ಮಕ್ಕಳ ವಿಚಾರಕ್ಕೆ ಗಂಡ ಹೆಂಡತಿ ಮಧ್ಯೆ ಸಮರ: ನಟಿ ರಂಭಾ ಬಾಳಲ್ಲಿ ಬಿರುಗಾಳಿ ಎದ್ದಿರೋದು ನಿಜನಾ

Published : Oct 22, 2024, 04:27 PM IST

ನಟ ರವಿಚಂದ್ರನ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಟಾಲಿವುಡ್ ನಟಿ ರಂಭಾ ತಮ್ಮ ಗಂಡನ ಜೊತೆಗಿನ ವಿಚ್ಛೇದನದ ವದಂತಿಗಳ ಬಗ್ಗೆ ಇತ್ತೀಚೆಗೆ ಮಾತನಾಡಿದ್ದು, ಊಹಾಪೋಹಗಳ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

PREV
16
ಮಕ್ಕಳ ವಿಚಾರಕ್ಕೆ ಗಂಡ ಹೆಂಡತಿ ಮಧ್ಯೆ ಸಮರ: ನಟಿ ರಂಭಾ ಬಾಳಲ್ಲಿ ಬಿರುಗಾಳಿ ಎದ್ದಿರೋದು ನಿಜನಾ

ರಂಭಾ ಟಾಲಿವುಡ್‌ನಲ್ಲಿ ಗ್ಲಾಮರ್ ರಾಣಿ. ಅವರು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಐಟಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ಯುವಕರ ಪಾಲಿನ ಕನಸಿನ ಹುಡುಗಿ ರಂಭಾ

26

ದಶಕಗಳ ಕಾಲ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ರಂಭಾ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅವರು ರವಿಚಂದ್ರನ್ ಅವರ ಓ ಪ್ರೇಮವೇ, ಪಾಂಡುರಂಗ ವಿಠಲ, ಸಾಹುಕಾರ ಹಾಗೂ ಶಿವರಾಜ್‌ಕುಮಾರ್ ಅವರ ಗಂಡುಗಲಿ ಕುಮಾರರಾಮ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿದ್ದಾರೆ ಜೊತೆಗೆ ತೆಲುಗಿನಲ್ಲಿ ಅವರು ಕೃಷ್ಣ, ಚಿರಂಜೀವಿ ಮತ್ತು ಜೂನಿಯರ್ ಎನ್‌ಟಿಆರ್‌ ಅವರಂತಹ ನಟರೊಂದಿಗೆ ಕೆಲಸ ಮಾಡಿದ್ದಾರೆ.

36
ರಂಭಾ ವದಂತಿಗಳಿಗೆ ಉತ್ತರಿಸಿದ್ದಾರೆ

ಇತ್ತೀಚೆಗೆ ರಂಭಾ ಅವರು ವಿಚ್ಛೇದನಕ್ಕೊಳಗಾಗುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ವದಂತಿಯ ಬಗ್ಗೆ ಈಗ ನಟಿ ಮನಬಿಚ್ಚಿ ಮಾತನಾಡಿದ್ದು,  ಇಂತಹ ಗಾಸಿಪ್‌ಗಳು ನೋವುಂಟುಮಾಡುತ್ತವೆ ಮತ್ತು ಇದು ಸುಳ್ಳು ಎಂದು ಹೇಳಿದರು. ತಾನು ಪತಿ ಮಕ್ಕಳ ಜೊತೆ ಸಂತೋಷವಾಗಿದ್ದೇನೆ ಆದರೆ ಎಲ್ಲಾ ಕುಟುಂಬಗಳಲ್ಲಿರುವಂತೆ ನಮ್ಮಲ್ಲೂ ಭಿನ್ನಾಭಿಪ್ರಾಯಗಳಿವೆ ಎಂದು ಸ್ಪಷ್ಟಪಡಿಸಿದರು. ಅದರಲ್ಲು ಮುಖ್ಯವಾಗಿ ಮಕ್ಕಳನ್ನು ಎಲ್ಲಿ ಹೇಗೆ ಬೆಳೆಸಬೇಕು ಎಂಬ ವಿಚಾರವವಾಗಿ ಎಂದು ಅವರು ಹೇಳಿದರು.

46

2010ರಲ್ಲಿ, ಅವರು ಕೆನಡಾ ಮೂಲದ ಶ್ರೀಲಂಕಾದ ತಮಿಳು ಉದ್ಯಮಿ ಇಂದ್ರಕುಮಾರ್ ಪದ್ಮನಾಥನ್ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾನೆ. 

56
ಮಕ್ಕಳನ್ನು ಎಲ್ಲಿ ಬೆಳೆಸಬೇಕು ಎಂಬ ಚರ್ಚೆ

ರಂಭಾ ತಮ್ಮ ಮಕ್ಕಳನ್ನು ತಮ್ಮ ಸಂಸ್ಕೃತಿಯೊಂದಿಗೆ ಬೆರೆಯುವುದಕ್ಕಾಗಿ ಅವರು ಭಾರತದಲ್ಲಿ ಬೆಳೆಯಬೇಕು ಎಂದು ಬಯಸುತ್ತಾರಂತೆ. ಆದರೆ ಅವರ ಪತಿ ಮಕ್ಕಳು ಉತ್ತರ ಅಮೆರಿಕದಲ್ಲಿ ಬೆಳೆಯಲ್ಲಿ ಎಂದು ಬಯಸುತ್ತಾರೆ. ಈ ವ್ಯತ್ಯಾಸವು ಚರ್ಚೆಗಳಿಗೆ ಕಾರಣವಾಗಿದೆ, ಆದರೆ ಪ್ರಮುಖ ಸಂಘರ್ಷಗಳಿಗೆ ಅಲ್ಲ ಎಂದು ರಂಭಾ ಹೇಳಿದ್ದಾರೆ. 

66

ಅವರು ಈ ವಿಚಾರವಾಗಿ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ ಎಂದು ವದಂತಿಗಳಿದ್ದವು, ರಂಭಾ ಗಂಡನಿಂದ ಆರ್ಥಿಕ ಬೆಂಬಲವನ್ನು ಬೇಡುತ್ತಿದ್ದಾರೆ. ನಿರ್ದೇಶಕ ಕೆ. ರಾಘವೇಂದ್ರ ರಾವ್ ಮಧ್ಯಸ್ಥಿಕೆ ವಹಿಸಿ, ರಂಭಾ ಅವರಿಗೆ ವಿಚ್ಛೇದನ ಬೇಡ ಎಂಬ ಸಲಹೆ ನೀಡಿದರು ಎಂದು ವರದಿಯಾಗಿದೆ. ಆದರೆ ಹಿಂದಿನ ಸಂದರ್ಶನದಲ್ಲಿ ಆದ ಸಣ್ಣ ಭಿನ್ನಾಭಿಪ್ರಾಯ ಇದು ಎಂದು ಸ್ಪಷ್ಟಪಡಿಸಿದರು ಎಂದು ವರದಿಯಾಗಿದೆ.

click me!

Recommended Stories