ಜಪಾನ್ ಮತ್ತು ಮಂಗೋಲಿಯಾ ನಡುವೆ ಬುಧವಾರ (ಮೇ 8) ಪಂದ್ಯ ನಡೆದಿತ್ತು. ಸಾನೋ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಜಪಾನ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿ 7 ವಿಕೆಟ್‌ಗೆ 217 ರನ್ ಗಳಿಸಿತು.
ನವದೆಹಲಿ (ಮೇ.8): ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳಿವೆ. ಅವುಗಳನ್ನು ನೋಡಿದರೆ. ಆಟಗಾರರು ಮತ್ತು ಇಡೀ ತಂಡವು ಹೆಮ್ಮೆಪಡುತ್ತದೆ. ಆದರೆ ಕೆಲವೊಮ್ಮೆ ಕುಖ್ಯಾತಿಯ ದಾಖಲೆಗಳು ಕೂಡ ಸೃಷ್ಟಿಯಾಗುತ್ತದೆ. ಇದನ್ನು ಕಂಡು ಟೀಮ್ ಹಾಗೂ ಆಟಗಾರರ ಮೇಲೆ ನಗುವಂತಾಗುತ್ತದೆ. ಟಿ20 ಕ್ರಿಕೆಟ್‌ನಲ್ಲಿ ಒಮ್ಮೊಮ್ಮೆ ವಿಶ್ವದಾಖಲೆಯ ರನ್ ಪೇರಿಸುತ್ತಾರೆ. ಇನ್ನೊಮ್ಮೆ ವಿಶ್ವದಾಖಲೆಯ ಅತೀ ಕಡಿಮೆ ಸ್ಕೋರ್ ದಾಖಲು ಮಾಡುತ್ತಾರೆ. ಅದೇ ರೀತಿಯ ಒಂದು ಪಂದ್ಯ ಸಾನೋ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದೆ. ಬುಧವಾರ ಜಪಾನ್ ಹಾಗೂ ಮಂಗೋಲಿನಾ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ ತಂಡ 7 ವಿಕೆಟ್‌ಗೆ 217 ರನ್ ಪೇರಿಸಿತು.ಇದಕ್ಕೆ ಉತ್ತರವಾಗಿ ಇಡೀ ಮಂಗೋಲಿಯಾ ತಂಡ ಕೇವಲ 12 ರನ್‌ಗೆ ಆಲೌಟ್ ಆಯಿತು. ತಂಡದ 7 ಬ್ಯಾಟ್ಸ್‌ಮನ್‌ಗಳಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಈ ಮೂಲಕ ಜಪಾನ್ ಈ ಪಂದ್ಯವನ್ನು 205 ರನ್‌ಗಳಿಂದ ಗೆದ್ದಕೊಂಡಿತು.
ಮಂಗೋಲಿಯಾ ಗಳಿಸಿದ 12 ರನ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ತಂಡ ಗಳಿಸಿದ ಅತ್ಯಂತ ಕಡಿಮೆ ಸ್ಕೋರ್ ಏನಲ್ಲ. ಮಂಗೋಲಿಯಾ ತಂಡದ ದಾಖಲೆ 2ನೇ ಸ್ಥಾನದಲ್ಲಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತೀ ಕಡಿಮೆ ಸ್ಕೋರ್‌ನ ದಾಖಲೆ ಐಸ್ಲೆ ಆಫ್ ಮಾನ್ ಟೀಮ್‌ನ ಹೆಸರಲ್ಲಿದೆ. ಸ್ಪೇನ್ ವಿರುದ್ಧ ಐಸ್ಲೆ ಆಫ್ ಮಾನ್ ಕೇವಲ 10 ರನ್‌ಗೆ ಆಲೌಟ್ ಆಗಿರುವುದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 2023ರಲ್ಲಿ ಈ ದಾಖಲೆ ನಿರ್ಮಾಣವಾಗಿತ್ತು.
ಮಂಗೋಲಿಯಾ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 7 ಮಂದಿ ಬ್ಯಾಟ್ಸ್‌ಮನ್‌ಗಳು ಸೊನ್ನೆಗ ಔಟಾದರು. ಇದರಲ್ಲಿ 6 ಮಂದಿ ಔಟ್ ಆದರೆ, ಇನ್ನೊಬ್ಬ ಆಟಗಾರ ಖಾತೆ ತೆರೆಯದೇ ಉಳಿದುಕೊಂಡಿದ್ದ. ಬ್ಯಾಟ್ಸ್‌ಮನ್‌ಗಳು ಒಂದು ರನ್ ಬಾರಿಸಲು ಕೂಡ ಪರದಾಟ ನಡೆಸಿದರು. ತಂಡದ ಪರವಾಗಿ ಗರಿಷ್ಠ ರನ್ ಬಾರಿಸಿದ್ದು ತುಮ್ ಸುಮ್ಯಾ. ಈತ 4 ರನ್ ಬಾರಿಸಿದ. ಕೇವಲ 8.2 ಓವರ್‌ಗಳಲ್ಲಿ 1.44 ರನ್‌ರೇಟ್‌ನೊಂದಿಗೆ ಕೇವಲ 12 ರನ್‌ಗೆ ಮಂಗೋಲಿಯಾ ಆಲೌಟ್ ಆಯಿತು.
ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಲೀಕ್ ಮಾಡಿದ್ಯಾರು? ಉದ್ದೇಶವೇನು..
ಜಪಾನ್‌ನ ವೇಗದ ಬೌಲರ್ ಕಜುಮಾ ಕಟೊ-ಸ್ಟಾಫರ್ಡ್ ಮಂಗೋಲಿಯಾ ತಂಡದ ಅರ್ಧದಷ್ಟು ಆಟಗಾರರನ್ನು ಔಟ್ ಮಾಡಿದರು. ಅವರು 3.2 ಓವರ್‌ಗಳಲ್ಲಿ 7 ರನ್ ನೀಡಿ ಒಟ್ಟು 5 ವಿಕೆಟ್ ಪಡೆದರು. ಇದಲ್ಲದೇ ಅಬ್ದುಲ್ ಸಮದ್ ಮತ್ತು ಮಕೋಟೊ ತಲಾ 2 ವಿಕೆಟ್ ಪಡೆದರೆ, ಬೆಂಜಮಿನ್ 1 ವಿಕೆಟ್ ಪಡೆದರು. ಇನ್ನೊಂದೆಡೆ, ಸಬೌರೀಶ್ ರವಿಚಂದ್ರನ್ ಜಪಾನ್ ಇನ್ನಿಂಗ್ಸ್‌ನಲ್ಲಿ 39 ಎಸೆತಗಳಲ್ಲಿ 69 ರನ್ ಗಳಿಸಿದರು. ಅವರು 6 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು. ಇದಲ್ಲದೇ ನಾಯಕ ಕೆಂಡಾಲ್ ಕಡೋವಾಕಿ ಫ್ಲೆಮಿಂಗ್ 32 ರನ್, ಇಬ್ರಾಹಿಂ ತಕಹಶಿ 31 ರನ್ ಗಳಿಸಿದರು. ಮಂಗೋಲಿಯಾ ಪರ ಜೊಜಾವ್ಖ್ಲಾನ್ ಶುರೆಂಟ್ಸೆಟ್ಸೆಗ್ ಗರಿಷ್ಠ 3 ವಿಕೆಟ್ ಪಡೆದರು.
'ಜೀವನದಲ್ಲಿ ಜನ ಬರ್ತಾರೆ.. ಹೋಗ್ತಾರೆ..' ಹಾಟ್ ಫೋಟೋ ಜೊತೆ ಈ ಮಾತು ಹೇಳಿದ್ದೇಕೆ ನಟಿ?