
ಅಮೇರಿಕನ್ ಸಿಂಗರ್ ಕ್ಯಾಮಿಲಾ ಕ್ಯಾಬೆಲ್ಲೊ ಜಗತ್ತಿನಾದ್ಯಂತ ಜನರು ಇಷ್ಟಪಡುವ ನೆಚ್ಚಿನ ಗಾಯಕರಲ್ಲಿ ಒಬ್ಬರು. ತಮ್ಮ ಅದ್ಭುತ ಹಾಡಿನ ಮೂಲಕವೇ ಜನರನ್ನು ಮೋಡಿ ಮಾಡುತ್ತಾರೆ. ಆಕೆಯ ಫೇಮಸ್ ಹಾಡುಗಳಲ್ಲಿ ಬಾಮ್ ಬಾಮ್, ಹವಾನಾ, ಮತ್ತು ಸೆನೋರಿಟಾ ಸೇರಿವೆ. ಆಕೆಯ ಆಲ್ಬಮ್‌ಗಳಾದ ರೋಮ್ಯಾನ್ಸ್ ಮತ್ತು ಫ್ಯಾಮಿಲಿಯಾ ಎಲ್ಲರಿಗೂ ಅತಿ ನೆಚ್ಚಿನದ್ದಾಗಿದೆ. ಚಿಕ್ಕಂದಿನಿಂದಲೂ ಹಾಡಿನ ಬಗ್ಗೆ ಆಸಕ್ತಿ ಹೊಂದಿದ್ದ ಕ್ಯಾಮಿಲಾ ಅದಕ್ಕಾಗಿ 9ನೇ ತರಗತಿಯಲ್ಲಿ ತನ್ನ ಅಧ್ಯಯನವನ್ನು ಸಹ ತೊರೆದಳು. ಕ್ಯಾಮಿಲಾ ಇತ್ತೀಚೆಗೆ ಮೆಟ್ ಗಾಲಾ 2024 ಗ್ರೀನ್ ಕಾರ್ಪೆಟ್‌ನಲ್ಲಿ ಸ್ಲಿಜ್ಲಿಂಗ್‌ನಲ್ಲಿ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದರು.
ಮೆಟ್ ಗಾಲಾ 2024 ಮೇ 6, 2024ರಂದು ಪ್ರಾರಂಭವಾಯಿತು. ಹಲವಾರು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ತಮ್ಮ ಫ್ಯಾಶನೆಬಲ್ ಡ್ರೆಸ್‌ನಿಂದ ಅಭಿಮಾನಿಗಳನ್ನು ವಿಸ್ಮಯಗೊಳಿಸಿದರು. ಈ ವರ್ಷ ಮೆಟ್ ಗಾಲಾ ಥೀಮ್ ಜೆ.ಜಿ ಬರೆದ 'ದಿ ಗಾರ್ಡನ್ ಆಫ್ ಟೈಮ್' ಎಂಬ ಸಣ್ಣ ಕಥೆಯಿಂದ ಪ್ರೇರಿತವಾಗಿದೆ. 'ಸ್ಲೀಪಿಂಗ್ ಬ್ಯೂಟಿ: ರೀವೇಕನಿಂಗ್ ಫ್ಯಾಶನ್' ಥೀಮ್‌ಗೆ ತಕ್ಕಂತೆ ಕ್ಯಾಮಿಲಾ ಕ್ಯಾಬೆಲ್ಲೊ ಅವರು ಏಸ್ ಡಿಸೈನರ್ ಲುಡೋವಿಕ್ ಡಿ ಸೇಂಟ್ ಸೆರ್ನಿನ್ ಅವರ ಅಲ್ಟ್ರಾ ಸ್ಯಾಸಿ ಗೌನ್ ಧರಿಸಿದ್ದರು.
ಮೆಟ್ ಗಾಲಾದಲ್ಲಿ ಕಾಣಿಸಿಕೊಂಡು ಸೆಲೆಬ್ರಿಟಿ ಸ್ಟೇಟಸ್ ಉಳಿಸ್ಕೊಳೋಕೆ 2 ಕೋಟಿ ರೂ. ಕೊಟ್ರಾ ಆಲಿಯಾ ಭಟ್?!
ಮೆಟ್ ಗಾಲಾ 2024 ಗಾಗಿ, ಕ್ಯಾಮಿಲಾ ಕ್ಯಾಬೆಲ್ಲೊ ಗೋಲ್ಡನ್-ಹ್ಯೂಡ್ ಗೌನ್‌ನ್ನು ಧರಿಸಿದ್ದರು. ಇದು ಕ್ರಿಸ್-ಕ್ರಾಸ್ ಔಟ್‌ಲೈನ್‌ನೊಂದಿಗೆ ಡೀಪ್ ನೆಕ್‌ಲೈನ್ ಅನ್ನು ಒಳಗೊಂಡಿದೆ. ಈ ಉಡುಗೆಯನ್ನು 250,000 ಸ್ವರೋವ್ಸ್ಕಿ ಹರಳುಗಳಿಂದ ಮಾಡಲಾಗಿದ್ದು, ಬರೋಬ್ಬರಿ 15 ಪೌಂಡ್ ತೂಕವಿದೆ. ಡಿಸೈನರ್ ಪ್ರಕಾರ, ಮೆಟ್ ಗಾಲಾ 2024 ಗಾಗಿ ಕ್ಯಾಮಿಲಾ ಅವರ ಉಡುಗೆ ತಯಾರಿಸಲು 450 ಗಂಟೆಗಳನ್ನು ಬೇಕಾಯಿತು.
ಮೆಟ್ ಗಾಲಾದಲ್ಲಿ ಕ್ಯಾಮಿಲಾ ಲುಕ್‌ನಲ್ಲಿ ಗಮನ ಸೆಳೆದ ಇನ್ನು ಮುಖ್ಯ ವಿಷಯವೆಂದರೆ ಕ್ಯಾಮಿಲಾ ಸಂಪೂರ್ಣ ಐಸ್ ಗಡ್ಡೆಯಿಂದ ತಯಾರಿಸಿದ ಕ್ಲಚ್ ಹಿಡಿದುಕೊಂಡಿದ್ದರು. ಇದರಲ್ಲಿ ಕೆಂಗುಲಾಬಿಯ ಡಿಸೈನ್ ಮಾಡಲಾಗಿತ್ತು. ಇವೆಂಟ್‌ನ ಮುಗಿದಾಗ ಐಸ್ ಸಂಪೂರ್ಣವಾಗಿ ಕರಗಿ ರೋಸ್ ಅಷ್ಟೆ ಉಳಿಯಿತು. ಈ ಐಸ್ ಕ್ಲಚ್ ಈ ಬಾರಿಯ ಮೆಟ್‌ಗಾಲಾದಲ್ಲಿ ಎಲ್ಲರ ಗಮನ ಸೆಳೆದಿದ್ದಂತೂ ನಿಜ.
ಫ್ಯಾಷನ್ ಓಕೆ, ಸೊಂಟ ಮಾತ್ರ ಹೀಗಿದೆ ಯಾಕೆ; ಕಿಮ್ ಕಾರ್ಡಶಿಯಾನ್ ಮೆಟ್ ಗಾಲಾ ಲುಕ್‌ಗೆ ನೆಟ್ಟಿಗರ ಕಳವಳ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.