿಲ್ಲ’ ಎನ್ನುವ ರಿಯಾಲಿಟಿ ಶೋ ನಿರೂಪಣೆ ಆರಂಭಿಸಿದರು. ಆ ಮೂಲಕ ನಟನೆಯ ಜೊತೆಗೆ ನಿರೂಪಣೆಗೂ ಸೈ ಎನಿಸಿದರು. ನಂತರ ಶ್ವೇತಾ ನಟನೆಯಿಂದ ದೂರ ಉಳಿದು ನಿರೂಪಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕುಣಿಯೋಣ ಬಾರಾ, ಡ್ಯಾನ್ಸ್ ಜ್ಯೂನಿಯರ್ಸ್ ಡ್ಯಾನ್ಸ್, ಮಜಾಟಾಕೀಸ್, ಕನ್ನಡದ ಬಿಗ್ ಬಾಸ್ ಸೀಸನ್ 2, ನಮ್ಮಮ್ಮ ಸೂಪರ್ ಸ್ಟಾರ್, ಛೋಟಾ ಚಾಂಪಿಯನ್, ಕಾಮಿಡಿ ಕಿಲಾಡಿಗಳು ರೀಲೋಡೆಡ್ ಮೊದಲಾದ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ, ಸ್ಪರ್ಧಿಯಾಗಿ ಮಿಂಚಿದ್ದು, ಇಂದಿಗೂ ಕಿರುತೆರೆಯಲ್ಲಿ ಬಹು ಬೇಡಿಕೆಯ ನಿರೂಪಕಿಯಾಗಿದ್ದಾರೆ.