ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದ ನಟ ಕಿಶನ್ ಬಿಳಗಲಿ (Kishen Bilagali) ಮತ್ತು ಕಿರುತೆರೆ ನಟಿ ದಿವ್ಯಾ ಉರುಡುಗ ಮದುವೆ ಫೋಟೊಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಇದನ್ನ ನೋಡಿ ಶಾಕ್ ಆಗಿದ್ದಾರೆ. ನಿಜವಾಗಿಯೂ ಮದ್ವೆ ಆದ್ರಾ? ಹಾಗಿದ್ರೆ ಕೆಪಿ ಅರವಿಂದ್ ಗತಿ ಏನು ಅಂತ ಕೇಳ್ತಿದ್ದಾರೆ.
ಅಷ್ಟಕ್ಕೂ ಆಗಿರೋದು ಏನಂದ್ರೆ ಇದು ಸೀರಿಯಲ್ ಮದುವೆ. ನಿನಗಾಗಿ ಧಾರಾವಾಹಿಯಲ್ಲಿ (Ninagaagi Serial) ಸದ್ಯ ಅಶ್ವಿನ್ ಮತ್ತು ಸೂಪರ್ ಸ್ಟಾರ್ ರಚನಾ, ಮದುವೆಯ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಮದುವೆಯ ಸುಂದರ ಫೋಟೊಗಳು ಇದೀಗ ವೈರಲ್ ಆಗಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.
ಕಲರ್ಸ್ ಕನ್ನಡಲ್ಲಿ (Colors kannada)ಪ್ರಸಾರವಾಗುತ್ತಿರುವ ನಿನಗಾಗಿ ಸೀರಿಯಲ್ ತನ್ನ ವಿಭಿನ್ನ ಕಥೆಯ ಮೂಲಕ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ರಚನಾ, ಜೀವಾ ಮತ್ತು ಕೃಷ್ಣ ಪಾತ್ರ ಜನರಿಗೆ ತುಂಬಾನೆ ಇಷ್ಟವಾಗಿದೆ. ಸೂಪರ್ ಸ್ಟಾರ್ ರಚನಾಳಲ್ಲಿ ಅಮ್ಮನನ್ನು ಕಾಣುವ ಪುಟಾಣಿ ಕೃಷ್ಣ, ಅವರಿಬ್ಬರ ಮುದ್ದಾದ ಅನುಬಂಧ . ಜೀವಾ ಮತ್ತು ಅವರ ಮಾವನ ನಡುವಿನ ತಿಕ್ಕಾಟ. ಇದರಿಂದಾಗಿ ಜೊತೆ ಸೇರಿದ ರಚನಾ ಮತ್ತು ಜೀವಾ. ರಚನಾ ಪಾಲಿಗೆ ದೇವರಾಗಿರುವ ಅಮ್ಮನೇ ನಿಜವಾದ ವಿಲನ್. ಸದ್ಯ ಕೃಷ್ಣಾಗಾಗಿ ರಚನಾ ಅಶ್ವಿನ್ ಜೊತೆ ಮದುವೆಯಾಗೋದಕ್ಕೆ ಒಪ್ಪಿಗೆ ನೀಡಿದ್ದಾರೆ. ಇದು ಸೀರಿಯಲ್ ನ ಒಟ್ಟಾರೆ ಕಥೆ.
ಒಂದು ಕಡೆ ತನಗೆ ಇಷ್ಟವಿಲ್ಲದಿದ್ದರೂ, ಅಮ್ಮನಿಗಾಗಿ, ಕೃಷ್ಣನಿಗಾಗಿ ಮದುವೆಯಾಗುವ ರಚನಾ, ಇನ್ನೊಂದು ಕಡೆ ಮದುವೆ ನಿಲ್ಲಿಸಲು ಮನೆಯವರ ಹರ ಸಾಹಸ, ಮತ್ತೊಂದೆಡೆ, ತನಗೆ ಸ್ಟಾರ್ ಬೇಕೆನ್ನುವ ಕೃಷ್ಣಾ, ಇನ್ನೊಂದು ಕಡೆ ಕೃಷ್ಣಾಗಾಗಿ ರಚನಾ ಮಾಡಿದ ತ್ಯಾಗದ ಬಗ್ಗೆ ತಿಳಿದು ನೆರವಿಗಾಗಿ ಧಾವಿಸಿ ಬರುತ್ತಿದ್ದಾನೆ ಜೀವಾ. ಮುಂದೆ ಕಥೆ ಏನಾಗಲಿದೆ ಅನ್ನೋದು ಗೊತ್ತಿಲ್ಲ. ಇವತ್ತಿನ ಎಪಿಸೋಡ್ ನಲ್ಲಿ ಕಾದು ನೋಡಬೇಕು.
ಇದೆಲ್ಲದರ ಮಧ್ಯೆ ತೆರೆ ಮೇಲೆ ಒಬ್ಬರಿಗೊಬ್ಬರು ಕತ್ತಿ ಮಸೆಯುವ ವಿಲನ್ ಗಳು, ನಾಯಕಿ, ಮನೆಮಂದಿ, ತೆರೆ ಮೇಲೆ ಈ ಮದುವೆ ಎಪಿಸೋಡ್ ಗಳನ್ನು ಸಖತ್ ಆಗಿ ಎಂಜಾಯ್ ಮಾಡ್ತಾ, ಜೊತೆಯಾಗಿ ಮೋಜು ಮಸ್ತಿ ಮಾಡ್ತಿದ್ದಾರೆ. ಅದರಲ್ಲೂ ಕಿಶನ್ ಮತ್ತು ದಿವ್ಯಾ ಉರುಡುಗ (Divya Uruduga) ಮದ್ವೆ ಫೋಟೊ ತುಂಬಾನೆ ವೈರಲ್ ಆಗುತ್ತಿದ್ದು ಅಭಿಮಾನಿಗಳು ಶಾಕ್ ಆಗಿದ್ದಾರೆ.
ನಿನಗಾಗಿ ಧಾರಾವಾಹಿಯಲ್ಲಿ ಅಶ್ವಿನ್ ಪಾತ್ರದಲ್ಲಿ ನಟಿಸುತ್ತಿರುವ ನಟ, ಡ್ಯಾನ್ಸರ್ ಕಿಶನ್ ಬಿಳಗಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿದ್ದು, ತಮ್ಮ ಸಹ ನಟಿ ದಿವ್ಯಾ ಉರುಡುಗ ಹಾಗೂ ಇತರ ಕಲಾವಿದರು ಎಂಜಾಯ್ ಮಾಡುತ್ತಿರುವ ಫೋಟೊ ಇದಾಗಿದೆ.
ಮದುವೆ ಮಂಟಪದಲ್ಲಿ ಇಬ್ಬರೂ ಜೊತೆಯಾಗಿ ಕುಳಿತಿರುವ ಫೋಟೊ, ಅರಶಿನ ಶಾಸ್ತ್ರದ ಫೋಟೊ, ಸೀರಿಯಲ್ ನಟ ನಟಿಯರು ಜೊತೆಯಾಗಿ ಪೋಸ್ ಕೊಟ್ಟು, ನಕ್ಕು ನಲಿಯುತ್ತಿರುವ ಫೋಟೊ ಇದಾಗಿದೆ. ಇದು ನಿಜವಾದ ಮದ್ವೆ ಫೋಟೊ ಅಲ್ಲ ಅನ್ನೋದು ಗೊತ್ತಾಗಿ ಅಭಿಮಾನಿಗಳು ಸದ್ಯ ಖುಷಿಪಟ್ಟಿದ್ದಾರೆ.