ನಟಿ ಕೀರ್ತಿ ಸುರೇಶ್ ತಮ್ಮ 15 ವರ್ಷಗಳ ಗೆಳೆಯ ಅಂಟೋನಿ ಥಟ್ಟಿಲ್ ಜೊತೆಗಿನ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಂಚಿಕೊಂಡ ಕೀರ್ತಿ, ಮುಂದಿನ ತಿಂಗಳು ಗೋವಾದಲ್ಲಿ ಮದುವೆ ನಡೆಯಲಿದೆ ಎಂಬ ವರದಿಗಳಿವೆ.
ಬೆಂಗಳೂರು (ನ.27): ಪ್ರಖ್ಯಾತ ನಟಿ ಕೀರ್ತಿ ಸುರೇಶ್ ಕೊನೆಗೂ ಆಂಟೋನಿ ಥಟ್ಟಿಲ್ ಜೊತೆಗಿನ ರಿಲೇಷನ್‌ಷಿಪ್‌ಅನ್ನು ಕನ್ಫರ್ಮ್ ಮಾಡಿದ್ದಾರೆ. ತಮ್ಮದು 15 ವರ್ಷಗಳ ಸಾಂಗತ್ಯ ಎಂದು ಅವರು ಹೇಳಿಕೊಂಡಿದ್ದಾರೆ. ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್ ಹಾಗೂ ಉದ್ಯಮಿ ಅಂಟೋನಿ ಥಟ್ಟಿಲ್ ಜೊತೆಗಿನ ಮೊದಲ ಚಿತ್ರವನ್ನು ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ಈ ಫೋಟೋ ಹಂಚಿಕೊಂಡಿರುವ ಕೀರ್ತಿ ಸುರೇಶ್ ಅದರೊಂದಿಗೆ ಪುಟ್ಟದಾದ ನೋಟ್ ಕೂಡ ನೀಡಿದ್ದಾರೆ. ಕೀರ್ತಿ ಸುರೇಶ್ ಹಾಗೂ ಅಂಟೋನಿ ಥಟ್ಟಿಲ್ ಅವರ ವಿವಾಹ ಮುಂದಿನ ತಿಂಗಳು ಗೋವಾದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ದೀಪಾವಳಿ ಸಮಯದಲ್ಲಿ ಕ್ಲಿಕ್ ಮಾಡಿರುವ ಚಿತ್ರ ಇದಾಗಿದೆ. ಚಿತ್ರದಲ್ಲಿ ಅಂಟೋನಿ ಥಟ್ಟಿಲ್ ಪಟಾಕಿಯನ್ನು ಆಕಾಶಕ್ಕೆ ಹಿಡಿದಿದ್ದು, ಆತನ ಜೊತೆಯಲ್ಲಿ ಕೀರ್ತಿ ಭುಜಕ್ಕೆ ಭುಜ ತಾಗಿಸಿ ನಿಂತಿದ್ದಾರೆ. ಇಬ್ಬರೂ ಕೂಡ ಕ್ಯಾಮೆರಗೆ ಬೆನ್ನಾಗಿ ನಿಂತು ಆಕಾಶದಲ್ಲಿ ಪಟಕಿ ಸಿಡಿಯುತ್ತಿರುವುದನ್ನು ಏಕಕಾಲದಲ್ಲಿ ನೋಡುತ್ತಿದ್ದಾರೆ. ಈ ಫೋೋ ಹಂಚಿಕೊಳ್ಳುವುದರೊಂದಿಗೆ 15 ವರ್ಷ ಮತ್ತು ಕೌಂಟಿಂಗ್ ಎಂದು ಅವರು ಬರೆದುಕೊಂಡಿದ್ದಾರೆ. ಅದಕ್ಕೆ ಇನ್ಫಿನಿಟಿ ಸಿಂಬಲ್ ಕೂಡ ಸೇರಿಸಿದ್ದಾರೆ.
ನಾಯಿಯ ಹೆಸರಲ್ಲೇ ಲವರ್ ಹೆಸರು ಸೇರಿಸಿದ್ದ ಕೀರ್ತಿ ಸುರೇಶ್: ಎಲ್ಲರಿಗೂ ಗೊತ್ತಿರುವ ಹಾಗೆ ಕೀರ್ತಿ ಸುರೇಶ ಅವರ ಪ್ರೀತಿಯ ನಾಯಿಯ ಹೆಸರು ನೈಕೆ (NYKE). ಇಲ್ಲಿಯವರೆಗೂ ನಾಯಿಗೆ ಇಂಥ ಡಿಫರೆಂಟ್ ಹೆಸರು ಇಟ್ಟಿದ್ಯಾಕೆ ಅನ್ನೋದನ್ನ ಕೀರ್ತಿ ಸುರೇಶ್ ಎಲ್ಲಿಯೂ ಬಹಿರಂಗ ಮಾಡಿರಲಿಲ್ಲ. ಆದರೆ, ರಿಲೇಷನ್‌ಷಿಪ್ ಕನ್ಫರ್ಮ್ ಮಾಡುವ ವೇಳೆ ಈ ವಿಚಾರವನ್ನೂ ಅವರು ತಿಿಸಿದ್ದಾರೆ. ಶಾರ್ಟ್ ನೋಟ್‌ನಲ್ಲಿ ಇದು ಎಂದಿಗೂ 'AntoNY x KEerthy' ಎಂದು ಅವರು ಬರೆದುಕೊಂಡಿದ್ದಾರೆ. ಅಂಟೋನಿ ಎನ್ನುವ ಇಂಗ್ಲೀಷ್ ಹೆಸರಿನ ಕೊನೆಯ ಎರಡು ಅಕ್ಷರ ಹಾಗೂ ಕೀರ್ತಿ ಎನ್ನುವ ಇಂಗ್ಲೀಷ್ ಹೆಸರಿನ ಮೊದಲ ಎರಡು ಅಕ್ಷರವನ್ನು ಸೇರಿಸಿಕೊಂಡು ತಮ್ಮ ಪ್ರೀತಿಯ ನಾಯಿಗೆ ಅವರು ನೈಕೆ ಎನ್ನುವ ಹೆಸರಿಟ್ಟಿದ್ದರು. ಈ ವಿಚಾರ ಆಕೆ ತಿಳಿಸುವವರೆಗೂ ಯಾರೊಬ್ಬರಿಗೂ ಗೊತ್ತಾಗಿರಲಿಲ್ಲ.
ಕೀರ್ತಿ ಸುರೇಶ್ ಆ್ಯಂಟನಿ ತಟ್ಟಿಲ್ ಜೊತೆ ಮದುವೆಗೆ ಮುನ್ನವೇ ಮತಾಂತರ?
ಈ ಪೋಸ್ಟ್‌ಗೆ ಹಲವು ನಟಿಯರು ಕಾಮೆಂಟ್‌ಮಾಡಿದ್ದಾರೆ. ನಟಿ ತ್ರಿಶಾ ಕೃಷ್ಣನ್, ಹಾರ್ಟ್ ಇಮೋಜಿ ಪೋಸ್ಟ್ ಮಾಡಿದ್ದಾರೆ, ಮಾಳವಿಕಾ ಮೋಹನನ್, ಇಲ್ಲಿಯವರೆಗೂ ನೈಕೆ ಎನ್ನುವ ಹೆಸರಿನ ನಿಜವಾದ ಅರ್ಥ ನನಗೆ ಗೊತ್ತಿರಲಿಲ್ಲ. ಈಗ ತಿಳಿದಿದೆ ಎಂದು ಬರೆದುಲೊಂಡಿದ್ದಾರೆ. ಅದರೊಂದಿಗೆ ಇಬ್ಬರಿಗೂ ಲವ್ ಯೂ ಎಂದು ಬರೆದಿದ್ದಾರೆ.
ಈ ಖ್ಯಾತ ನಟಿಯರ ವಿದ್ಯಾರ್ಹತೆ ಏನು?: ಓದಿನಲ್ಲಿ ಈ ನಟಿ ಮಾತ್ರ ಟಾಪ್... ಯಾರು ಆ ಬುದ್ಧಿವಂತ ಸುಂದರಿ?
ಮುಂದಿನ ತಿಂಗಳು ವಿವಾಹ: ಅಕ್ಟೋಬರ್ 11 ರಂದು ಇಬ್ಬರೂ ಗೋವಾದಲ್ಲಿ ವಿವಾಹ ನಡೆಯಲಿದೆ ಎಂದು ವರದಿಯಾಗಿದೆ. ಈಗಾಗಲೇ ಗೋವಾದಲ್ಲಿ ಸಿದ್ದತೆಗಳು ಕೂಡ ನಡೆದಿವೆ. ಕೇರಳದ ಕೊಚ್ಚಿ ಮೂಲದವರಾದ ಅಂಟೋನಿ ಥಟ್ಟಿಲ್, ಕೇರಳ ರಾಜ್ಯದ ಪ್ರಮುಖ ರೆಸಾರ್ಟ್ ಚೈನ್‌ನ ಮಾಲೀಕರಾಗಿದ್ದಾರೆ.