ನವಜಾತ ಮಗುವನ್ನು ರೈಲಿನಲ್ಲಿಟ್ಟು ತಾಯಿ ಪರಾರಿ, ರೈಲ್ವೇ ಪೇದೆಯಿಂದ ಬದುಕಿತು ಕಂದಮ್ಮ!

By Chethan Kumar  |  First Published Oct 22, 2024, 4:55 PM IST

ರೈಲಿನ ಬೋಗಿಯಲ್ಲಿ ಮಗು ಸತತವಾಗಿ ಅಳುತ್ತಿರುವ ಶಬ್ದ ಕೇಳಿ ಹೊದಿಕೆ ತೆಗೆದು ನೋಡಿದಾಗ 1 ದಿನದ ನವಜಾತ ಮಗು ಅನಾಥವಾಗಿ ಅಳುತ್ತಿರುವುದು ಪತ್ತೆಯಾಗಿದೆ. 


ಬಾರ್ಮರ್(ಅ.22) ರೈಲು ತಕ್ಕ ಸಮಯಕ್ಕೆ ಹೊರಟಿದೆ. ಎಲ್ಲಾ ಪ್ರಯಾಣಿಕರು ಸೀಟಿನಲ್ಲಿ ಕುಳಿತು ಪ್ರಯಾಣ ಆರಭಿಸಿದ್ದಾರೆ. ಜನರಲ್ ಬೋಗಿ ತುಂಬಿ ತುಳುಕುತ್ತಿದೆ. ಸ್ಟೇಶನ್‌ಗಳಲ್ಲಿ ರೈಲು ನಿಲುಗಡೆಯಾಗತ್ತಿದೆ. ಮತ್ತೆ ಪ್ರಯಾಣ ಮುಂದುವರಿಯುತ್ತಿದೆ. ಹೀಗೆ ರೈಲು ನಿಲ್ದಾಣದಲ್ಲಿ ನಿಲುಗಡೆಯಾದಗ ಮಗು ಅಳುತ್ತಿರುವ ಶಬ್ದ ಕೇಳಿಸಿದೆ. ಎಲ್ಲಾ ಪ್ರಯಾಣಿಕರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಕಾರಣ ರೈಲು ಪ್ರಯಾಣದಲ್ಲಿ ಮಗುವಿನ ಅಳು, ಕಿರುಚಾಟಾ ಸಾಮಾನ್ಯ. ಆದರೆ ರೈಲ್ವೇ ಹೆಡ್‌ ಕಾನ್ಸ್‌ಸ್ಟೇಬಲ್‌ಗೆ ಈ ಮಗುವಿನ ಅಳುವಿನ ಶಬ್ದ ಅನುಮಾನ ಮೂಡಿಸಿದೆ. ತಕ್ಷಣವೇ ರೈಲು ಬೋಗಿಗೆ ಹತ್ತಿದ್ದಾರೆ. ಮಗುವಿನ ಶಬ್ದ ಕೇಳಿಸುತ್ತಿದ್ದ ಹೊದಿಕೆ ತೆರೆದು ನೋಡಿದರೆ 1 ದಿನದ ನವಜಾತ ಮಗು ಪತ್ತೆಯಾಗಿದೆ. ಈ ಘಟನೆ ಬಾರ್ಮರ್ ಹರಿದ್ವಾರ ರೈಲಿನಲ್ಲಿ ನಡೆದಿದೆ.

ರಾಜಸ್ಥಾನದ ಬಾರ್ಮರ್‌ನಿಂದ ಉತ್ತರಖಂಡದ ಹರಿದ್ವಾರಕ್ಕೆ ಪ್ರಯಾಣಿಸುತ್ತಿದ್ದ ರೈಲು. ಈ ರೈಲಿನ ಎಸ್4 ಕೋಚ್ 71ನೇ ಬರ್ತ್ ನಂಬರ್‌ನಲ್ಲಿ ಈ ಮಗು ಪತ್ತೆಯಾಗಿದೆ. ಹೆಡ್ ಕಾನ್ಸ್‌ಸ್ಟೇಬಲ್ ಭೀಮರಾಮ್ ಪೂನದ್ ಮಗುವನ್ನು ರಕ್ಷಿಸಿದ್ದಾರೆ. ಅನಾಥವಾಗಿ ಮಲಗಿಸಿದ್ದ ಮಗುವನ್ನು ಪತ್ತೆ ಹಚ್ಚಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಅಳುತ್ತಾ ತೀವ್ರ ಅಸ್ವಸ್ಥಗೊಂಡಿದೆ. ಇತ್ತ ಹಸಿವಿನಿಂದಲೂ ಬಳಲಿದೆ. ರೈಲಿನಲ್ಲಿ ಮಗುವನ್ನು ಬಿಟ್ಟು 8 ಗಂಟೆಗೂ ಹೆಚ್ಚು ಸಮಯವಾಗಿದೆ. ಕಾರಣ ಕನಿಷ್ಠ 8 ಗಂಟೆಗಳಿಂದ ಮಗುವಿನ ಹೊಟ್ಟೆಯಲ್ಲಿ ಏನೂ ಇಲ್ಲ. ಹೀಗಾಗಿ ಮಗು ತೀವ್ರ ಅಸ್ವಸ್ಥಗೊಂಡಿದೆ. 

Tap to resize

Latest Videos

ಪೊದೆಯಲ್ಲಿ ಬಿಸಾಡಿದ್ದ ನವಜಾತ ಹೆಣ್ಣು ಮಗು ರಕ್ಷಿಸಿ ದತ್ತು ಪಡೆದ ಪೊಲೀಸ್ ಅಧಿಕಾರಿ!

ರೈಲು ಬಾರ್ಮರ್ ಜಿಲ್ಲೆಯ ನಿಲ್ದಾಣದಲ್ಲಿ  ಭೀಮರಾಮ್ ಪೂನದ್ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಪೋಷಕರಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ ಪೋಷಕರ ಪತ್ತೆಯಾಗಿಲ್ಲ. ಅನಾಥವಾಗಿ ಮಗುವನ್ನು ಬಿಟ್ಟು ಹೋಗಿರುವವರು ಯಾರು ಅನ್ನೋ ಪರಿಶೀಲಿಸಲು ರೈಲ್ವೇ ಪೊಲೀಸ್ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಇದುವರೆಗೂ ಪೋಷಕರ ಪತ್ತೆಯಾಗಿಲ್ಲ. ಇಷ್ಟೇ ಅಲ್ಲ ಈ ಮಗು ತಮ್ಮದು ಎಂದು ಯಾವ ಪೋಷಕರು ಮುಂದೆ ಬಂದಿಲ್ಲ.  

ಮಗುವಿನ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಬಾರ್ಮರ್ ಜಿಲ್ಲಾಸ್ಪತ್ರೆ ವೈದ್ಯರ ತಂಡ ತೀವ್ರ ನಿಘಾವಹಿಸಿದೆ. ಮಗುವಿಗೆ ತಾಯಿ ಹಾಲು, ಆರೈಕೆ ಸಿಗದೆ ಅಸ್ವಸ್ಥಗೊಂಡಿದೆ. ಮುಂದಿನ 24 ಗಂಟೆ ತನ ಮಗುವಿನ ಆರೋಗ್ಯದ ಮೇಲೆ ತೀವ್ರ ನಿಘಾಹಿಸಲಾಗುತ್ತದೆ. ಚೇತರಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಲಾಗುತ್ತದೆ ಎಂದು ವೈದ್ಯ ಹರಿಶ್ ಚವ್ಹಾಣ್ ಹೇಳಿದ್ದಾರೆ.

ಅನಾಥ ಮಗುವಿಗೆ ಮಹಿಳಾ ಪೇದೆ ಎದೆಹಾಲು!
 

click me!