ಮುಂಬೈನ ತಮ್ಮ ಸ್ಟಾಲ್‌ನಿಂದ 'ಚಿಕನ್ ಷಾವರ್ಮಾ' ತಿಂದು 19 ವರ್ಷದ ಹುಡುಗ ಸಾವನ್ನಪ್ಪಿದ ನಂತರ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ (ಮೇ.8): ತಮ್ಮ ಸ್ಟಾಲ್‌ನಿಂದ ಖರೀದಿಸಿದ 'ಚಿಕನ್ ಷಾವರ್ಮಾ' ತಿಂದು 19 ವರ್ಷದ ಯುವಕ ಸಾವನ್ನಪ್ಪಿದ ನಂತರ ಪೊಲೀಸರು ಇಬ್ಬರು ಸ್ಟಾಲ್ ಮಾಲೀಕರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರನ್ನು ಪ್ರಥಮೇಶ್ ಭೋಕ್ಸೆ ಎಂದು ಗುರುತಿಸಲಾಗಿದ್ದು, ಮೇ 3 ರಂದು ಟ್ರಾಂಬೆ ಪ್ರದೇಶದಲ್ಲಿ ಆರೋಪಿಗಳ ಸ್ಟಾಲ್‌ನಿಂದ ಆಹಾರ ಪದಾರ್ಥವನ್ನು ಖರೀದಿಸಿದ್ದಾರೆ ಎಂದು ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ. ಮೇ 4 ರಂದು, ಭೋಕ್ಸೆ ಅವರು ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದರು ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಪುರಸಭೆಯ ಆಸ್ಪತ್ರೆಗೆ ಹೋಗಿದ್ದರು. ಆದರೆ, ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುವ ಲಕ್ಷಣ ಕಾಣದೇ ಇದ್ದಾಗ ಕುಟುಂಬ ಸದಸ್ಯರು ಅವರನ್ನು ಮೇ 5 ರಂದು ದತ್ತಿ ಆಸ್ಪತ್ರೆಯಾಗಿರುವ ಕೆಇಎಂ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ವೈದ್ಯರು ಚಿಕಿತ್ಸೆ ನೀಡಿ ಅವರನ್ನು ಮನೆಗೆ ಕಳುಹಿಸಿದ್ದಾರೆ ಎಂದು ಟ್ರಾಂಬೆ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಆದರೆ, ಭಾನುವಾರದ ವೇಳೆಗೆ ಅವರು ಮತ್ತೆ ಅಸ್ವಸ್ಥಗೊಂಡಿದ್ದರಿಂದ ಸಂಜೆಯ ವೇಳೆಗ ಮತ್ತೊಮ್ಮೆ ಕೆಇಎಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ವೈದ್ಯರು ಪರೀಕ್ಷೆ ಮಾಡಿ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದರು.
ನಂತರ ಆಸ್ಪತ್ರೆಯ ಅಧಿಕಾರಿಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯ್ದೆ) ಮತ್ತು 273 (ಹಾನಿಕಾರಕ ಆಹಾರ ಅಥವಾ ಪಾನೀಯ ಮಾರಾಟ) ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸೋಮವಾರದ ವೇಳೆಗೆ ಪ್ರಥಮೇಶ್ ಭೋಕ್ಸೆ ಆಸ್ಪತ್ರೆಯಲ್ಲೇ ಸಾವು ಕಂಡಿದ್ದಾರೆ.
ಬೀದಿಬದಿಯಲ್ಲಿ ಚಿಕನ್ ಶವರ್ಮಾ ತಿಂದು 12 ಮಂದಿ ಆಸ್ಪತ್ರೆಗೆ ದಾಖಲು!
ನಂತರ ಪೊಲೀಸರು ಇಬ್ಬರು ಸ್ಟಾಲ್ ಮಾಲೀಕರಾದ ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಅವರನ್ನು ಬಂಧಿಸಿದ್ದು, 304 (ಅಪರಾಧ ನರಹತ್ಯೆ ಕೊಲೆಯಲ್ಲ) ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
undefined
ಪನೀರ್ ಆರ್ಡರ್ ಮಾಡಿದ್ದೆ, ಚಿಕನ್ನಲ್ಲ; 50 ಲಕ್ಷ ರೂ ಪರಿಹಾರ ಕೇಳಿದ ಮಹಿಳೆ!