ಎಲ್ಲೆಲ್ಲೂ ಪ್ರವಾಹ ಭೀತಿ..ಎಚ್ಚರ..ಕಟ್ಟೆಚ್ಚರ: ಪ್ರಳಯ ಪ್ರಹಾರಕ್ಕೆ ಅರ್ಧ ಭಾರತವೇ ಕಂಗಾಲು..!

Jul 27, 2023, 12:58 PM IST

ಅಂತೂ ರಾಜ್ಯದಲ್ಲಿ ಮಳೆ ತನ್ನ ಆರ್ಭಟ ಶುರುಮಾಡಿಕೊಂಡಿದೆ. ಜೂನ್ ಹೊತ್ತಲ್ಲೇ ಶುರುವಾಗಬೇಕಿದ್ದ ಮಳೆ(Rain) ತಡವಾಗಿತ್ತು. ಈ ಬಾರಿ ಬರ ಆವರಿಸಲಿದೆಯೇನೋ ಅನ್ನೋ ಭಯ ಮೂಡಿತ್ತು. ಆದ್ರೆ ಹೆಚ್ಚೂಕಮ್ಮಿ ಮೂರ್ನಾಲ್ಕು ವಾರ ತಡವಾಗಿ ಶುರುವಾಗಿರೋ ಮಳೆ, ಅಕ್ಷರಶಃ ಆತಂಕ ಮೂಡಿಸಿದೆ.. ಹೊಸ ಕಂಟಕ ಹುಟ್ಟಿಸಿದೆ. ಕರ್ನಾಟಕದ(Karnataka) ಅನೇಕ ನದಿಗಳು, ಮಹಾಮಳೆಯಿಂದಾಗಿ ಮೈತುಂಬಿಕೊಂಡಿದ್ದಾವೆ. 72 ಗಂಟೆಗಳಿಂದಲೂ ಮಲೆನಾಡಿನ ಭಾಗದಲ್ಲಿ ಬಿಟ್ಟೂಬಿಡದೆ ಮಳೆ ಸುರಿಯುತ್ತಲೇ ಇದೆ. ಆ ಮಳೆಗೆ ಇಡೀ ಮಲೆನಾಡು ಜೀವಕಳೆಯಿಂದ ತುಂಬಿತುಳುಕುತ್ತಿದೆ. ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಂಖಂಡ್, ಮಹಾರಾಷ್ಟ್ರ, ಹರಿಯಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ, ಹವಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗ್ತಾ ಇದೆ. ಹಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಈ ಮಳೆಯ ಆರ್ಭಟ ಬರೀ ಭಾರತದಲ್ಲಷ್ಟೇ ಇಷ್ಟು ಘೋರವಾಗಿದೆ ಅಂತ ಭಾವಿಸಬೇಡಿ. ಇದಕ್ಕಿಂತಾ ಅತಿ ಭೀಕರ, ಭಯಂಕರ ವಾತಾವರಣ, ಇನ್ನೊಂದು ಕಡೆಯೂ ನಿರ್ಮಾಣವಾಗಿದೆ.

ಇದನ್ನೂ ವೀಕ್ಷಿಸಿ:  ಹಿಜಾಬ್ ಗಲಾಟೆ ನಂತರ ಮತ್ತೆ ಸುದ್ದಿಯಾದ ಉಡುಪಿ: ಸಣ್ಣ ಘಟನೆ ಎಂದ ಕಾಂಗ್ರೆಸ್‌..!