ಕಾಂಗ್ರೆಸ್ ನಾಯಕನ ಮೇಲೆ ಅಪರಿಚಿತನ ದಾಳಿ, ಸ್ಥಳದಲ್ಲೆ ಪ್ರಾಣಬಿಟ್ಟ ಮುಖಂಡ!

By Chethan Kumar  |  First Published Oct 22, 2024, 4:09 PM IST

ಆಡಳಿತರೂಢ ಕಾಂಗ್ರೆಸ್ ಪಕ್ಷದ ನಾಯಕನ ಮೇಲೆ ಅಪರಿಚಿತನ ದಾಳಿಯಾಗಿದೆ. ವಾಹನದಲ್ಲಿ ತೆರಳುತ್ತಿದ್ದ ವೇಳೆ ಆಗಮಿಸಿದ ಅಪರಿಚಿತ ಅಪಘಾತ ಮಾಡಿ ಬಳಿಕ ಚಾಕು ಇರಿಯಲಾಗಿದೆ.


ಕರೀಂನಗರ(ಅ.22) ಮುಂಬೈನಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಇದೀಗ ತೆಲಂಗಾಣದ ಕಾಂಗ್ರೆಸ್ ನಾಯಕನ ಹತ್ಯೆಯಾಗಿದೆ. ಅಪರಿಚಿತ ದಾಳಿಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಾರು ಗಂಗಾರೆಡ್ಡಿ ಮೃತಪಟ್ಟಿದ್ದಾರೆ. ಜಗ್ತಿಯಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನಾಯಕನ ವಾಹನಕ್ಕೆ ಗುದ್ದಿದ ಅಪರಿಚಿತ ಬಳಿಕ ಚಾಕು ಮೂಲಕ ದಾಳಿ ಮಾಡಿ ಪರಾರಿಯಾಗಿದ್ದಾನೆ. ಗಂಗಾರೆಡ್ಡಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

56 ವರ್ಷದ ಮಾರು ಗಂಗಾರೆಡ್ಡಿ ಜಬಿತಾಪುರ್ ಗ್ರಾಮದಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗಂಗಾರೆಡ್ಡಿ ತಮ್ಮ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರಿನ ಮೂಲಕ ಆಗಮಿಸಿದ ಅಪರಿಚಿತ ಅಪಘಾತ ಮಾಡಿದ್ದಾನೆ. ಕಾರು ಡಿಕ್ಕಿಯಾದ ರಭಸಕ್ಕೆ ಗಂಗಾರೆಡ್ಡಿ ರಸ್ತೆಯಲ್ಲೇ ಬಿದ್ದಿದ್ದಾರೆ. ಈ ವೇಳೆ ಕಾರು ನಿಲ್ಲಿಸಿದ ಬಂದ ಅಪರಿಚಿತ ಚಾಕು ಮೂಲಕ ದಾಳಿ ನಡೆಸಿದ್ದಾನೆ. 

Tap to resize

Latest Videos

ರಾಕೇಶ್ ಸಿದ್ದರಾಮಯ್ಯ ಸಾವಿಗೆ ಕಾರಣ ಯಾರು? ಆರೋಪ ಪ್ರತ್ಯಾರೋಪದ ನಡುವೆ ಸಿಡಿದ ಬಾಂಬ್!

ಎಂಎಲ್‌ಸಿ ಜೀವನ್‌ರೆಡ್ಡಿ ಆಪ್ತರಾಗಿರುವ ಗಂಗಾರೆಡ್ಡಿ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲೇ ಬಿದ್ದಿದ್ದರೆ. ಈ ವೇಳೆ ಅಪರಿಚಿತ ಪರಾರಿಯಾಗಿದ್ದಾನೆ. ಇತ್ತ ಸ್ಥಳೀಯರು ಆಗಮಿಸಿ ಗಂಗಾರೆಡ್ಡಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಳೇ ವೈರತ್ವದ ಕಾರಣ ಈ ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಬಳಿಕ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ತಂಡ ರಚಿಸಿದ್ದಾರೆ. 

ಇದೀಗ ಈ ಘಟನೆ ಭಾರಿ ಆತಂಕಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ ಜಗ್ತಿಯಾಲ್ ಜೆಲ್ಲಿಯಲ್ಲಿ ವಿಧಾನ ಪರಿಷತ್ ಸದಸ್ಯ ಜೀವನ್ ರೆಡ್ಡಿ ಪ್ರತಿಭಟನೆ ಆರಂಭಿಸಿದ್ದಾರೆ. ಸ್ಥಳೀಯ ಆಡಳಿತದ ವೈಫಲ್ಯ ಎಂದು ಆರೋಪಿಸಿದ್ದಾರೆ. ಗಂಗಾರೆಡ್ಡಿ ವಿರುದ್ದ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಜಗ್ತಿಯಾಲ್ ಜಿಲ್ಲೆಯಲ್ಲಿ ಈ ರೀತಿ ಹಲವು ಘಟನೆಗಳು ಮರಳುಕಳಿಸುತ್ತಿದೆ. ಆದರೆ ಸುರಕ್ಷತೆ ಸಿಗುತ್ತಿಲ್ಲ ಎಂದು ಸ್ಥಳೀಯ ಆಡಳಿತ ವಿರುದ್ಧ ಆರೋಪಿಸಿದ್ದಾರೆ. 

ವಿಶೇಷ ಅಂದರೆ ತಮ್ಮದೇ ಸರ್ಕಾರ ತೆಲಂಗಾಣದಲ್ಲಿ ಆಡಳಿತದಲ್ಲಿದೆ. ಹೀಗಾಗಿ ಈ ಘಟನೆ ಕಾಂಗ್ರೆಸ್ ಸರ್ಕಾರಕ್ಕೂ ತೀವ್ರ ಹಿನ್ನಡೆ ತಂದಿದೆ. ಸುರಕ್ಷತೆ ಹಾಗೂ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರಿಗೆ ರಕ್ಷಣೆ ಇಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದೆ. ಸಾಮಾನ್ಯ ಜನರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.

ಬಿಷ್ಣೋಯ್ ವಿರುದ್ಧ ವೈರತ್ವ ಅಂತ್ಯಕ್ಕೆ 5 ಕೋಟಿ ರೂ, ಸಲ್ಮಾನ್‌ಗೆ ಬಂದ ಬೆದರಿಕೆ ಮೆಸೇಜ್‌ನಲ್ಲಿ ಟ್ವಿಸ್ಟ್!

click me!