ಲಾಕ್‌ಡೌನ್ ಸಂಕಷ್ಟ: 1610 ಕೋಟಿ ರುಪಾಯಿಗಳ ಬಂಪರ್ ಗಿಫ್ಟ್ ಘೋಷಿಸಿದ ಸಿಎಂ ಯಡಿಯೂರಪ್ಪ

May 6, 2020, 1:51 PM IST

ಬೆಂಗಳೂರು(ಮೇ.06): ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದ ವಿವಿಧ ಕ್ಷೇತ್ರಗಳಿಗೆ ಟಾನಿಕ್ ನೀಡಿ ಶಕ್ತಿ ತುಂಬುವ ಕೆಲಸಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸುಮಾರು 1,610 ಕೋಟಿ ರುಪಾಯಿಗಳ ವಿಶೇಷ ನೆರವಿನ ಪ್ಯಾಕೇಜ್ ಘೋ‍ಷಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಸುದ್ದಿಘೋಷ್ಟಿ ನಡೆಸಿದ ಬಿಎಸ್‌ವೈ, ಹೂವು, ಹಣ್ಣು, ತರಕಾರಿ ಬೆಳೆಯುವ ರೈತರಿಗೆ ವಿಶೇಷ ಪರಿಹಾರವನ್ನು ಘೋಷಿಸಿದ್ದಾರೆ. ಇನ್ನು ಕ್ಷೌರಿಕರಿಗೆ ಹಾಗೂ ಅಗಸರಿಗೂ ತಲಾ 5 ಸಾವಿರ ರುಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.  

"

1610 ಕೋಟಿ ಪ್ಯಾಕೇಜ್: ಆಟೋ ರಿಕ್ಷಾ, ಕ್ಷೌರಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ!

ಇನ್ನುಳಿದಂತೆ ಆಟೋ ಚಾಲಕರಿಗೆ ಒಂದು ಬಾರಿ 5 ಸಾವಿರ ರುಪಾಯಿಗಳ ನೆರವನ್ನು ಘೋಷಿಸಿದ್ದಾರೆ. ಸುದ್ದಿಘೋಷ್ಟಿಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದೇನು ಎನ್ನುವುದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.