ರೀಲ್ಸ್ ಹುಚ್ಚಿಗೆ ಮಹಿಳೆಯರ ಒಳ ಉಡುಪು ಧರಿಸಿ ರಸ್ತೆಗೆ ಬಂದ ಯುವಕ. ಏನು ಆಗಬಾರದೋ, ಅದೇ ಆಯ್ತು! ಅವನ ಪಾಡು ಏನಾಯ್ತು ವಿಡಿಯೋ ನೋಡಿ!
ಇಂದು ರೀಲ್ಸ್ ಎನ್ನುವ ಹುಚ್ಚು ಬಹುತೇಕರನ್ನು ಆವರಿಸಿಕೊಂಡು ಬಿಟ್ಟಿದೆ. ದಿಢೀರ್ ಎಂದು ಫೇಮಸ್ ಆಗಲು ಕಾಣುವ ಮಾರ್ಗ ಇದೊಂದೇ. ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಕಾಂಪಿಟೇಷನ್ ಕೂಡ ಜಾಸ್ತಿಯಾಗುತ್ತಿದೆ. ಅದಕ್ಕಾಗಿಯೇ ಕೆಲವರು ವಿಭಿನ್ನ ರೀತಿಯಲ್ಲಿ ರೀಲ್ಸ್ ಮಾಡುವ ತವಕದಲ್ಲಿ ಇರುತ್ತಾರೆ. ಇದೇ ಕಾರಣಕ್ಕೆ ಎಷ್ಟೋ ಮಂದಿ ಅಪಾಯಕಾರಿ ಎನ್ನುವ ರೀಲ್ಸ್ ಮಾಡಿ ಜೀವ ಕಳೆದುಕೊಂಡವರಿದ್ದಾರೆ, ಕೈ-ಕಾಲು ಮುರಿದುಕೊಂಡು ನರಳುತ್ತಿರುವವರೂ ಇದ್ದಾರೆ. ಇಂಥವರ ಬಗ್ಗೆ ಪ್ರತಿನಿತ್ಯ ಸುದ್ದಿಯಾಗುತ್ತಲೇ ಇರುತ್ತದೆ. ರೈಲು ಹಳಿಗಳ ಮೇಲೆ ನಿಲ್ಲುವುದು, ಬೆಟ್ಟದ ತುದಿಯಲ್ಲಿ ಹೋಗುವುದು... ಹೀಗೆ ರೀಲ್ಸ್ ಹುಚ್ಚಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವವರು ಒಂದೆಡೆಯಾದರೆ, ಚಿತ್ರ-ವಿಚಿತ್ರವಾಗಿ ರೀಲ್ಸ್ ಮಾಡಲು ಹೋಗಿ ಥಳಿತಕ್ಕೆ ಒಳಗಾಗುವವರೂ ಇದ್ದಾರೆ.
ಇದೀಗ ಅಂಥದ್ದೇ ಒಂದು ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ. ಜನಜಂಗುಳಿ ಇರುವ ಮಾರ್ಕೆಟ್‌ನಲ್ಲಿ ಯುವಕನೊಬ್ಬ ಮಾಡಬಾರದ್ದು ಮಾಡಿ ಒದೆ ತಿಂದಿದ್ದಾನೆ! ಈತ ಮಾಡಿದ್ದು ಏನೆಂದರೆ, ಮಹಿಳೆಯರ ಒಳಉಡುಪು ಧರಿಸಿ ರೀಲ್ಸ್ ಮಾಡುತ್ತಿದ್ದ! ಆರಂಭದಲ್ಲಿ ಈತ ಒಬ್ಬ ಹುಚ್ಚ ಎಂದುಕೊಂಡರು ಜನರು. ಬಳಿಕ ರೀಲ್ಸ್ ಮಾಡುತ್ತಿರುವುದು ತಿಳಿಯಿತು. ಈತನನ್ನು ನೋಡಿ ಮಹಿಳೆಯರು ಮುಜುಗರ ಪಟ್ಟುಕೊಂಡಿದ್ದಾರೆ. ಜನರಿಗೂ ಅಶ್ಲೀಲ ಎನ್ನಿಸಿದೆ. ಅಷ್ಟಕ್ಕೆಸುಮ್ಮನಾಗದ ಜನರು, ಈತನ ಸುತ್ತುವರೆದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಆತನ ರೀಲ್ಸ್ ವೈರಲ್ ಆಯ್ತೋ ಇಲ್ವೋ ಗೊತ್ತಿಲ್ಲ. ಆದರೆ ಯುವಕನನ್ನು ಥಳಿಸಿದ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಆಗ ಬೆಡ್‌ರೂಮ್, ಈಗ ಬಾತ್‌ರೂಮ್! ಫ್ರೆಂಡ್ ಜೊತೆ ನಿವೇದಿತಾ ಖುಲ್ಲಂ ಖುಲ್ಲಾ ವಿಡಿಯೋಗೆ ನೆಟ್ಟಿಗರು ಶಾಕ್...
ಯುವಕ ಬ್ರಾ ಹಾಗೂ ಲಂಗ ಧರಿಸಿ ನೃತ್ಯ ಮಾಡುತ್ತಿದ್ದಂತೆಯೇ ಹೀಗೆ ಥಳಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇಷ್ಟು ಮಾಡುತ್ತಿದ್ದಂತೆಯೇ ಜನರು ಗುಂಪುಗೂಡಿ ಚಪ್ಪಲಿ ಏಟು ಕೊಟ್ಟಿದ್ದಾರೆ. ಯುವಕ ಕ್ಷಮೆಯಾಚಿಸಿ ತನ್ನನ್ನು ಬಿಟ್ಟುಬಿಡುವಂತೆ ಮನವಿ ಮಾಡಿಕೊಂಡರೂ ಜನರು ಬಿಡಲಿಲ್ಲ. ಇವೆಲ್ಲವನ್ನೂ ವಿಡಿಯೋದಲ್ಲಿ ನೋಡಬಹುದು.
ಇತ್ತೀಚೆಗೆ ಜಲಪಾತದ ಮಧ್ಯೆ ನಿಂತುಕೊಂಡು ರೀಲ್ಸ್ ಮಾಡುವ ಸಂದರ್ಭದಲ್ಲಿ, ಪ್ರವಾಹದಲ್ಲಿ ಸಿಲುಕಿಕೊಂಡು ಕುಟುಂಬವೊಂದು ಕೊಚ್ಚಿ ಹೋದ ದೃಶ್ಯ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಅನ್ವಿ ಕಂಬಾರ್ ಎಂಬ 27 ವರ್ಷದ ಯುವತಿ ರೀಲ್ಸ್ ಮಾಡಲು ಕಾರನ್ನು ರಿವರ್ಸ್ ತೆಗೆಯುವಾಗ 300 ಅಡಿ ಆಳದ ಕಂದಕಕ್ಕೆ ಕಾರು ಉರುಳಿ ಸಾವನ್ನಪ್ಪಿದ್ದರು. ಹೀಗೆ ರೀಲ್ಸ್ ಹುಚ್ಚು ಪ್ರಾಣವನ್ನು ಪಡೆಯುತ್ತಿದ್ದರೂ ಅದನ್ನು ಲೆಕ್ಕಿಸದ ಯುವ ಸಮೂಹ ಒಂದೆಡೆಯಾದರೆ, ಇನ್ನೊಂದು ಕಡೆ ಇಂಥ ಅಶ್ಲೀಲ ಎನ್ನುವ ರೀಲ್ಸ್ ಮಾಡಿ ಸಾರ್ವಜನಿಕರಿಂದ ಥಳಿತಕ್ಕೆ ಒಳಗಾಗುವುದೂ ಇದೆ.
ಬಾಯ್‌ಫ್ರೆಂಡ್, ಗಂಡನಿಗೆ ದುಬಾರಿ ಗಿಫ್ಟ್ ಕೊಡೋ ಮೊದ್ಲು... ಯುವತಿಯರಿಗೆ ಸಮಂತಾ ನೀಡಿದ ಎಚ್ಚರಿಕೆ ಏನು?
मेरे हिसाब से इनका ठीक इलाज हो रहा है. उम्मीद है रील का भूत इनका उतर गया होगा
ये रीलबाज बीच बाज़ार में नाच अश्लील हरकतें कर रहा था
मौके पर कुछ लोगों ने पकड़ कूट दिया.
मामला हरियाणा के पानीपत का है. pic.twitter.com/o4Vj27KCSS